ಧಾರವಾಡ –
ಲಾಕ್ ಡೌನ್ ಹಿನ್ನಲೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ದಾನಿಗಳಿಂದ ದಿನಸಿ ಆಹಾರ ಸಾಮಗ್ರಿ ಸ್ವೀಕರಿಸಲು ಜಿಲ್ಲಾಡಳಿತದಿಂದ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಎರಡು ಸ್ವೀಕೃತಿ ಕೇಂದ್ರಗಳನ್ನು ಆರಂಭ ಮಾಡಲಾಗಿ ದೆ ಎಂದು ಜಿಲ್ಲಾಧಿಕಾರಿ ನಿತೀಶ್ ಪಾಟೀಲ ಹೇಳಿ ದ್ದಾರೆ.ಜಿಲ್ಲೆಯಲ್ಲಿ ಜೂನ್ 7ರವರೆಗೆ ಲಾಕ್‍ಡೌನ್ ಮಾಡಲಾಗಿದ್ದು ವಲಸೆ ಕಾರ್ಮಿಕರು ಹಾಗೂ ನಿರ್ಗ ತಿಕರಿಗೆ ಆಹಾರಧಾನ್ಯ ಕಿಟ್‍ಗಳನ್ನು ನೀಡಬಯ ಸುವ ದಾನಿಗಳಿಂದ ಕಿಟ್‍ಗಳನ್ನು ಸ್ವೀಕರಿಸಲು ಜಿಲ್ಲೆ ಯಲ್ಲಿ 2 ಸ್ವೀಕೃತಿ ಕೇಂದ್ರಗಳನ್ನು ತೆರೆಯಲಾಗಿದೆ. ಉಸ್ತುವಾರಿಗಾಗಿ ಸಿಬ್ಬಂದಿಗಳ ತಂಡವನ್ನು ರಚಿಸ ಲಾಗಿದೆ ಎಂದು ಜಿಲ್ಲಾಧಿಕಾರಿ ನೀತೇಶ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಾನಿಗಳಿಂದ ವಸ್ತುಗಳನ್ನು ಸ್ವೀಕರಿಸಲು ಧಾರವಾಡ ದ ಮಿನಿವಿಧಾನಸೌಧದಲ್ಲಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ಕೇಂದ್ರ ತೆರಯಲಾಗಿದ್ದು, ಇದರ ಉಸ್ತುವಾರಿಯನ್ನು ಆಹಾರ ಇಲಾಖೆಯ ಜಂಟಿ ನಿರ್ದೇಶಕರ ಕಛೇರಿಯ ಸಹಾಯಕ ನಿರ್ದೇ ಶಕ ಎಸ್.ಪಿ.ಸಾವಕಾರ.(9845297783), ಕೆ.ಎಫ್ ಸಿ.ಎಸ್.ಸಿಯ ಈಶ್ವರ ಪಾಟೀಲ (8792027822) ಮತ್ತು ಹಿರಿಯ ಕಾರ್ಮೀಕ ನಿರೀಕ್ಷಕರಾದ ಮೀನಾಕ್ಷಿ ಶಿಂಧಿಹಟ್ಟಿ (6363520066) ಅವರನ್ನು ನೇಮಿಸ ಲಾಗಿದೆ.ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯ ಹತ್ತಿರ ಇರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ದಾನಿಗಳಿಂದ ವಸ್ತುಗಳನ್ನು ಸ್ವೀಕರಿಸಲು ಕೇಂದ್ರ ತೆರಯಲಾಗಿದ್ದು ಇದರ ಉಸ್ತುವಾರಿಯನ್ನು ಧಾರ ವಾಡದ ಆಹಾರ ಇಲಾಖೆಯ ಸಹಾಯಕ ನಿರ್ದೇ ಶಕ ಎಸ್.ಡಿ.ಪಾಟೀಲ(9880725639), ಹುಬ್ಬಳ್ಳಿ ಯ ತಹಶೀಲ್ದಾರ ಕಚೇರಿಯ ಆಹಾರ ನಿರೀಕ್ಷಕ ಎ.ಎ.ಖತೀಬ್(8310490713) ಮತ್ತು ಹುಬ್ಬಳ್ಳಿ ಯ 1 ನೇ ವೃತ್ತದ ಡಿಇಓ ಮಹೇಶ ದೇವರಕರ್ (9964422892) ಅವರನ್ನು ನೇಮಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶ ಹೊರಡಿಸಿದ್ದಾರೆ.