ಬೆಂಗಳೂರು –
ಧಾರವಾಡದ ಎಪಿಎಮ್ ಸಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಚನ್ನವೀರಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹೌದು ಈ ಹಿಂದೆ ಇದ್ದ ಅಧ್ಯಕ್ಷರ ಅಧಿಕಾರವಧಿ ಮುಗಿದ ಹಿನ್ನಲೆಯಲ್ಲಿ ಇಂದು ಚುನಾವಣೆಗೆ ಸಮಯವನ್ನು ನಿಗದಿ ಮಾಡಲಾಗಿತ್ತು.ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚನ್ನವೀರ ಗೌಡ ಪಾಟೀಲ ಒಬ್ಬರೆ ನಾಮಪತ್ರವನ್ನು ಸಲ್ಲಿಸಿದ್ದ ರು.ಯಾರೊಬ್ಬರು ನಾಮಪತ್ರ ಸಲ್ಲಿಸದ ಹಿನ್ನಲೆ ಯಲ್ಲಿ ಇವರನ್ನು ಅವಿರೋಧವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು
ಇನ್ನೂ ಚನ್ನವೀರಗೌಡ ಪಾಟೀಲ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದು ಮತ್ತೆ ಈ ಒಂದು ಅಧಿಕಾರದ ಗದ್ದುಗೆಯನ್ನು ಬಜೆಪಿ ತನ್ನ ಮಡಿಲಿಗೆ ಹಾಕಿಕೊಂ ಡಿದ್ದು ಶಾಸಕ ಅಮೃತ ದೇಸಾಯಿ ಬಣ ಅಧಿಕಾರದ ಗದ್ದುಗೆಯನ್ನು ಹಿಡಿದಿದೆ.
ಇನ್ನೂ ಅಧ್ಯಕ್ಷರಾಗುತ್ತಿದ್ದಂತೆ ಶಾಸಕ ಅಮೃತ ದೇಸಾಯಿ,ತವನಪ್ಪ ಅಷ್ಟಗಿ,ಸೇರಿದಂತೆ ಶಂಕರ ಕೋಮಾರ ದೇಸಾಯಿ,ಆತ್ಮಾನಂದ ಹುಂಬೇರಿ, ರುದ್ರಪ್ಪ ಹರಿವಾಳ,ನಾಗರಾಜ ಹಟ್ಟಿಹೋಳಿ. ಸಂಭಾಜಿ ಜಾಧವ. ಮಂಜುನಾಥ ಈಳಿಗೇರ, ಸೇರಿದಂತೆ ಹಲವರು ಅಭಿನಂದಿಸಿ ಸನ್ಮಾನಿಸಿ ಗೌರವಿಸಿದರು.