ಬೆಂಗಳೂರು –
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಿ ನೌಕರರಿಂದ ನವಂಬರ್ 3 ರಂದು ದೆಹಲಿ ಚಲೋ – ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದಿಂದ ನಡೆಯಲಿದೆ ಚಲೋ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ರಾಜ್ಯಾಧ್ಯಕ್ಷರು ಕರೆ
ರಾಜ್ಯ ಸರ್ಕಾರಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ನವಂಬರ್ 3 ರಂದು ದೆಹಲಿ ಚಲೋ ಹೋರಾಟ ನಡೆಯಲಿದೆ ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ಜೈಕುಮಾರ್ ಹೇಳಿದರು. ರಾಯಚೂರಿನಲ್ಲಿ ಮಾತನಾಡಿದ ಅವರು ನೌಕರರ ಕೆಲವೊಂದಿಷ್ಟು ಬೇಡಿಕೆಗಳ ಈಡೇ ರಿಕೆಗಾಗಿ ಈ ಒಂದು ದೆಹಲಿ ಚಲೋ ಹೋರಾಟ ನಡೆಯಲಿದೆ
ಹೀಗಾಗಿ ಇದರಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ರಾಜ್ಯಾಧ್ಯಕ್ಷರು ಕರೆ ನೀಡಿದರು.ಇದರೊಂದಿಗೆ ರಾಷ್ಟ್ರ ಮಟ್ಟದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನವಂಬರ್ 3ರಂದು ದೆಹಲಿ ಚಲೋ ಹಮ್ಮಿಕೊಳ್ಳ ಲಾಗಿದೆ. ಸರ್ಕಾರ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ನಂತರ ಕರಪತ್ರ ಹಾಗೂ ವಾಲ್ ಪೋಸ್ಟರ್ ಬಿಡುಗಡೆ ಮಾಡಿದರು.ಈ ಒಂದು ಸಮಯದಲ್ಲಿ ರಾಜ್ಯ ಸಮಿತಿಯ ಅದ್ಯಕ್ಷ ಹೆಚ್.ಎಸ್. ಜೈಕುಮಾರ ಕಾರ್ಯಾಧ್ಯಕ್ಷೆ ಶೋಭಾ ಲೋಕ ನಾಗಣ್ಣ, ಅಮರೇಶಪ್ಪ, ನಾರಾಯಣಪ್ಪ,ಜಿಲ್ಲಾ ಘಟಕದ ಅಧ್ಯಕ್ಷ ತಾಯರಾಜ್, ಮೊಹಿನು ದ್ದಿನ್,ಗುರುನಾಥ,ರಮೇಶ್ ಗೌಳಿ,ಸುಧಾಕರ, ಮಹದೇವಪ್ಪ,ಮಧುಕಾಂತ,ವೆಂಕಟೇಶ,ರಾಘವೇಂದ್ರ,ಹೃಷಿಕೇಶ,ನಾಗರಾಜ್,ಸತ್ಯ ನಾರಾಯಣ ಸೇರಿದಂತೆ ಸಂಘಟನೆಯ ಮುಖಂಡರು ನಾಯಕರು ಸರ್ಕಾರಿ ನೌಕರರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ನವದೆಹಲಿ…..