ಧಾರವಾಡ –
ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಈಗಾಗಲೇ ಜೈಲು ಸೇರಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತ ಸಹಾಯಕ ಆಗಿದ್ದ ಸೋಮು ನೇಮಗೌಡ ಅವರನ್ನು ವಶಕ್ಕೆ ತೆಗೆದುಕೊಂಡಿರುವ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿ ನಂತರ ಬಂಧಿಸಿದ್ದಾರೆ
ಗದಗ ನ ಮನೆಯಲ್ಲಿಯೇ ವಶಕ್ಕೆ ತಗೆದುಕೊಂಡಿ ರುವ ಸಿಬಿಐ ಅಧಿಕಾರಿಗಳು ಅಲ್ಲಿಂದ ಧಾರವಾಡಗೆ ಕರೆದುಕೊಂಡು ಬಂದು ನಂತರ ಸೋಮು ನ್ಯಾಮ ಗೌಡರನ್ನ ಉಪನಗರ ಪೋಲಿಸ್ ಠಾಣೆಯಲ್ಲಿ ಬಂಧನ ಮಾಡಿ ನಂತರ ಕೋವಿಡ್ ಪರೀಕ್ಷೆ ಮಾಡಿ ಸಿರುವ ಸಿಬಿಐ ಅಧಿಕಾರಿಗಳು ಮುಂದಿನ ಕಾರ್ಯಕ್ಕೆ ಕರೆದುಕೊಂಡು ಹೋಗಲು ಸಿದ್ದತೆ ಯನ್ನು ಮಾಡಿ ಕೊಂಡಿದ್ದಾರೆ
ಗದಗ ನಿಂದ ನೇರವಾಗಿ ಧಾರವಾಡದ ಉಪನಗರ ಪೋಲಿಸ್ ಠಾಣೆಗೆ ಕರೆತಂದ ಸಿಬಿಐ ಅಧಿಕಾರಿಗಳು ಸಿಬಿಐ ಅಧಿಕಾರಿ ರಾಕೇಶ್ ರಂಜನ್ ನೇತೃತ್ವದ ತಂಡ ಬಂಧನ ಮಾಡಿದ್ದಾರೆ.ಕೆ ಎ ಎಸ್ ಅಧಿಕಾರಿ ಯಾಗಿದ್ದಾರೆ ಸೋಮು ನ್ಯಾಮಗೌಡರ.ಇನ್ನೂ ಠಾಣೆಯ ಎದುರು ಬ್ಯಾರೆಕೆಡ್ ಗಳನ್ನ ಹಾಕಿ ಪೋಲಿಸ್ ಬಂದೂಬಸ್ತ್ ಮಾಡಿದ್ದು ಕಂಡು ಬಂದಿತು.