ಧಾರವಾಡ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ 18 ರಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ಜೋರಾಗಿದೆ.ಪಕ್ಷದ ಅಭ್ಯರ್ಥಿ ಚಂದ್ರಶೇಖರ ಪೂಜಾರ ಪರವಾಗಿ ಪ್ರಚಾರ ಬೆಳ್ಳಂ ಬೆಳಿಗ್ಗೆ ಧಾರವಾಡ ದಲ್ಲಿ ಜೋರಾಗಿ ಕಂಡು ಬರುತ್ತಿದೆ.



ಹೌದು ವಾರ್ಡ್ ನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯ ಕರ್ತರು ಅಭಿಮಾನಿಗಳು ಆಪ್ತರು ಮಹಿಳೆಯರು ಸೇರಿದಂತೆ ಹಲವರು ಸ್ವಯಂ ಪ್ರೇರಿತವಾಗಿ ಪಾಲ್ಗೊಂಡು ಅಭ್ಯರ್ಥಿ ಚಂದ್ರಶೇಖರ ಪೂಜಾರ ಪರ ಅಬ್ಬರದ ಪ್ರಚಾರವನ್ನು ಮಾಡುತ್ತಿದ್ದಾರೆ.

ವಾರ್ಡ್ ನಂಬರ್ 18 ರಲ್ಲಿ ಪ್ರತಿಯೊಂದು ಮನೆಗೆ ಮನೆಗೆ ತೆರಳಿ ಬಿಡುವಿಲ್ಲದೇ ಪ್ರಚಾರವನ್ನು ಮಾಡುತ್ತಾ ಮತ ಯಾಚನೆಯನ್ನು ಮಾಡುತ್ತಿದ್ದಾರೆ. ಪ್ರಮುಖವಾಗಿ ಮತಯಾಚನೆಯ ಸಮಯದಲ್ಲಿ ಈವರೆಗೆ ಪಕ್ಷದಿಂದ ಹಾಗೇ ವಯಕ್ತಿಕವಾಗಿ ಮಾಡಿರುವ ಅಭಿವೃದ್ದಿ ಕೆಲಸ ಕಾರ್ಯಗಳು ಹಾಗೇ ಈ ಹಿಂದೆ ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಲಾಗಿದ್ದು ಹೀಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಅವಕಾಶವನ್ನು ನೀಡುವಂತೆ ಮತದಾರರಲ್ಲಿ ಹೇಳಿದರು.

ಇದರೊಂದಿಗೆ ವಾರ್ಡ್ 18 ರಲ್ಲಿ ಅಬ್ಬರದ ಪ್ರಚಾರವು ನಡೆಯುತ್ತಿದ್ದು ಇದರೊಂದಿಗೆ ಮತಯಾಚನೆ ಮಾಡುತ್ತಿದ್ದಾರೆ.ಪಕ್ಷದ ಅಭ್ಯರ್ಥಿ ಚಂದ್ರಶೇಖರ ಪೂಜಾರ ಜೊತೆ ಹಲವರು ಉಪಸ್ಥಿತರಿದ್ದು ಮತಯಾಚನೆ ಮಾಡಿದರು.
