This is the title of the web page
This is the title of the web page

Live Stream

June 2023
T F S S M T W
1234567
891011121314
15161718192021
22232425262728
2930  

| Latest Version 8.0.1 |

ಧಾರವಾಡ

26ನೇ ಯುವ ಜನೋತ್ಸವಕ್ಕೆ ಸಂಭ್ರಮದ ತೆರೆ ದೇಶದಲ್ಲಿಯೇ ಮಾದರಿ ಯಶಸ್ವಿ ಜನೋತ್ಸವಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರಿಗೆ ಗಣ್ಯ ರಿಂದ ಅಭಿನಂದನೆ ಮಹಾಪೂರ…..


ಧಾರವಾಡ

ಯುವಕರಿಂದಲೇ ದೇಶದ ಬದಲಾವಣೆ ಸಾಧ್ಯ ಎಂದು ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದರು.ಧಾರವಾಡ ಕೃಷಿ ವಿಶ್ವ ವಿದ್ಯಾಲಯದ  ಸಭಾ ಭವನದಲ್ಲಿ ನಡೆದ ರಾಷ್ಟ್ರೀಯ ಯುವ ಜನೋತ್ಸವ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು

ಕೇಂದ್ರ ಯುವ ಸಬಲೀಕರಣ ಇಲಾಖೆ ಹಾಗೂ ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಮಾತನಾಡಿ ದಾರವಾಡದಲ್ಲಿ ನಡೆದ 26ನೇ ರಾಷ್ಟ್ರೀಯ ಯುವ ಜನೋತ್ಸವದಲ್ಲಿ ದೇಶದ ವಿವಿಧದೆಯಿಂದ ಆಗಮಿಸಿ ಪಾಲ್ಗೊಂಡು ಯಶಸ್ವಿಗೊಳಿಸಿದ್ದಿರಿ ತಮಗೆಲ್ಲ ಅಭಿನಂದನೆಗಳು ಎಂದರು.

26ನೇ ರಾಷ್ಟ್ರೀಯ ಯುವ ಜನೋತ್ಸವ ಅತ್ಯಂತ ಯಶಸ್ವಿಗೊಂಡಿದೆ. ಹಸಿರು ಮಯವಾದ ಕಾರ್ಯ ಕ್ರಮ ಮತ್ತು ಪ್ಲಾಸ್ಟಿಕ್ ಮುಕ್ತ ಸಮಾರಂಭ ಇದಾಗಿದೆ ನಿಮ್ಮಲ್ಲಿನ ಅನುಭವ, ಜ್ಞಾನ ಕೌಶಲ ಹಂಚಿಕೊಳ್ಳಲು ಇದೊಂದು ಉತ್ತಮ ವೇದಿಕೆ ಯಾಗಿದೆ ಎಂದರು.

ಪ್ರಧಾನಿಗಳು ಹೇಳಿದಂತೆ ದೇಶದ ಯುವ ಜನರ ಕೈಯಲ್ಲಿ ದೇಶದ ಗುರಿ ಶಕ್ತಿ ಅಡಗಿದೆ ಅದು ಸರಿ ಯಾದ ದೃಷ್ಟಿಯೆಡೆಗೆ ಸಾಗಬೇಕಿದೆ ಎಂದರು. ಕೋವಿಡ್ ಸಂದರ್ಭದಲ್ಲಿ ದೇಶದ ಆರ್ಥಿಕ ಮಟ್ಟ ಸಂಪೂರ್ಣ ಸ್ತಬ್ದವಾದರು ಹೆದರದೇ ರಾಷ್ಟ್ರದ ಜನರ ಜೀವನಕ್ಕಿಂತ ಜೀವ ಮುಖ್ಯವೆಂದು ಸೋಂಕು ನಿಯಂತ್ರಣಕ್ಕಾಗಿ ಕಠಿಣ ಕ್ರಮ ಕೈಗೊಳ್ಳಲಾಯಿತು ನಂತರ ದೇಶವಾಸಿಗಳಿಗೆ ಉಚಿತ ಲಸಿಕೆ ನೀಡಿದರು ಎಂದರು.

ಸ್ಟಾರ್ಟ್ ಅಪ್,ಡಿಜಿಟಲ್ ಇಂಡಿಯಾ, ಆತ್ಮ ನಿರ್ಭರ ಭಾರತ ಯೋಜನೆಗಳನ್ನು ಜಾರಿಗೊಳಿಸಿ, 80 ಸಾವಿರ ಕಂಪನಿಗಳಿಗೆ ಯುನಿಕಾರ್ನ್ ಬ್ರಾಂಡ್ ಲಭಿಸಿದೆ.ಇದರಿಂದ ರಕ್ಷಣಾ ಕ್ಷೇತ್ರದಲ್ಲಿ 400 ಉತ್ಪನ್ನಗಳನ್ನು ದೇಶದಲ್ಲಿಯೇ ಉತ್ಪಾದನೆ ಮಾಡಲು ಸಾಧ್ಯವಾಗಿದೆ ಎಂದರು.

ಈ ಯುವ ಜನನೋತ್ಸವದಲ್ಲಿ ಪ್ರಥಮಬಾರಿಗೆ ಯುವ ಶೃಂಗ ಸಭೆ ಯಶ್ವಿಯಾಗಿದೆ.ಇದನ್ನು ಎಲ್ಲಾ ರಾಜ್ಯಗಳ ಕಾಲೇಜುಗಳಿಗೆ ವಿಸ್ತರಿಸಲಾಗುವುದು. ಸ್ವಚ್ಚ ಸುಂದರವಾದ ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣವಾಗಿದೆ ಎಂದರು.ಇನ್ನೂ ಈ ಒಂದು ಕಾರ್ಯಕ್ರಮ ವನ್ನು ಅದ್ದೂರಿ ಯಾಗಿ ಮಾದರಿ ಯಾಗುವಂತೆ ಯಶಸ್ವಿಗೊಳಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಅಧಿಕಾರಿಗಳಿಗೆ ಹಾಗೂ ಅವಳಿ ನಗರದ ಜನತೆಗೆ ಧನ್ಯವಾದಗಳನ್ನು ಹೇಳಲಾಯಿತು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..


Google News Join The Telegram Join The WhatsApp

 

 

Suddi Sante Desk

Leave a Reply