ಹುಬ್ಬಳ್ಳಿ –
ಸೇತುವೆಯ ಮೇಲೆ ಬಸ್ ವೊಂದು ಬ್ಲಾಸ್ಟ್ ಆಗಿರುವ ವಿಡಿಯೋ ವೊಂದನ್ನು ಚಿಗರಿ ಬಸ್ ಗೆ ಹೋಲುವಂತೆ ಮಾಡಿ ಹರಿ ಬಿಟ್ಟಿದ್ದಾರೆ. ಮುಂಬೈನಲ್ಲಿ ನಡೆದ ಘಟನೆಯ ವಿಡಿಯೋ ಇದಾಗಿದ್ದು. ಇದನ್ನು ಹುಬ್ಬಳ್ಳಿಯ ಉಣಕಲ್ಲ್ ಸೇತುವೆಯ ಮೇಲೆ ಕಾಣುವಂತಹ ವಿಡಿಯೋ ಇದಾಗಿದೆ ಎಂದುಕೊಂಡು ಕೆಲವರು ಹುಬ್ಬಳ್ಳಿಯ ಉಣಕಲ್ಲ್ ಸೇತುವೆಯ ಮೇಲೆ ನಡೆದಿದೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿ ಬಿಟ್ಟಿದ್ದಾರೆ. ಹೀಗಾಗಿ ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಈಗ ವೈರಲ್ ಆಗಿದೆ. ಈ ಹಿಂದೆ ಕೂಡಾ ಧಾರವಾಡದ ನವಲೂರು ಸೇತುವೆಯ ಮೇಲೆ ನಡೆದಿದೆ ಎಂದು ಕೆಲ ಕಿಡಗೇಡಿಗಳು ಪೊಟೊಗಳನ್ನು ಹರಿಬಿಟ್ಟಿದ್ದರು. ಈಗ ಮತ್ತೊಂದು ವಿಡಿಯೋ ಹರಿ ಬಿಟ್ಟದ್ದು ಇದರಿಂದ ಸಾರ್ವಜನಿಕರು ಗೊಂದಲದಲ್ಲಿದ್ದಾರೆ. ಈ ಒಂದು ವಿಡಿಯೋ ನೋಡಿದ್ರೆ ಹುಬ್ಬಳ್ಳಿಯ ಉಣಕಲ್ಲ್ ಸೇತುವೆಯ ಹಾಗೇ ಕಾಣುತ್ತದೆ ಹೀಗಾಗಿ ಮುಂಬೈ ದಲ್ಲಿನ ವಿಡಿಯೋ ವನ್ನು ಹುಬ್ಬಳ್ಳಿಯ ಉಣಕಲ್ಲ್ ಗೆ ಹೋಲಿಕೆ ಮಾಡಿರು ದುಷ್ಕರ್ಮಿಗಳು ವಿಡಿಯೋ ಹರಿಬಿಟ್ಟಿದ್ದು ಇದು ಇಲ್ಲಿಯ ವಿಡಿಯೋ ಅಲ್ಲ ಅಲ್ಲ ಇದೊಂದು ನಕಲಿ ವಿಡಿಯೋ.