ಬೆಂಗಳೂರು –
ಇಡೀ ರಾಜ್ಯದಲ್ಲಿ, ನಿಡಗುಂದಿ ತಾಲೂಕಿನ ಸರಕಾರಿ ನೌಕರರ ಸಂಘಕ್ಕೆ ಮಾತ್ರ ಚುನಾವಣೆ ಇಲ್ಲ ಇದೊಂದು ಪ್ರಜಾಪ್ರಭುತ್ವದ ವ್ಯಂಗ್ಯ ಎಂದ್ರು ಚಂದರಶೇಖರ ನುಗ್ಲಲಿ ಹೌದು 2024- 2029ನೇ ಅವಧಿಯ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣೆಗಳು ರಾಜ್ಯಾದಂತ ನಡೆಯುತ್ತಿರುವುದು ತಮಗೆಲ್ಲಾ ಗೊತ್ತಿರುವ ಮಾಹಿತಿ
ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ತಾಲೂಕಿನ ಎಲ್ಲಾ ಇಲಾಖೆಗಳ ಸಮಸ್ತ ನೌಕರರು ಭಾಗವಹಿಸಲು ದಿನಾಂಕ 12.09.2024 ರಂದು ರಾಜ್ಯ ಚುನಾವಣಾ ಅಧಿಕಾರಿಗಳು ಅಧಿಸೂಚನೆಯನ್ನು ಹೊರಡಿಸಿದ್ದು ಅದರಲ್ಲಿನ ವೇಳಾಪಟ್ಟಿಯಂತೆ ದಿನಾಂಕ 9-10-2024 ರಿಂದಲೇ ತಾಲೂಕಿನಲ್ಲಿ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಬೇಕಿತ್ತು ಆದರೆ ಈ ದಿನದವರೆಗೂ ನಿಡಗುಂದಿ ತಾಲೂಕು ಶಾಖೆಗೆ ಚುನಾವಣಾಧಿಕಾರಿ ನೇಮಕಾತಿ ಆಗಿರುವುದಿಲ್ಲ ಹಾಗೂ ಅರ್ಹ ಮತದಾರರ ಪಟ್ಟಿ ಬಿಡುಗಡೆಗೊಳಿಸಿರುವುದಿಲ್ಲ
ಇಡೀ ರಾಜ್ಯದಲ್ಲಿ ನಿಡಗುಂದಿ ತಾಲೂಕಿನ ಸರಕಾರಿ ನೌಕರರ ಸಂಘದಲ್ಲಿ ಮಾತ್ರ ಚುನಾವಣೆ ನಡೆಯದಂತೆ ತಡೆ ಹಿಡಿದಿರುವುದು ಪ್ರಜಾಪ್ರಭುತ್ವದ ವ್ಯಂಗ ಹಾಗೂ 5 ವರ್ಷ ಸದಸ್ಯತ್ವ ಶುಲ್ಕ ಪಾವತಿಸಿ ಸಂಘದ ಸದಸ್ಯರಾದ ಸರಕಾರಿ ನೌಕರರ ಹಕ್ಕುಗಳ ಉಲ್ಲಂಘನೆಯಾಗುತ್ತದೆ
ಕಳೆದ ಜುಲೈ ತಿಂಗಳಲ್ಲೇ ರಾಜ್ಯ ಸಂಘಕ್ಕೆ ತಾಲೂಕಿನ ಮತದಾರ ಪಟ್ಟಿಯನ್ನು ಅನುಮೋದಿಸಲು ತಾಲ್ಲೂಕು ಸಂಘದಿಂದ ಸಲ್ಲಿಸಿದ್ದರೂ ಕೂಡಾ ಇದುವರೆಗೂ ಮತದಾರರ ಪಟ್ಟಿಗೆ ಅನುಮೋದನೆ ನೀಡದೇ ಅರ್ಹ ಮತದಾರರ ಪಟ್ಟಿ ಬಿಡುಗಡೆಗೊಳಿಸಿರುವುದಿಲ್ಲ
ರಾಜ್ಯದ ಎಲ್ಲಾ ತಾಲೂಕಿನಲ್ಲಿ ಈಗಾಗಲೇ ವೇಳಾ ಪಟ್ಟಿಯಂತೆ ಚುನಾವಣೆಯ ಪ್ರಕ್ರಿಯೆಗಳು ಆರಂಭ ಗೊಂಡಿರುತ್ತವೆ ನಿಡಗುಂದಿ ತಾಲೂಕಿನಲ್ಲಿ ಮಾತ್ರ ಚುನಾವಣಾ ಪ್ರಕ್ರಿಯೆಗಳನ್ನು ಆರಂಭಿಸದೇ ಯಾರೋ ಒಬ್ಬರ ಹಿತಾಸಕ್ತಿಗಾಗಿ ತಾಲೂಕಿನ ಸರ್ವ ನೌಕರರಿಗೆ ವಂಚನೆ ಮಾಡಿರುವುದು ದುರಂತವೇ ಸರಿ
ನೌಕರರು ಪ್ರಜಾಸತ್ತಾತ್ಮಕ ಚುನಾವಣೆಯಲ್ಲಿ ಮುಕ್ತವಾಗಿ ಭಾಗವಹಿಸಲು ಅವಕಾಶ ನೀಡದೇ ನೌಕರರಲ್ಲಿ ಗೊಂದಲ ಸೃಷ್ಟಿಸಲಾಗಿದೆ ಇದರ ಬಗ್ಗೆ ಸೂಕ್ತ ಕ್ರಮ ವಹಿಸಲು ತಾಲೂಕಿನ ಸಂಘದ ಸದಸ್ಯರುಗಳು ತಹಶೀಲ್ದಾರರಿಗೆ ಮತ್ತು ಉಪ ವಿಭಾಗಾಧಿಕಾರಿಗಳಿಗೆ ಈಗಾಗಲೇ ಮನವಿಯನ್ನು ಸಲ್ಲಿಸಿ ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡಲು ಕೋರಲಾಗಿದೆ
ಸದರಿ ಶಾಖೆಯ ಚುನಾವಣೆ ಬಗ್ಗೆ ಕ್ರಮ ವಹಿಸಲು ತಾಲೂಕಿನ ನೌಕರರ ಪರವಾಗಿ ನಾವು ಆಡಳಿತ ಅಧಿಕಾರಿಗಳು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಇವರಿಗೆ ಮತ್ತು ರಾಜ್ಯ ಚುನಾವಣೆ ಅಧಿಕಾರಿಗಳು ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ಬೆಂಗಳೂರು ಇವರಿಗೆ ಈ ಮೂಲಕ ಒತ್ತಾಯಿಸಲಾಗಿದೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……