ದೆಹಲಿ –
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ ಕೇಂದ್ರ ಸರ್ಕಾರ ವಿವಿಧ ಪ್ರಶಸ್ತಿ ಪುರಸ್ಕಾರಗಳನ್ನು ಘೋಷಣೆ ಮಾಡಿದೆ.
ಪದ್ಮ ವಿಭೂಷಣ
ಜಪಾನ್ನ ಶಿಂಜೊ ಅಬೆ (ಸಾರ್ವಜನಿಕ ಕ್ಷೇತ್ರ), ಎಸ್.ಪಿ. ಬಾಲಸುಬ್ರಹ್ಮಣ್ಯಂ (ಕಲೆ), ಡಾ. ಬೆಳ್ಳೆ ಮೋನಪ್ಪ ಹೆಗ್ಡೆ (ಬಿ.ಎಂ. ಹೆಗ್ಡೆ-ಔಷಧ ಕ್ಷೇತ್ರ), ಮೌಲಾನಾ ವಹಿದುದೀನ್ ಖಾನ್ (ಆಧ್ಯಾತ್ಮ ವಿಭಾಗ), ಬಿ.ಬಿ. ಲಾಲ್ (ಪುರಾತತ್ವ ಶಾಸ್ತ್ರ ವಿಭಾಗ) ಹಾಗೂ ಒಡಿಶಾದ ಸುದರ್ಶನ್ ಸಾಹೊ (ಕಲೆ) ಪದ್ಮ ವಿಭೂಷಣ ಪ್ರಶಸ್ತಿ ಘೋಷಿಸಿದೆ.
ಪದ್ಮ ಭೂಷಣ
10 ಸಾಧಕರಿಗೆ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಜ್ಞಾನಪೀಠ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ,
ರಾಮ್‌ವಿಲಾಸ್ ಪಾಸ್ವಾನ್, ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್
ಸೇರಿದಂತೆ ಹತ್ತು ಜನ ಗಣ್ಯರಿಗೆ ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪದ್ಮಶ್ರೀ
ದೇಶದ 102 ಸಾಧಕರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ.ಕರ್ನಾಟಕದ ಮೂವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಆರ್.ಲಕ್ಷ್ಮೀನಾರಾಯಣ ಕಶ್ಯಪ್ (ಶಿಕ್ಷಣ), ಬಿ.ಮಂಜಮ್ಮ ಜೋಗತಿ (ಕಲೆ), ಕೆ.ವೈ.ವೆಂಕಟೇಶ್ (ಕ್ರೀಡೆ) ಕ್ಷೇತ್ರದಿಂದ ಪದ್ಮಶ್ರೀಗೆ ಆಯ್ಕೆಯಾಗಿದ್ದಾರೆ
ಹೀಗೆ ಕೇಂದ್ರ ಸರ್ಕಾರದಿಂದ ಕೊಡಮಾಡುವ ಅತ್ಯುನ್ನತ ಪ್ರಶಸ್ತಿಗೆ ದೇಶದ ವಿವಿಧ ಕ್ಷೇತ್ರಗಳಲ್ಲಿನ 119 ಸಾಧಕ ಗಣ್ಯರು ಆಯ್ಕೆಯಾಗಿದ್ದಾರೆ. ಎಲ್ಲರಿಗೂ ದೇಶದ ಜನತೆಯ ಪರವಾಗಿ ಅಭಿನಂದನೆಗಳು.