ಹುಬ್ಬಳ್ಳಿ –
ರಾಜ್ಯ ರಾಜಕಾರಣದಲ್ಲಿ ಯಾರು ಮುಖ್ಯಮಂತ್ರಿ ಆಗುತ್ತಾರೆ ಎಂಬ ಕದನ ಕುತೂಹಲ ನಡುವೆ ರಾಜಾ ಹುಲಿ ಮಾನಸ ಪುತ್ರ ಬಸವರಾಜ ಬೊಮ್ಮಾಯಿ ಅವರು ಅಚ್ಚರಿಯ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಯಿತು.ಆದರೆ ನೂತನ ಮುಖ್ಯಮಂತ್ರಿ ಯಾಗಿ ಮೊದಲ ಭಾರಿಗೆ ತವರು ಜಿಲ್ಲೆ ಜೊತೆಗೆ ಹುಟ್ಟಿದ ಊರು ಹುಬ್ಬಳ್ಳಿಗೆ ಆಗಮಿಸಿದ ಬಸವ ರಾಜ ಬೊಮ್ಮಾಯಿ ಸ್ವಪಕ್ಷಿಯರ ಅಸಮಾಧಾನ ದಿಂದ ಏಕಾಂಗಿಯಾಗಿದ್ದಾರಾ ಎಂಬ ಪ್ರಶ್ನೆ ಕಾಡು ತ್ತಿದೆ.
ಬೊಮ್ಮಾಯಿ ಅವರು ಆಗಮನದ ವೇಳೆ ಬಿಜೆಪಿ ಮುಖಂಡರು ಬಾರದೇ ಇರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.ಅಲ್ಲದೇ ಸಿಎಂ ಬೊಮ್ಮಾಯಿಯಿಂದ ಇಲ್ಲಿನ ನಾಯಕರು ಅಂತರ ಕಾಯ್ದುಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಇತ್ತ ಸಿಎಂ ಜೊತೆಗೆ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ,ರಾಜ್ಯ ಬಿಜೆಪಿ ಪ್ರಧಾನ ಕಾರ್ಯ ದರ್ಶಿ ಮಹೇಶ ತೆಂಗಿನಕಾಯಿ ಮಾತ್ರ ಕಾಣಿಸಿಕೊಂ ಡಿದ್ದಾರೆ.ಆದರೆ ಧಾರವಾಡ ಪಶ್ಚಿಮ ಶಾಸಕ ಅರವಿಂದ ಬೆಲ್ಲದ್, ಕಲಘಟಗಿ ಶಾಸಕ ನಿಂಬಣ್ಣನ ವರ್, ಜಗದೀಶ್ ಶೆಟ್ಟರ್, ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ,ಪರಿಷತ್ ಸದಸ್ಯ ಎಸ್.ವಿ. ಸಂಕನೂರು,ಮಾಜಿ ಎಂಎಲ್ಸಿ ಶಂಕರಣ್ಣ ಮುನವಳ್ಳಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ್ ಕುಂದಗೋಳಮಠ ಸೇರಿದಂತೆ ಜಿಲ್ಲೆಯ ಬಹುತೇಕ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಿಎಂ ಬೊಮ್ಮಾಯಿಯಿಂದ ದೂರ ಉಳಿದಿದ್ದರು.
ಬೊಮ್ಮಾಯಿ ಸಿಎಂ ಆಯ್ಕೆ ಆದಾಗಲು ವಿಜಯೋ ತ್ಸವದಲ್ಲಿ ಬಿಜೆಪಿ ಕಾರ್ಯಕರ್ತರು ಕಾಣಿಸಿಕೊಂಡಿರ ಲಿಲ್ಲ.ಕೇವಲ ಬೊಮ್ಮಾಯಿ ಅಭಿಮಾನಿಗಳು ಮಾತ್ರ ಸಂಭ್ರಮಾಚರಣೆ ಮಾಡಿದ್ದರು.ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕಾಂಗ್ರೆಸ್ ಶಾಸಕ ಪ್ರಸಾದ ಅಬ್ಬಯ್ಯ, ಜೆಡಿಎಸ್ ನಾಯಕ ಹಾಗೂ ಸಭಾಪತಿ ಬಸವರಾಜ್ ಹೊರಟ್ಟಿ ಆಗಮಿಸಿ ಶುಭ ಕೋರಿದರು.
ಇದಲ್ಲದೇ ಬೊಮ್ಮಾಯಿ ಅಭಿಮಾನಿಗಳು, ಶಿಗ್ಗಾಂವ ಸವಣೂರು ಹಾಗೂ ಹಾವೇರಿ,ಧಾರವಾಡ ಗ್ರಾಮೀಣ ಭಾಗದಿಂದ ಬಿಜೆಪಿ ಕಾರ್ಯಕರ್ತರಿಂದ ಸಿಎಂಗೆ ಸ್ವಾಗತ ಕೋರಲಾಯಿತೇ ವಿನಃ ಇಲ್ಲಿನ ಜನನಾಯಕರು ಮಾತ್ರ ಅಂತರ ಕಾಪಾಡಿಕೊಂಡಿ ದ್ದಾರೆ.
ಇದಲ್ಲದೇ ಜಗದೀಶ್ ಶೆಟ್ಟರ್,ಪ್ರಹ್ಲಾದ್ ಜೋಶಿ ಬೆಂಬಲಿಗ ಬಿಜೆಪಿ ಕಾರ್ಯಕರ್ತರು, ಮುಖಂಡರು ಮಾತ್ರ ದೂರ ಉಳಿದಿದ್ದಾರೆ.
ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವನಾಗಲು ಇಷ್ಟಪಡುವುದಿಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿಕೆ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಸಿಎಂ ಬೊಮ್ಮಾ ಯಿ ಏಕಾಂಗಿಯಾಗಿರುವುದು ಸಾಕಷ್ಟು ಕುತೂಹ ಲಕ್ಕೆ ಕಾರಣವಾಗಿದೆ.ಈ ಭಿನ್ನಾಭಿಪ್ರಾಯ ಎಲ್ಲಿಗೆ ಹೋಗಿ ತಲುಪುತ್ತದೆ ಎಂಬುದನ್ನು ಕಾಲವೇ ಉತ್ತರ ನೀಡುತ್ತದೆ.