ಬೆಂಗಳೂರು –
ಶ್ರೀರಾಮ ಸೇನಾ ಸಂಘಟನೆ ಕರೆ ಕೊಟ್ಟಂತೆ ಇಂದಿನಿಂದ ರಾಜ್ಯಾದ್ಯಂತ ದೇವಸ್ಥಾನಗಳಲ್ಲಿ ಶ್ರೀರಾಮನ ಮಂತ್ರ ಪಠಣ ಭಜನೆ ಹೀಗೆ ಹಲವಾರು ಧಾರ್ಮಿಕ ಚಟುವಟಿಕೆ ಗಳು ಆರಂಭಗೊಂಡಿವೆ.ಹೌದು ಮಸೀದಿಗಳಲ್ಲಿ ಧ್ವನಿವ ರ್ಧಕ ತೆರವಿಗೆ ನೀಡಿದ್ದ ಗಡುವು ಅಂತ್ಯವಾಗಿದ್ದು ಹೀಗಾಗಿ ಈಗಾಗಲೇ ಶ್ರೀರಾಮಸೇನೆ ಸಂಘಟನೆ ಹೇಳಿದಂತೆ ಇಂದಿ ನಿಂದ ಮುಂಜಾನೆಯಿಂದ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸಾ, ಭಜನೆ ಮತ್ತು ಸುಪ್ರಭಾತ ಹಾಕಲಾಗಿದ್ದು ರಾಜ್ಯಾದ್ಯಂತ ಯಶಶ್ವಿಗೊಂಡಿದೆ.
ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಮೈಸೂರಿನ ಶಿವರಾಂಪೇಟೆ ಆಂಜನೇಯ ಸ್ವಾಮಿ ದೇಗುಲದಲ್ಲಿ ಆಜಾನ್ ಪರ್ಯಾಯವಾಗಿ ಹನು ಮಾನ್ ಚಾಲೀಸಾ ಪಠಣೆ, ಸುಪ್ರಭಾತ ಆರಂಭಕ್ಕೂ ಮುನ್ನ ವಿಶೇಷ ಪೂಜೆ ಆರಂಭಗೊಂಡರೆ ಕೆ.ಕೃಷ್ಣಮೋ ಹನಾನಂದಗಿರಿ ಗೋ ಸ್ವಾಮೀಜಿ ಸೇರಿದಂತೆ ಸಂಘಟನೆ ಯ ಕಾರ್ಯಕರ್ತರು ಮುಖಂಡರು ಸಾಥ್ ನೀಡಿದರು.
ಇನ್ನೂ ಜೈ ಶ್ರೀರಾಮ ಘೋಷಣೆಯೊಂದಿಗೆ ಹುನುಮಾನ್ ಚಾಲೀಸಾ ಪಠಣೆ ಮಾಡಲಾಗಿದೆ.ಇನ್ನೂ ಇತ್ತ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕರುಣೇಶ್ವರ ಮಠದಲ್ಲಿ ಧ್ವನಿವರ್ಧಕದ ಮೂಲಕ ಸುಪ್ರಭಾತ ಹಾಕಲಾಗಿದೆ. ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗಶ್ರೀ ನೇತೃತ್ವದಲ್ಲಿ ಸುಪ್ರಭಾತ ಹಾಕಲಾಗಿದೆ.ಮುಂಜಾನೆ 5 ಗಂಟೆಯಿಂದ ಈ ಒಂದು ಕಾರ್ಯ ಆರಂಭಗೊಂಡಿದ್ದು ಭಕ್ತಿಗೀತೆ ಹಾಕಲಾ ಗಿದೆ.ಅತ್ತ ಬೆಂಗಳೂರಿನ ನೀಲಸಂದ್ರ ಜಯ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಶ್ರೀರಾಮಸೇನೆ ಕಾರ್ಯಕರ್ತ ರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಹನುಮಾನ್ ಚಾಲೀಸಾ ಪಠಣಕ್ಕೆ ತೆರಳುತ್ತಿದ್ದ ವೇಳೆ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸರೊಂದಿಗೆ ವಾಗ್ವಾದ ನಡೆಸಿ ದ್ದಾರೆ.ಬಳಿಕ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ಕೋಲಾರದಲ್ಲೂ ಅಜಾನ್ ಗೆ ಪರ್ಯಾಯವಾಗಿ ಸುಪ್ರ ಭಾತ ಹಾಕಲಾಗಿದೆ.ಕೋಲಾರದ ಅಮ್ಮವಾರಿಪೇಟೆ ವೃತ್ತದ ಆಂಜನೇಯ ದೇವಸ್ಥಾನದಲ್ಲಿ ಸುಪ್ರಭಾತ ಹಾಕಲಾಗಿದೆ ಮಂಡ್ಯದಲ್ಲೂ ಅಜಾನ್ ವಿರುದ್ಧ ಅಭಿಯಾನ ಶುರುವಾ ಗಿದ್ದು, ಮಂಡ್ಯದ ಅರಕೇಶ್ವರ ದೇವಸ್ಥಾನದಲ್ಲಿ ಮುಂಜಾನೆ 5 ಗಂಟೆಯಿಂದಲೇ ಅರ್ಚಕರು ಧ್ವನಿವರ್ಧಕದ ಮೂಲಕ ಭಕ್ತಿಗೀತಿ ಹಾಕಿದ್ದಾರೆ.
ಇನ್ನೂ ಇತ್ತ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲೂ ಕೂಡಾ ಬೆಳಿಗ್ಗೆ ದೇವಸ್ಥಾನಗಳಲ್ಲಿ ಚಟುವಟಿಕೆಗಳು ಕಂಡು ಬಂದವು ನಗರದ ಹಳೇ ಹುಬ್ಬಳ್ಳಿಯ ದಿಡ್ಡಿ ಹನುಮಂತ ದೇವಸ್ಥಾನದಲ್ಲಿ ಶ್ರೀರಾಮ ಸೇನಾ ಸಂಘಟನೆಯ ಕಾರ್ಯ ಕರ್ತರು ಬೆಳ್ಲಂ ಬೆಳಿಗ್ಗೆ ದೇವಸ್ಥಾನದಲ್ಲಿ ಹಾಡು ಹಾಡುತ್ತಾ ಅಭಿಯಾನಕ್ಕೆ ಕೈ ಜೋಡಿಸಿದರು. ಇದರೊಂದಿಗೆ ರಾಜ್ಯಾ ದ್ಯಂತ ಈ ಒಂದು ಅಭಿಯಾನ ಸಂಪೂರ್ಣವಾಗಿ ಯಶಸ್ಸು ಗೊಂಡಿದೆ.