ಧಾರವಾಡದಲ್ಲಿ ನಿಲ್ಲುತ್ತಿಲ್ಲ ಜಾನುವಾರಗಳ ಕಳ್ಳತನ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿವೆ ಲಕ್ಷ ಲಕ್ಷ ರೂಪಾಯಿ ಬೆಲೆಬಾಳುವ ಜಾನುವಾರಗಳ ಕಳ್ಳತನ ಆತಂಕದಲ್ಲಿ ರೈತರು…..

Suddi Sante Desk

ಧಾರವಾಡ –

ಧಾರವಾಡ ಹಾಗೂ ಸುತ್ತ ಮುತ್ತಲೂ ದಿನದಿಂದ ದಿನಕ್ಕೆ ಜಾನುವಾರಗಳ ಕಳ್ಳತನ ಪ್ರಕರಣಗಳು ಹೆಚ್ಚುತ್ತಲೆ ಇವೆ. ಕಳೆದ ಒಂದು ತಿಂಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಡೆದಿದ್ದು ಇನ್ನೂ ನಡೆಯುತ್ತಲೆ ಇವೆ. ಇದಕ್ಕೆ ಸಾಕ್ಷಿ ನುಗ್ಗಿಕೇರಿ ಗ್ರಾಮದಲ್ಲಿ ನಡೆದ ಎತ್ತುಗಳು ಕಳ್ಳತನ ಪ್ರಕರಣ. ರಾಯಪ್ಪ ತಲವಾಯಿ ಎಂಬುವವರಿಗೆ ಸೇರಿದ ಮುಡ್ಲಾ ಎತ್ತುಗಳು ಕಳ್ಳತನ ವಾಗಿವೆ.

ಸುಮಾರು 1.5 ಲಕ್ಷ ಮೌಲ್ಯದ ಎತ್ತುಗಳನ್ನ ಕಳ್ಳತನ ಮಾಡಿದ್ದಾರೆ ಖದೀಮರು.ಕಳೆದ ರಾತ್ರಿ ನುಗ್ಗಿಕೇರಿ‌ ಗ್ರಾಮದ ಹೊಲದ ಮನೆಯಲ್ಲಿ ನಡೆದ ಘಟನೆ. ಒಂದೇ ವಾರದಲ್ಲಿ ಎರಡನೇ ಘಟನೆ ನಡೆದಿವೆ. ಕಳೆದ ರವಿವಾರವಷ್ಟೇ ಧಾರವಾಡದ ಯಾದವಾಡ ಗ್ರಾಮದಲ್ಲಿ ೪ ಆಕಳು, ಗರಗ ಗ್ರಾಮದಲ್ಲಿ ಹಾಗೇ ಮುಗಳಿ ಸೇರಿದಂತೆ ಹಲವೆಡೆ ಕಳ್ಳತನ ಪ್ರಕರಣ ಗಳು ನಡೆದಿವೆ.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆಗಳಾಗಿದ್ದು ಇದರಿಂದಾಗಿ ರೈತರು ಆತಂಕಗೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.