ಧಾರವಾಡ –
ಇಷ್ಟು ದಿನ ಜಿಲ್ಲಾ ಪಂಚಾಯತ ಸದಸ್ಯ ಯೊಗೀಶಗೌಡ ಹತ್ಯೆಯ ಹಿಂದೆ ಬಿದ್ದಿದ್ದ ಸಿಬಿಐ ಇದೀಗ ಹೊಸ ಹೊಸ ವಿಚಾರಗಳನ್ನು ಹೊರ ತೆಗೆಯುತ್ತಿದೆ. ಅದರಲ್ಲೂ ಹತ್ಯೆಯ ಮೊದಲ ಆರೋಪಿಯ ಹೊಸ ಹೇಳಿಕೆ ಇದೀಗ ಹತ್ಯೆ ನಂತರದ ಮತ್ತೊಂದು ಕಹಾನಿ ಹೇಳುತ್ತಿದೆ. ಜೊತೆಗಿದ್ದು ಊಟ ಮಾಡಿದವರೆ ಹತ್ಯೆಗೆ ಸ್ಕೆಚ್ ಹಾಕಿದ್ರು ಅನ್ನೋ ಆತಂಕಕಾರಿ ವಿಚಾರ ಹೊರ ಬಿದ್ದ ಬೆನ್ನಲ್ಲೇ ಚಂದು ಮಾಮ ನ್ಯಾಯಾಂಗ ಬಂಧನವಾಗಿದೆ.
ಇಂದು ಸಿಬಿಐ ಅಧಿಕಾರಿಗಳು ಬರೊಬ್ಬರಿ 9 ಜನರನ್ನು ಎಡ ಬಿಡದೇ ಒಬ್ಬರ ಮೇಲೊಬ್ಬರಂತೆ ವಿಚಾರಣೆ ನಡೆಸಿದ್ದಾರೆ.ಇಂದು ಸಹ ಬಸವರಾಜ ಮುತಗಿ ಆ್ಯಂಡ್ ಟಿಂ ಗೆ ಡ್ರಿಲ್ ಮಾಡಿದೆ. ಇಂದು ಸಿಬಿಐ ಅಧಿಕಾರಿಗಳು ಬರೊಬ್ಬರಿ 9 ಜನರನ್ನ ವಿಚಾರಣೆ ಮಾಡಿದೆ.
ಇಂದು ವಿಚಾರಣೆಗೆ ಹಾಜರಾದವರು
ವಿಜಯ ಕುಲಕರ್ಣಿ,
ವಿನಯ ಆಪ್ತ ಸಹಾಯಕ ನ್ಯಾಮಗೌಡರ,
ಡೈರಿ ನೋಡಿಕ್ಕೊಳ್ಳುತ್ತಿದ್ದ ನಟರಾಜನ್,
ಚಂದ್ರಶೇಖರ ಇಂಡಿ,
ಬಸವರಾಜ ಮುತಗಿ,
ಕೀರ್ತಿಕುಮಾರ,
ಮಹಾಬಳೇಶ್,
ವಿನಾಯಕ,
ಸಂದಿಪ,
ವಿಕಾಸ ಕಲಬುರ್ಗಿ
ಸೇರಿದಂತೆ 10 ಜನರನ್ನ ಸಿಬಿಐ ಇಂದು ಸಹ ವಿಚಾರಣೆ ನಡೆಸಿದೆ.
ಜಿಪಂ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಸದ್ಯ ಜೈಲುಪಾಲಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಒಂದು ಕಡೆಯಾದ್ರೆ ಹತ್ಯೆಯ ನಂತ್ರ ಹೊಸ ಹೊಸ ಬೆಳವಣಿಗೆಗಳು ಇದೀಗ ಒಂದೊಂದಾಗಿ ಬಯಲಿಗೆ ಬರುತ್ತಿವೆ.
ಅದರಲ್ಲೂ ಹತ್ಯೆಯ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ನೀಡಿರುವ ಒಂದು ಹೇಳಿಕೆ ಪ್ರಕರಣದ ಮಾಸ್ಟರ್ ಮೈಂಡ್ ಯಾರು ಅನ್ನೋದನ್ನ ಹೇಳುತ್ತಿದೆ.ಹೌದು ಯೋಗೀಶ್ ಹತ್ಯೆಯ ನಂತ್ರ ಬಸವರಾಜ ಮುತ್ತಗಿಯನ್ನೇ ಮಾಜಿ ಸಚಿವರು ಹತ್ಯೆಗೆ ಮುಂದಾಗಿದ್ರಾ ಎನ್ನುವ ಮಾತು ಕೇಳಿ ಬರುತ್ತಿದೆ.
ಅದಕ್ಕೆ ಈಗಾಗಲೇ ಮಾಸ್ಟರ್ ಮೈಂಡ್ ಯಾರು ಅನ್ನೋದನ್ನ ಸ್ವತಃ ಬಸವರಾಜ ಮುತ್ತಗಿಯೇ ಹೇಳಿದ್ದಾರೆ.ಈಗಾಗಲೇ 14 ದಿನಗಳ ನ್ಯಾಯಾಂಗ ಬಂಧನವಾಗಿ ಸದ್ಯ ಎರಡು ದಿನಗಳ ಕಾಲ ಸಿಬಿಐ ಕಸ್ಟಡಿಯನ್ನು ಪೂರ್ಣಗೊಳಿಸಿ ಇದೀಗ ಜೈಲುಪಾಲಾಗಿರುವ ಚಂದ್ರದೇಖರ ಇಂಡಿ ಅಲಿಯಾಸ್ ಚಂದು ಮಾಮಾನೆ ಹತ್ಯೆಯ ನಂತರದ ಸ್ಕೆಚ್ ಗೆ ಕಾರಣ ಅನ್ನೋ ಮಾಹಿತಿಯನ್ನು ಬಸವರಾಜ್ ಮುತಗಿ ಬಾಯಿಬಿಟ್ಟಿದ್ದಾರೆ.
ಇನ್ನು ಮಧ್ಯಾಹ್ನ ಮೂರಕ್ಕೆ ಸಿಬಿಐನ ವಿಶೇಷ ನ್ಯಾಯಾಲಯಕ್ಕೆ ಸಿಬಿಐ ಅದಿಕಾರಿಗಳು ಚಂದ್ರಶೇಖರ ಇಂಡಿ ಅವರನ್ನು ಹಾಜರು ಪಡಿಸಿದ್ದಾರೆ.ಬಳಿಕ ಚಂದ್ರಶೇಖರ ಇಂಡಿ ಅವರನ್ನು ಧಾರವಾಡ ಕೇಂದ್ರ ಕಾರಾಗೃಹಕ್ಕೆ ಶಿಪ್ಟ್ ಮಾಡಲಾಗಿದೆ.ಅತ್ತ ಚಂದ್ರಶೇಖರ ಇಂಡಿ ಜೈಲು ಪಾಲಾದ್ರೆ ಇತ್ತ ಸಿಬಿಐ ಅಧಿಕಾರಿಗಳು ಬಸವರಾಜ ಮುತಗಿ ಆ್ಯಂಡ ಟೀಮ್ ನ್ನು ಉಪನಗರ ಪೋಲಿಸ್ ಠಾಣೆಗೆ ಕರೆಸಿ ಮತ್ತೆ ಡ್ರಿಲ್ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಸಿಬಿಐ ಅಧಿಕಾರಿಗಳು ಇಂದು ಸಹ 9 ಜನರಿಗೆ ಡ್ರಿಲ್ ಮಾಡಿದ್ದಾರೆ..ಇವೆಲ್ಲದರ ಮಧ್ಯೆಲ ಚಂದ್ರಶೇಖರ ಇಂಡಿ ಅವರನ್ನ ಧಾರವಾಡ ಕೇಂದ್ರ ಕಾರಾಗೃಹಕ್ಕೆ ಶಿಪ್ಟ್ ಮಾಡಿದ್ದಾರೆ.ಇನ್ನು ಅತ್ತ ವಿನಯ ಕುಲಕರ್ಣಿ ಅವರು ಹಿಂಡಲಗಾ ಜೈಲಿನಲ್ಲಿದ್ದರೆ ಇತ್ತ ಸೋದರ ಮಾವ ಚಂದ್ರಶೇಖರ ಇಂಡಿ ಧಾರವಾಡ ಕೇಂದ್ರ ಕಾರಾಗೃದಲ್ಲಿ ಕಂಬಿ ಹಿಂದೆ ಹೋಗಿದ್ದಾರೆ.ಇನ್ನು ಸಿಬಿಐ ಅಧಿಕಾರಿಗಳು ಮತ್ಯಾರಿಗೆ ಸ್ಕೆಚ್ ಹಾಕಿದ್ದಾರೆ ಎಂಬುದುನ್ನ ಕಾದು ನೋಡಬೇಕಿದೆ.