ಹುಬ್ಬಳ್ಳಿ –
ಹುಬ್ಬಳ್ಳಿ ಧಾರವಾಡ ಸಿಸಿಐಬಿ ಪೊಲೀಸರು ಕಾರ್ಯಾಚರಣೆ ಮಾಡಿ ಮನೆ ಕಳ್ಳತನ ಹಾಗೂ ಮೋಟಾರ್ ಸೈಕಲ ಕಳ್ಳತನ ಮಾಡುತ್ತಿದ್ದವರನ್ನು ಬಂಧಿಸಿದ್ದಾರೆ.ಇತ್ತೀಚಿನ ದಿನಗಳಲ್ಲಿ ಹುಬ್ಬಳ್ಳಿ ಧಾರವಾಡ ಅವಳಿ ಮಹಾನಗರಗಳಲ್ಲಿ ಇಂಥಹ ಪ್ರಕರಣಗಳು ಹೆಚ್ಚಾಗುತ್ತಿದ್ದವು. ಈ ನಿಟ್ಟಿನಲ್ಲಿ ಕಾರ್ಯಾಚರಣೆ ಮಾಡಿದ ಸಿಸಿಬಿಐ ಪೊಲೀಸರು ಇಬ್ಬರು ಖತರ್ನಾಕ್ ಖದೀಮರನ್ನು ಬಂಧಿಸಿದ್ದಾರೆ.

ಹಸನ್ ಬೇಗ್ ,ಆಸೀಫ್ ಬೇಗ್, ಬಂಧಿತ ಆರೋಪಿಗಳಾಗಿದ್ದಾರೆ. ಇಬ್ಬರು ಸಹೋದರರಾಗಿದ್ದು ಉಣಕಲ್ ಸಿದ್ದರಾಮೇಶ್ವರನಗರ ಟಿಂಬರ್ ಯಾರ್ಡ ಸ್ಲಂ ನಿವಾಸಿಗಳಾಗಿದ್ದಾರೆ.

ಇಬ್ಬರು ಬಂಧಿತ ಸಹೋದರರಿಂದ ಒಟ್ಟು 5,13.050 ರೂಪಾಯಿ ಮೌಲ್ಯದ ವಸ್ತುಗಳನ್ನು ಹಾಗೂ ಕೃತ್ಯಕ್ಕೆ ಬಳಿಸಿದ ದ್ವಿಚಕ್ರ ವಾಹನ, ಕಳ್ಳತನ ಮಾಡಿದ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಸಿಐಬಿ ಮತ್ತು ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಗಳಾದ ಭರತ್‌ರೆಡ್ಡಿ, ಅಲ್ತಾಪ್ ಮುಲ್ಲಾ, ಎಂ ಎಂ ನದಾಫ ರವರ ನೇತೃತ್ವದಲ್ಲಿ ಸಿಬ್ಬಂದಿ ಗಳಾದ ಎ ಎಸ್ ಐ ಶಿವಾಜಿ ಸಾಳಂಕೆ, ಎಂ ಎಚ್ ಶಿವರಾಜ,ಎಂ ಎಸ್ ಚಿಕ್ಕಮಠ, ಎಸ್ ಪಿ.ಲಮಾಣಿ, ನೀಲಗಾರ, ಎಲ್ ವಿ ಗಾಣದಾಳ, ಅನಿಲಕುಮಾರ ಹುಗ್ಗಿ ,ಐ ಕೆ ಅತ್ತಾರ, ಆರ್ ಎಸ್ ಗುಂಜಳ, ಡಿ ಎನ್ ಗುಂಡಗಾಯಿ,, ಎಸ್ ಎಚ್ ಕೆಂಪೊಡಿ, ಎ ಆರ್ ಮರಿಯಪ್ಪನವರ, , ಬಿ ವಿ ಸಣ್ಣಪ್ಪನವರ, ರಾಜು,ರಾಘವೇಂದ್ರ ಬಡಂಕರ್ ಬಿಷ್ಟಂಡನವರ ,ರವಿ ,ಸಂತೋಷ ಇಚ್ಚಂಗಿ,ವಿಜಯ, ಮತ್ತು ಇತರೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಅಣ್ಣ ತಮ್ಮನನ್ನು ಜೈಲಿಗೆ ಕಳಿಸಿದ್ದಾರೆ.ಇನ್ನೂ ಉತ್ತಮವಾಗಿ ಕೆಲಸ ಮಾಡಿದ ಎರಡು ಟೀಮ್ ಗಳಿಗೆ ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ನಗರ ರವರು ಸದರಿಯವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿದ್ದಾರೆ.
