ಧಾರವಾಡದ ಬಾಲಕಿಯ ಚಿತ್ರಕಲಾ ಪ್ರತಿಭೆಗೆ ಮೆರಗು – ಪುಟ್ಟ ಬಾಲಕಿಯ ಕಲೆ ಗುರುತಿಸಿದ ಇಂಡಿಯನ್ ಮೊಡಲ್ ಆಫೀಸಿಯಲ್ಸ್

Suddi Sante Desk

ಧಾರವಾಡ –

ಹತ್ತನೇಯ ತರಗತಿಯಲ್ಲಿ ಓದುತ್ತಿರುವ ಬಾಲಕಿಯೊಬ್ಬಳ ಕಲಾ ಪ್ರತಿಭೆಯನ್ನು ಇಂಡಿಯನ್ ಮಾಡಲ್ ಆಫೀಸಿಯಲ್ಸ್ ಸಂಸ್ಥೆ ಗುರುತಿಸಿದೆ. ಹೌದು ಧಾರವಾಡದ ಕಮಲಾಪೂರ ಬಾಲಕಿ ಅಶ್ವೀನಿ ಚ ರಾಚಯ್ಯನವರ ಇವರ ಕಲಾ ಪ್ರತಿಭೆಯನ್ನು ದೇಶದ ಇಂಡಿಯನ್ ಮಾಡಲ್ ಆಫೀಸಿಯಲ್ಸ್ ಸಂಸ್ಥೆ ಗುರುತಿಸಿ ಸ್ಪರ್ಧೆಗೆ ಆಹ್ವಾನವನ್ನು ನೀಡಿದೆ.

ಸ್ಕೇಚ್ ಪೆಂಟಿಂಗ್ ನಲ್ಲಿ ಅದ್ಬುತವಾಗಿ ಗುರುತಿಸಿಕೊಂಡಿರುವ ಈ ಬಾಲಕಿಯ ಕಲಾಪ್ರತಿಭೆಯನ್ನು ಈ ಒಂದು ಸಂಸ್ಥೆ ಗುರುತಿಸಿದೆ.

ಸಾಮಾನ್ಯವಾಗಿ ಕಲೆ ಎನ್ನೊದು ದೇವರು ಕೊಟ್ಟ ಒಂದು ವರ . ಈ ಒಂದು ಕಲೆ ಯಾರಿಗೂ ಸುಲಭವಾಗಿ ಸಿಗೊದಲ್ಲ . ಸೂಕ್ತ ತರಭೇತಿ ಮಾರ್ಗದರ್ಶನ ನಿರಂತರ ಪ್ರಯತ್ನ ಹೀಗೆ ಎಲ್ಲವೂ ಇದ್ದಾಗ ಮಾತ್ರ ನಾವು ಯಾವುದಾದರೂ ಕಲೆಯನ್ನು ಒಲಿಸಿಕೊಳ್ಳಲು ಸಾಧ್ಯವಾಗುತ್ತದೆ.

ಆದರೆ ಈ ಬಾಲಕಿಗೆ ಯಾರ ಮಾರ್ಗದರ್ಶನ ತರಬೇತಿ ಹೀಗೆ ಯಾವುದು ಇಲ್ಲದೇ ಅದ್ಬುತ ಕಲಾವಿದೆಯಾಗಿದ್ದಾಳೆ.

ಹೌದು ಧಾರವಾಡದ ಕಮಾಲಾಪೂರ ನಿವಾಸಿಯಾಗಿರುವ ಈ ಬಾಲಕಿಯ ಚಿತ್ರಗಳನ್ನು ನೋಡುತ್ತಿದ್ದರೆ ನಿಜಕ್ಕೂ ನಂಬಲು ಸಾಧ್ಯವಾಗದ ಹಾಗೇ ಅದ್ಬುತವಾಗಿ ಚಿತ್ರಗಳನ್ನು ಬಿಡಿಸುತ್ತಾಳೆ ‌ಬಾಮಕಿ.

ಬಾಲ್ಯದಲ್ಲಿಯೇ ಇಂಥಹ ಕಲಾಪ್ರತಿಭೆಯನ್ನು ಬೆಳಸಿಕೊಂಡಿರುವ ಅಶ್ವೀನಿಗೆ ಸೂಕ್ತವಾದ ವೇದಿಕೆಯ ಕೊರತೆ ಎದ್ದು ಕಾಣುತ್ತಿದೆ. ಸಧ್ಯ ನಗರದ ದಕ್ಷಿಣ ಹಿಂದಿ ಪ್ರಚಾರ ಸಭಾದ ರಾಜೀವ ಗಾಂಧಿ ವಿದ್ಯಾಲಯದಲ್ಲಿ ಸಿಬಿಎಸ್ ಸಿ 10ನೇ ತರಗತಿ ಕಲಿಯುತ್ತಿದ್ದಾಳೆ.

ಬಾಲಕಿ ಅಶ್ವೀನಿ ತನ್ನ ಓದಿನೊಂದಿಗೆ ಅದ್ಬುತವಾಗಿ ಪೆಂಟಿಂಗ್ ಕಲೆಯನ್ನು ಕಲಿತುಕೊಂಡಿದ್ದಾಳೆ. ಮನೆಯಲ್ಲಿ ಯಾರು ಚಿತ್ರಕಲೆಯ ಕಲಾವಿದರಿಲ್ಲ ಹೀಗಿರುವಾಗ ಶಾಲೆಯಲ್ಲಿ ಕಲಿಸಿದಷ್ಟು ಹೇಳಿದಷ್ಟು ಕಲಿತುಕೊಂಡು ತನ್ನದೇಯಾದ ಆಸಕ್ತಿ ಉತ್ಸಾಹ ಹೀಗೆ ಎಲ್ಲವುಗಳೊಂದಿಗೆ ಸಧ್ಯ ಸ್ಕೇಚ್ ಮತ್ತು ಪೆಂಟಿಂಗ್ ಗಳಲ್ಲಿ ಅದ್ಬುತವಾದ ಕಲಾಕೃತಿಗಳನ್ನು ಬಿಡಿಸುತ್ತಿದ್ದಾರೆ.

ಮೊದಲು ಪೆನ್ಸಿಲ್ ನ್ನು ಉಪಯೋಗ ಮಾಡಿಕೊಂಡು ನಿಸರ್ಗ ಗೊಂಬೆ ದೇವರ ಕಲಾಕೃತಿ ಹೀಗೆ ಹಲವಾರು ಚಿತ್ರಗಳನ್ನು ಬಿಡಿಸುತ್ತಾ ಕಲೆಯಲ್ಲಿ ಹವ್ಯಾಸವನ್ನು ಆರಂಭಗೊಂಡ ಇವರ ಕಲೆ ಈಗ ದೇಶವನ್ನು ಪ್ರತಿನಿಧಿಸುವ ಸಂಸ್ಥೆಯೊಂದರ ಸ್ಪರ್ಧೆಯಲ್ಲಿ ಬೆಳೆದು ನಮ್ಮ ಮುಂದೆ ನಿಂತಿದೆ. ಮೊದಲು ಪ್ರಾಥಮಿಕ ಶಾಲೆಯಲ್ಲಿ ಅಧ್ಯಯನ ಮಾಡುವಾಗ ಆರಂಭಗೊಂಡ ಕಲೆ ಈಗ ಸ್ಪರ್ದೆಯ ಪಾಲ್ಗೊಳ್ಳುವ ಎತ್ತರವಾದ ಕಲಾವಿದೆಯಾಗಿ ಈ ಅಶ್ವೀನಿ ಬಾಲ್ಯದಲ್ಲಿಯೇ ಇಂಡಿಯನ್ ಮಾಡಲ್ಸ್ ಆಫೀಸಿಯಲ್ಸ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾಳೆ.

ಕಳೆದ ಐದಾರು ವರುಷಗಳಿಂದ ಸ್ಕೇಚ್ ಮತ್ತು ಪೆಂಟಿಂಗ್ ಗಳಲ್ಲಿ ಪರಿಣಿತಿಯಾಗಿರುವ ಅಶ್ವೀನಿ ಸದ್ಯ 70 ಕ್ಕೂ ಹೆಚ್ಚು ತನ್ನ ಕೈಯಲ್ಲಿ ಅರಳಿದ ಸುಂದರವಾದ ಕಲಾಕೃತಿಯ ಚಿತ್ರಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಪೊಸ್ ಮಾಡಿ ಹಾಕಿದ್ದಾರೆ. ಇನ್ ಸ್ಟಾ ಗ್ರಾಮ್ ನಲ್ಲಿ ಹಾಕಿದ ಎಲ್ಲಾ ಚಿತ್ರಗಳನ್ನು ನೋಡಿದ ಇಂಡಿಯನ್ ಮಾಡಲ್ಸ್ ಸಂಸ್ಥೆ ಸ್ಪರ್ಧೆಗೆ ಆಹ್ವಾನವನ್ನು ನೀಡಿತು. ಸಂಸ್ಥೆಯ ಆಹ್ವಾನದ ಮೇರೆಗೆ ಸ್ಪರ್ಧೆಯಲ್ಲಿ ಪಾಲ್ಲೊಂಡು ಮೊದಲನೇಯ ಸುತ್ತಿನಲ್ಲಿ ವಿಜೇತಳಾಗಿ ಈಗ ಪೈನಲ್ ಸುತ್ತಿಗೆ ಬಂದು ನಿಂತಿದ್ದಾರೆ.

ಪೆನ್ಸಿಲ್ ಮತ್ತು ಪೆನ್ನು ಹೀಗೆ ಇವೆರಡನ್ನು ಉಪಯೋಗ ಮಾಡಿಕೊಂಡು ಲಕ್ಷ್ಮೀ, ಗಣಪತಿ, ಸರಸ್ವತಿ, ದುರ್ಗಾದೇವಿ,ಯಕ್ಷಗಾನದ ಮೂರ್ತಿ, ಕಾರ್ಟೂನ್ಸ್ , ಮೆಹಂದಿ , ಟ್ಯಾಟೂಸ್ ,ಕೃಷ್ಣಾ , ಹೀಗೆ ಅದ್ಬುತವಾಗಿ ಒಂದಕ್ಕಿಂತ ಒಂದು ಚೆಂದವಾಗಿ ಕಲಾ ಕುಂಚದಿಂದ ಕಲಾಕೃತಿಗಳನ್ನು ಅಶ್ವೀನಿ ರಚನೆ ಮಾಡಿದ್ದಾಳೆ. ಇವೆಲ್ಲದರ ನಡುವೆ ಮುಖ್ಯವಾಗಿ ಸದ್ಯ ವಯಸ್ಸು ಚಿಕ್ಕದಾದರೂ ದೇಶದ ಪರವಾಗಿ ಈಗ ಸಾಮಾಜಿಕ ಜಾಲ ತಾಣಗಳ ಮೂಲಕ ತಮ್ಮ ಕಲಾಕೃತಿಗಳನ್ನು ಗುರುತಿಸಿಕೊಂಡು ದೇಶದ ಇಂಡಿಯನ್ ಮಾಡಲ್ಸ್ ಆಫೀಸಿಯಲ್ ಸಂಸ್ಥೆಯು ಇವರನ್ನು ಗುರುತಿಸಿ ಸ್ಪರ್ಧೆಗೂ ಆಮಂತ್ರಣವನ್ನು ನೀಡಿದೆ.

ಈಗಾಗಲೇ ಮೊದಲ ಸುತ್ತಿನಲ್ಲಿ ಪ್ರಥಮ ಸ್ಥಾನ ಗಳಿಸಿಕೊಂಡು ಎರಡನೇಯ ಹಂತಕ್ಕೇ ಕಾಲಿಟ್ಟಿದ್ದು ರಾಜ್ಯದ ಅದರಲ್ಲೂ ಧಾರವಾಡ ಜಿಲ್ಲೆಯ ವಿದ್ಯಾಕಾಶಿ ಬಾಲಕಿ ಎನ್ನೊದು ನಮ್ಮೇಲ್ಲರಿಗೂ ಹೆಮ್ಮೆಯಾಗಿದ್ದು ಈ ಬಾಲಿಕಿಯ ಕಲಾ ಪ್ರತಿಭೆ ಇಂಡಿಯನ್ ಮಾಡಲ್ಸ್ ನಲ್ಲಿ ಇನ್ನಷ್ಟು ಗುರುತಿಸಬೇಕೆಂದರೆ ನಾವು ನೀವು ಮಾಡಬೇಕಾಗಿರೊದು ಪುಟ್ಟ ಕಲಾ ಪ್ರತಿಭೆಗೆ ನಮ್ಮಿಂದ ನಿಮ್ಮಿಂದ ಇನ್ ಸ್ಟಾ ಗ್ರಾಮ್ ನಲ್ಲಿ ಒಂದೇ ಒಂದು ಲೈಕ್ ಕೊಟ್ಟಾಗ ಗೆಲುವು ಸಾಧ್ಯವಾಗುತ್ತದೆ.

ಅಂದಾಗ ಅಶ್ವೀನಿಯ ಕಲಾ ಪ್ರತಿಭೆಗೆ ಒಂದು ಮೆಚ್ಚುಗೆ ನಮ್ಮಿಂದ ಸಿಕ್ಕಂತಾಗುತ್ತದೆ.
ಓಟ್ ಮಾಡಬೇಕಾದ ವಿಧಾನ ನಿಮ್ಮಲ್ಲಿ ಸ್ಮಾರ್ಟ್ ಪೊನ್ ಇದ್ದರೇ ಇನ್ ಸ್ಟಾ ಗ್ರಾಮ್ ನಲ್ಲಿ
@ashu512005 -@indian_models.official ಈ ಐಡಿಗೆ ಲಾಗಿನ್ ಆಗಿ ನಂತರ ಓಟ್ ಮಾಡಿ ಪುಟ್ಟ ಕಲಾ ಪ್ರತಿಭಗೆ ನಿಮ್ಮದೊಂದು ಲೈಕ್ ಇರಲಿ .

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.