ಉತ್ತರಪ್ರದೇಶ –
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎರಡನೇಯ ಬಾರಿಗೆ ಗೆದ್ದು ಬೀಗಿದ್ದಾರೆ.ಹೌದು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಮಾಡಿದ ಇವರು ಈ ಬಾರಿ ಅಖಿಲೇಶ್ ಯಾದವ್ ವಿರುದ್ದ ಗೆದ್ದು ದಾಖಲೆ ಬರೆದಿದ್ದಾರೆ.ಉತ್ತಮ ಆಡಳಿತ ವೈಖರಿ ಮಾತ್ರ ಗೆಲುವಿನ ಹಾದಿ ಎಂದು ಸಾಬೀತುಪಡಿಸಿರುವ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಗೋರಖ್ಪುರ ಕ್ಷೇತ್ರದಲ್ಲಿ ಬರೋಬ್ಬರಿ 1ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಚುನಾವಣಾ ಪ್ರಚಾರದುದ್ದಕ್ಕೂ ಹಾವು ಮುಂಗುಸಿಯಂತೆ ಇದ್ದ ಅಖಿಲೇಶ್ ಯಾದವ್ ಹಾಗೂ ಯೋಗಿ ಆದಿತ್ಯನಾಥ್ ಕೊನೆಗೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿ ದ್ದಾರೆ.ಯೋಗಿ ಆದಿತ್ಯನಾಥ್ ಗೋರಖ್ಪುರದಲ್ಲಿ ಗೆಲುವು ಸಾಧಿಸಿದ್ದರೆ ಅಖಿಲೇಶ್ ಕರ್ಹಾಲ್ನಿಂದ ವಿಜೇತರಾಗಿ ದ್ದಾರೆ ಗೋರಖ್ಪುರ ಕ್ಷೇತ್ರದಲ್ಲಿ ತಮ್ಮ ಪ್ರತಿಸ್ಪರ್ಧಿಗಳಿಂದ ಯೋಗಿ ಆದಿತ್ಯನಾಥ್ ಹೆಚ್ಚಿನ ಹೋರಾಟವನ್ನು ಎದುರಿಸಲೇ ಇಲ್ಲ. ಹೀಗಾಗಿ ಅವರು 1 ಲಕ್ಷಕ್ಕೂ ಅಧಿಕ ಮತಗಳ ಅಂತರ ದಿಂದ ಗೆಲುವು ದಾಖಲಿಸಿದ್ದಾರೆ.ಯೋಗಿ ಆದಿತ್ಯನಾಥ್ ಲಕ್ನೋದಲ್ಲಿರುವ ತಮ್ಮ ಅಧಿಕೃತ ನಿವಾಸದಿಂದ ಚುನಾವ ಣಾ ಫಲಿತಾಂಶವನ್ನು ವೀಕ್ಷಿಸುತ್ತಿದ್ದರೆ ಇತ್ತ ಯೋಗಿ ಬೆಂಬ ಲಿಗರು ಮಠದಲ್ಲಿ ಹಾಗೂ ಪಕ್ಷದ ಕಚೇರಿಯಲ್ಲಿ ಸಂಭ್ರಮಾ ಚರಣೆಯನ್ನು ಆರಂಭಿಸಿದರು.
ಪರಶುರಾಮ ಗೌಡರ ಜೊತೆ ಮಂಜು ಸರ್ವಿ ರಾಜಕೀಯ ಬ್ಯೂರೋ ಡೆಸ್ಕ್ ಸುದ್ದಿ ಸಂತೆ ಡೆಸ್ಕ್