ಧಾರವಾಡ –
ಯೊಗೇಶಗೌಡ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐ ಅಧಿಕಾರಿಗಳು ಮತ್ತೇ ಚುರುಕುಗೊಳಿಸಿದ್ದಾರೆ. ಈಗಾಗಲೇ ಯೊಗೇಶಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಜೈಲು ಸೇರಿದ್ರು ಸುಮ್ಮನೇ ಕುಳಿತುಕೊಳ್ಳದ ಸಿಬಿಐ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈಗಾಗಲೇ ಹಲವು ಬಾರಿ ಬಿಡುವಿಲ್ಲದೇ ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿಗೆ ಸಿಬಿಐ ಮತ್ತೇ ಬುಲಾವ್ ನೀಡಿದೆ.
ಸಿಬಿಐ ಅಧಿಕಾರಿಗಳು ವಿಚಾರಣೆಗೆ ಬರಲು ಹೇಳುತ್ತಿದ್ದಂತೆ ಹುಬ್ಬಳ್ಳಿಯಿಂದ ವಿಜಯ ಕುಲಕರ್ಣಿ ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ಆಗಮಿಸಿ ಸಿಬಿಐ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು.
ಇನ್ನೂ ಇವರೊಂದಿಗೆ ವಿನಯ ಕುಲಕರ್ಣಿ ಆಪ್ತ ಸಹಾಯಕರಾಗಿದ್ದ ಸೋಮು ನ್ಯಾಮಗೌಡ ಗೆ ಸಿಬಿಐ ಅಧಿಕಾರಿಗಳು ಬುಲಾವ್ ನೀಡಿದ್ದು ಇಂದು ಇವರು ವಿಚಾರಣಗೆ ಹಾಜರಾದರು.
ಇಬ್ಬರಿಗೂ ಸಿಬಿಐ ಅಧಿಕಾರಿಗಳು ಪುಲ್ ಡ್ರೀಲ್ ಮಾಡುತ್ತಿದ್ದು ಇದರೊಂದಿಗೆ ಸಂಧಾನ ಮಾಡಿದ ಆರೋಪ ಎದುರಿಸುತ್ತಿರುವ ಪೊಲೀಸ್ ಅಧಿಕಾರಿ ತುಳಜಪ್ಪ ಸುಲ್ಪಿ ಕೂಡಾ ನಿನ್ನೇಯಿಂದ ವಿಚಾರಣೆಗೆ ಹಾಜರಾಗಿದ್ದು ಇಂದು ಕೂಡಾ ಸಿಬಿಐ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಇದರೊಂದಿಗೆ ಸಿಬಿಐ ಅಧಿಕಾರಿಗಳು ತಮ್ಮ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ