ಹುಬ್ಬಳ್ಳಿ ಧಾರವಾಡ
ಬೆಳಕಿನ ಹಬ್ಬ ದೀಪಾವಳಿಯನ್ನು ಧಾರವಾಡ ಜಿಲ್ಲೆಯಲ್ಲೂ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು. ದೀಪಾವಳಿ ಹಬ್ಬ ಆರಂಭಗೊಂಡಿದ್ದು ಎಲ್ಲರೂ ಈಗಾಗಲೇ ಹಬ್ಬದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದು ಇಂದಿನಿಂದಲೇ ಹಬ್ಬದ ಆಚರಣೆ ಜಿಲ್ಲೆಯಲ್ಲೆಡೆ ಕಂಡು ಬರುತ್ತಿದೆ. ಮೊದಲನೇಯ ದಿನವಾದ ಇಂದು ಮನೆ ಮನೆಗಳಲ್ಲಿ ಹಬ್ಬದ ವಾತಾವರಣ ಕಂಡು ಬಂದಿತು.

ರೈತರು ತಮ್ಮ ತಮ್ಮ ಕೃಷಿ ವಸ್ತುಗಳನ್ನು ಅದರಲ್ಲೂ ಟ್ಯಾಕ್ಟರ್ ಗಳನ್ನು ಮನೆಗಳ ಮುಂದೆ ನಿಲ್ಲಿಸಿ ಕುಟುಂಬ ಸಮೇತರಾಗಿ ಪೂಜೆ ಮಾಡಿರುವ ಚಿತ್ರಣ ಕಂಡು ಬಂದಿತು. ಇನ್ನೂ ಕೆಲವೆಡೆ ಇಂದೇ ಅಂಗಡಿ ಮುಂಗಟ್ಟುಗಳಲ್ಲಿ ಹಾಗೇ ಕಚೇರಿ ಹೊಟೇಲ್ ಹೀಗೆ ಎಲ್ಲೆಂದರಲ್ಲಿಯೇ ಅವರವರ ಅನೂಕೂಲಕ್ಕೇ ತಕ್ಕಂತೆ ಪೂಜೆಯನ್ನು ಮಾಡಿದ್ರು.

ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಲ್ಲಿ ದೀಪಾವಳಿ ಹಬ್ಬದ ಕಳೆ ಕಟ್ಟಿದ್ದಲ್ಲದೇ ಗ್ರಾಮೀಣ ಪ್ರದೇಶಗಳಲ್ಲೂ ಕೂಡಾ ಕುಟುಂಬ ಸಮೇತರಾಗಿ ಹಬ್ಬವನ್ನು ಆಚರಣೆ ಮಾಡಿರುವ ದೃಶ್ಯಗಳು ಕಂಡು ಬಂದವು. ಹೊಸ ಬಟ್ಟೆಗಳೊಂದಿಗೆ ಕುಟುಂಬ ಸಮೇತರಾಗಿ ಜನತೆ ಇಂದು ಹಬ್ಬವನ್ನು ಆಚರಣೆ ಮಾಡಿದ್ದು ಕಂಡು ಬಂದಿತು.

ಇನ್ನೂ ಧಾರವಾಡದ ಕೆಲಗೇರಿ ಬಡಾವಣೆಯಲ್ಲೂ ದೀಪಾವಳಿ ಹಬ್ಬವನ್ನು ರೈತಾಪಿ ಕುಟುಂಬವದವರು ವಿಶೇಷವಾಗಿ ಆಚರಣೆ ಮಾಡಿದ್ದು ಕಂಡು ಬಂದಿತು.ಟ್ಯಾಕ್ಟರ್ ಸೇರಿದಂತೆ ಎಲ್ಲಾ ವಾಹನಗಳನ್ನು ಮನೆಯ ಮುಂದೆ ನಿಲ್ಲಿಸಿದ ರೈತರು ಅವುಗಳಿಗೆ ಕಬ್ಬು ಹೂ ಮಾವಿನ ತೋರಣ ಬಾಳೆಕಂಬ ಗಳಿಂದ ಹಾಗೇ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿ ಕುಟುಂಬ ಸಮೇತರಾಗಿ ದೀಪಾವಳಿ ಆಚರಣೆ ಮಾಡಿದ್ದು ಕಂಡು ಬಂದಿತು.

ಕೆಲಗೇರಿ ಗ್ರಾಮದ ರೈತ ಮಂಜು ಸಾದರ ಮನೆಯಲ್ಲಂತೂ ವಿಶೇಷ ದೀಪಾವಳಿ ಆಚರಣೆ ಕಂಡು ಬಂದಿತು. ಮನೆಯ ಮುಂದೆ ಟ್ಯಾಕ್ಟರ್ ಗೆ ಅಲಂಕಾರ ಮಾಡಿ ಅಲ್ಲಿಯೇ ಲಕ್ಷ್ಮೀ ದೇವಿಯನ್ನು ಕೂಡಿಸಿ ಬಡಾವಣೆಯ ರೈತರು ಬಂಧುಗಳು ಆಪ್ತರು ಸೇರಿದಂತೆ ಎಲ್ಲರೂ ಕೂಡಾ ಪಾಲ್ಗೊಂಡು ಸಾಮೂಹಿಕವಾಗಿ ಪೂಜೆಯನ್ನು ಮಾಡಿ ಮಂತ್ರಗಳೊಂದಿಗೆ ಮಂಗಳಾರತಿಯನ್ನು ಮಾಡಿ ಲಕ್ಷ್ಮೀ ದೇವಿಯ ಪೂಜೆಯನ್ನು ಮಾಡಿದ್ರು.

ಈ ಪೂಜೆಯಲ್ಲಿ ಗಂಗನಗೌಡ ಪಾಟೀಲ್, ರಾಚಯ್ಯ ಗುಡ್ಡದಮಠ,ದ್ಯಾಮಪ್ಪ ಸಾದರ,ರಾಜನಗೌಡ ಹಳೇಮನಿ,ನಾಗಯ್ಯ ಪೂಜಾರ ಮಂಜು ಸಾದರ,ಮಂಜುನಾಥ ಗಡದನ್ನವರ ಚಿದಾನಂದ ಮಂಟೂರ,ಮೈಲಾರ ಹಳೇಗೌಡರ,ಸಂಗು ಬಡಿಗೇರ,ಕಲ್ಮೇಶ ನೀರಲಕಟ್ಟಿ ಸೇರಿದಂತೆ ಹಲವರು ಪಾಲ್ಗೊಂಡಿದ್ದು ಕಂಡು ಬಂದಿತು. ಇದರೊಂದಿಗೆ ಅವಳಿ ನಗರದಲ್ಲಿ ಹಾಗೇ ಧಾರವಾಡ ಜಿಲ್ಲೆಯಲ್ಲೂ ಸಡಗರ ಸಂಭ್ರಮದಿಂದ ದೀಪಾವಳಿ ಆಚರಣೆ ಕಂಡು ಬಂದಿತು.