ಧಾರವಾಡ –
ರಸ್ತೆಯನ್ನು ಕ್ರಾಸ್ ಮಾಡುವ ವಿಚಾರದಲ್ಲಿ ಚಿಗರಿ ಬಸ್ ಚಾಲಕನನ್ನು ಥಳಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ರಾಯಾಪೂರದ RTO ಕಚೇರಿ ಮುಂದೆ ನಡೆದಿದೆ. ಧಾರವಾಡದಿಂದ ಹುಬ್ಬಳ್ಳಿಯ ಕಡೆಗೆ ಚಿಗರಿ 100 ವೇಗದೂತ ಬಸ್ ಹೋಗುತ್ತಿತ್ತು. ಸಿಗ್ನಲ್ ಇದೆ ಎಂದುಕೊಂಡು ವೇಗವಾಗಿ ಬಸ್ ಹೋಗುತ್ತಿತ್ತು. ಇತ್ತ ಸಿಗ್ನಲ್ ನೊಡದೇ ಇಂಡಿಕಾ ಕಾರು ಚಾಲಕ ರಸ್ತೆಯನ್ನು ಕ್ರಾಸ್ ಮಾಡುಲು ಮುಂದಾಗಿದ್ದಾರೆ. ಕಾರು ಬರುವುದನ್ನು ನೋಡಿದ ಚಿಗರಿ ಬಸ್ ಚಾಲಕ ರಾಜು ದೊಡಮನಿ ಬಸ್ ನ್ನು ನಿಲ್ಲಿಸಿದ್ದಾರೆ. ಕ್ರಾಸಿಂಗ್ ಮಾಡುವಾಗ ನೋಡಕೊಂಡು ಹೋಗಲು ಬರೊದಿಲ್ವಾ ಎಂದು ಕಾರು ಚಾಲಕ ಬಸ್ ಚಾಲಕನಿಗೆ ಕೇಳಿದ್ದಾರೆ. ಸಿಗ್ನಲ್ ಇದೆ ಇದು ಬಿಆರ್ ಟಿಎಸ್ ಟ್ಯಾಕ್ ಹೀಗಾಗಿ ತಪ್ಪೇನಿದೆ ಎಂದು ಹೇಳಿದ್ದಾರೆ. ಹೀಗೆ ಚಾಲಕ ಹೇಳುತ್ತಿದ್ದಂತೆ ಇತ್ತ ಇಂಡಿಕಾ ಕಾರು ಚಾಲಕ ಕಾರಿನಲ್ಲಿದ್ದ ಕಬ್ಬಿಣದ ರಾಡ್ ತಗೆದುಕೊಂಡು ಬಂದು ಬಡಿದಿದ್ದಾರೆ.
ಕಣ್ಣು ತಲೆಗೆ ತೀವ್ರ ಪ್ರಮಾಣದಲ್ಲಿ ಗಾಯಗಳಾಗಿವೆ. ಇನ್ನೂ ಈ ಒಂದು ಘಟನೆ ನಡೆಯುತ್ತಿದ್ದಂತೆ ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ಥವಾಯಿತು. ಇನ್ನೂ ನಂತರ ವಿಷಯ ತಿಳಿದ ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸರು ಸ್ಥಳಕ್ಕೇ ಆಗಮಿಸಿ ಪರಿಶೀಲನೆ ಮಾಡಿದರು.
ಇನ್ನೂ KA 26 M 5501 ಇಂಡಿಕಾ ಕಾರಿನ ಚಾಲಕನೇ ಹಲ್ಲೆ ಮಾಡಿ ಪರಾರಿಯಾಗಿದ್ದು ಸಧ್ಯ ಈ ಕುರಿತಂತೆ ಸಂಚಾರಿ ಪೊಲೀಸರು ಇಂಡಿಕಾ ಕಾರು ಮಾಲೀಕನ ಮೇಲೆ ದೂರು ದಾಖಲು ಮಾಡಿಕೊಂಡು ಬಂಧನಕ್ಕೇ ಜಾಲ ಬೀಸಿದ್ದಾರೆ.