ಬೆಂಗಳೂರು –
7ನೇ ವೇತನ ಆಯೋಗದ ಅಧ್ಯಕ್ಷರಾಗಿ ಸುಧಾಕರ್ ರಾವ್ ಅವರು ನೇಮಕಗೊಂಡ ಬೆನ್ನಲ್ಲೇ ಇತ್ತ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಮುಖ್ಯಮಂತ್ರಿ ಅವರಿಗೆ ಅಭಿನಂದ ನೆಗಳನ್ನು ಸಲ್ಲಿಸಿಯಾದ ನಂತರ ಮುಖ್ಯಮಂತ್ರಿ ಅವರನ್ನು 7ನೇ ವೇತನ ಆಯೋಗದ ಅಧ್ಯಕ್ಷರು ಭೇಟಿಯಾಗಿ ಈಗಾಗಲೇ ಕೆಲವೊಂದಿಷ್ಟು ವಿಚಾರಗಳನ್ನು ಚರ್ಚೆ ಮಾಡಿದ ನಂತರ ಒಂದೊಂದು ಚಟುವಟಿಕೆಗಳು ಕಂಡು ಬರುತ್ತಿದ್ದು ಚುರುಕುಗೊಂಡಿದ್ದು ಸಧ್ಯ ಅಧ್ಯಕ್ಷರು ಮುಂದಿನ ಹಂತದಲ್ಲಿ ಕಾರ್ಯವನ್ನು ಕೈಗೊಳ್ಳಲು ರಾಜ್ಯದ ಸರ್ಕಾರಿ ನೌಕರರ ಸಮಗ್ರವಾದ ಡೇಟಾದ ಮಾಹಿತಿಯನ್ನು ಕೇಳಿದ್ದಾರೆ.
ವರದಿ ಸಿದ್ದಮಾಡಲು ಮೊದಲು ಸಮಗ್ರವಾದ ರಾಜ್ಯ ಸರ್ಕಾರಿ ನೌಕರರ ದಾಖಲೆ ಅಂಕಿ ಸಂಖ್ಯೆ ಸೇರಿದಂತೆ ಇತರೆ ಕೆಲವೊಂದಿಷ್ಟು ದಾಖಲೆಗಳು ಅವಶ್ಯಕವಾಗಿ ಬೇಕಾಗಿದ್ದು ಹೀಗಾಗಿ ಈ ಒಂದು ವಿಚಾರ ಕುರಿತಂತೆ 7ನೇ ವೇತನ ಆಯೋಗದ ಅಧ್ಯಕ್ಷರು ಮಾಹಿತಿಗಾಗಿ 7ನೇ ವೇತನ ಆಯೋ ಗಕ್ಕೆ ಒಳಪಡುವ ಎಲ್ಲಾ ನೌಕರರ ಸಂಪೂರ್ಣ ವಾದ ಮಾಹಿತಿಯನ್ನು ಸರ್ಕಾರಕ್ಕೆ ಕೇಳಿದ್ದಾರೆ.
ಹೀಗಾಗಿ ಸಧ್ಯ ಈ ಒಂದು ಹಂತದಲ್ಲಿ ಅಧ್ಯಕ್ಷರು ಕೇಳಿದ್ದು ಸಂಪೂರ್ಣವಾದ ಡೇಟಾ ಬಂದ ನಂತರ ಪೂರ್ಣ ಪ್ರಮಾಣದಲ್ಲಿ ಇದನ್ನು ಅಧ್ಯಯನ ಮಾಡಿದ ಬಳಿಕ ಅಧ್ಯಕ್ಷರು ಮುಂದಿನ ಹಂತದ ಚಟುವಟಿಕೆಗಳನ್ನು ಆರಂಭ ಮಾಡ ಲಿದ್ದು ಹೀಗಾಗಿ ಈ ಒಂದು ವಿಚಾರದಲ್ಲಿ ಒಂದೊಂದು ಚಟುವಟಿಕೆಗಳು ನಡೆಯುತ್ತಿದ್ದು ಇದರಿಂದಾಗಿ ರಾಜ್ಯದ ಸಮಸ್ತ ಸರ್ಕಾರಿ ನೌಕರರು ಸಂತಸ ಗೊಂಡಿದ್ದು ಶೀಘ್ರದಲ್ಲೇ ಈ ಒಂದು ಕಾರ್ಯ ಮುಕ್ತಾಯವಾಗಿ ಸಲ್ಲಿಕೆಯಾಗಿ ಅನುಷ್ಠಾನಕ್ಕೆ ಬರಲಿ ಎಂಬ ಒತ್ತಾಯದೊಂದಿಗೆ ಆಗ್ರಹವನ್ನು ಮಾಡಿದ್ದಾರೆ.
ವರದಿ – ಚಕ್ರವರ್ತಿ ಜೊತೆ ಗೌತಮ್ ಸುದ್ದಿ ಸಂತೆ ನ್ಯೂಸ್ ಬೆಂಗಳೂರು.