This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ಚಿಕ್ಕಬಳ್ಳಾಪುರ ಜಿಲ್ಲೆಯ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (R) ಜಿಲ್ಲಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ M.R. ಸುಬ್ಬಾರೆಡ್ಡಿ ಅವಿರೋಧ ವಾಗಿ ಆಯ್ಕೆ ಅನುಮೋದಿಸಿದ ರಾಜ್ಯ ಘಟಕ…..

WhatsApp Group Join Now
Telegram Group Join Now

ಚಿಕ್ಕಬಳ್ಳಾಪುರ –

ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (R) ರಾಜ್ಯ ಘಟಕ ಹುಬ್ಬಳ್ಳಿಯ ಅಡಿಯಲ್ಲಿ ಕರ್ನಾಟಕ ಸಮಸ್ತ ಗ್ರಾಮೀಣ ಪ್ರದೇಶ ದ 1,51,000 ಶಿಕ್ಷಕರ ಬೃಹತ್ ಸಂಘಟನೆ ಯನ್ನು ಅಶೋಕ್. M.ಸಜ್ಜನ್ ಸಾರಥ್ಯದಲ್ಲಿ ಇಡೀ ರಾಜ್ಯಾ ದ್ಯಂತ ಸಂಘಟನೆಗೊಳಿಸಿ ರಾಜ್ಯದ ಶಿಕ್ಷಕರ ಹಿತಕಾ ಪಾಡಲು ಆಹೋರಾತ್ರಿ ಶ್ರಮವಹಿಸಿ ಕ್ರಿಯಾಶೀಲ ಸಂಘಟನೆಯ ನೇತಾರರಾಗಿ ಹೊರಹೊಮ್ಮಿರು ವುದು ಇಡೀ ರಾಜ್ಯ ಗಮನಿಸಿದೆ.

ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ಜರೂರಾಗಿ ಗ್ರಾಮೀಣ ಶಿಕ್ಷಕರ ಸಂಘ ರಾಜ್ಯ ಘಟಕ ಹುಬ್ಬಳ್ಳಿ ನಿರಂತರವಾಗಿ ಶಿಕ್ಷಕರ ಕಾರ್ಯ ನಿರ್ವಹಿಸುತ್ತಿರು ವುದು ಶ್ಲಾಘನೀಯ.

ಮಕ್ಕಳ ಶೈಕ್ಷಣಿಕ ಗುಣಮಟ್ಟ ಕಾಪಾಡುವಲ್ಲಿ ಗ್ರಾಮೀಣ ಶಿಕ್ಷಕರ ಸಂಘಟನೆಯು ತನ್ನ ಸೇವೆಯ ನ್ನು ನಿರಂತರವಾಗಿ ಸಮಸ್ತ ಶಿಕ್ಷಕರಿಗೆ ಮುಡುಪಾಗಿ ಟ್ಟಿದ್ದು ಗ್ರಾಮೀಣ ಶಿಕ್ಷಕರ ಸಂಘಟನೆಯಲ್ಲಿ ಹೋ ರಾಟದ ಹಾದಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ರಿಯಾಶೀಲ ಸಂಘಟಕರು,ಶಿಕ್ಷಕರ ನೇತಾರರು ಕಾರ್ಯನಿರ್ವಹಿಸುತ್ತಿದ್ದಾರೆ.

ಈಗಾಗಲೇ ತಾಲೂಕು ಜಿಲ್ಲಾ ಮತ್ತು ರಾಜ್ಯ ಮಟ್ಟದ ಘಟಕಗಳು ನಾಡಿನಾದ್ಯಂತ ಉತ್ತಮವಾಗಿ ಕೆಲಸ ಮಾಡುತ್ತಿವೆ. ಕೆಲವು ಶಿಕ್ಷಕರು ಬೇರೆ ಸಂಘಟನೆಗಳ ಬಗ್ಗೆ ಮೂಗುತೂರಿಸಿ ಗ್ರಾಮೀಣ ಶಿಕ್ಷಕರ ಸಂಘಟ ನೆಗೆ ಒಡಕು ಉಂಟು ಮಾಡಲು ಪ್ರಯತ್ನಿಸಿದಾಗ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(R) ರಾಜ್ಯ ಘಟಕ ಹುಬ್ಬಳ್ಳಿ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಅದರಲ್ಲಿ ನಿಷ್ಕ್ರಿಯಗೊಂಡ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪದಾಧಿಕಾರಿಗಳನ್ನು ಗಮನಿಸಿ ಅವರ ಬಗ್ಗೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಹುದ್ದೆ ಖಾಲಿ ಇದ್ದು ರಾಜ್ಯ ಘಟಕದಿಂದ ಖಾಲಿ ಇರುವ ಹುದ್ದೆಯನ್ನು ಜರೂರಾಗಿ ತುಂಬಿಕೊಳ್ಳಿ ಎಂದು ಮಾರ್ಗದರ್ಶನ ನೀಡಿದಾಗ ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷರ ಸಾರಥ್ಯದಲ್ಲಿ 6 ತಾಲೂಕುಗಳ ಶಿಕ್ಷಕರ ಜಿಲ್ಲಾ ಪದಾಧಿಕಾರಿಗಳ ಜೊತೆ ನಿರಂತರ ವಾಗಿ ಚರ್ಚಿಸಿ ಚಿಕ್ಕಬಳ್ಳಾಪುರದಲ್ಲಿ ಸಭೆ ಕರೆದು ಅಲ್ಲಿ ಒಂದು ನಿರ್ಣಯಕ್ಕೆ ಬರಲಾಯಿತು

ಎಂ ಆರ್ ಸುಬ್ಬಾರೆಡ್ಡಿ ಅವಿರೋಧ ಆಯ್ಕೆ:-

ಚಿಕ್ಕಬಳ್ಳಾಪುರ ತಾಲ್ಲೂಕು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕರಾದ ಎನ್ ಆರ್ ಸುಬ್ಬಾರೆಡ್ಡಿ ಅವರು ಮಾಜಿ KSPSTA ಸದಸ್ಯರು CRP, BRP, ಸಂಘದ ಮಾಜಿ ಅಧ್ಯಕ್ಷರು, ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಹಾಲಿ ಅಧ್ಯಕ್ಷರು, KGRPSTA ಚಿಕ್ಕಬಳ್ಳಾಪುರ ತಾಲ್ಲೂಕಿ ನಲ್ಲಿ ಅಧ್ಯಕ್ಷರಾಗಿ ಅನುಭವ ಇರುವವರು ರೆಡ್ ಕ್ರಾಸ್ ಸಂಸ್ಥೆಯ ಆಜೀವ ಸದಸ್ಯರು ಉತ್ತಮ ಶಿಕ್ಷಕರ ನೇತಾರರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಸಮಿತಿ ಯಲ್ಲಿ ಅವಿರೋಧವಾಗಿ ಜಿಲ್ಲಾ ಪ್ರಧಾನ ಕಾರ್ಯ ದರ್ಶಿಗಳಾಗಿ ಕಾರ್ಯನಿರ್ವಹಿಸಲು ಸರ್ವಾನು ಮತದಿಂದ ಆಯ್ಕೆ ಮಾಡಿದರು

ಎಂ. ಆರ್. ಸುಬ್ಬಾರೆಡ್ಡಿ ರವರ ಸಂಘಟನಾ ಶೀಲ ನುಡಿಗಳು – ನನಗೆ ವಿವಿಧ ಸಂಘಟನೆಗಳಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಿರುವ ಹೆಚ್ಚು ಅನುಭವವಿರುವುದರಿಂದ ನಮ್ಮ ಚಿಕ್ಕಬಳ್ಳಾಪುರದ ಶಿಕ್ಷಕರ ಜ್ವಲಂತ ಸಮಸ್ಯೆಗಳಿಗೆ ನಮ್ಮ ಜಿಲ್ಲಾ ಘಟಕದಿಂದ ಸ್ಪಂದಿಸಿ ಜಿಲ್ಲೆಯ ಶಿಕ್ಷಕರ ಹಿತ ಕಾಪಾಡಲು ರಾಜ್ಯ ಘಟಕದ ಮಾರ್ಗದರ್ಶನದಂತೆ ಜಿಲ್ಲಾಧ್ಯಕ್ಷರ ಹಾಗೂ ಜಿಲ್ಲಾ ಘಟಕದೊಡನೆ ಸೇರಿಕೊಂಡು ಉತ್ತಮ ಕೆಲಸವನ್ನು ಮಾಡುತ್ತೇನೆ ಎಂದು ಅಭಿಪ್ರಾಯಿಸಿದರು

ಚಿಕ್ಕಬಳ್ಳಾಪುರ ಜಿಲ್ಲೆಯ ಗ್ರಾಮೀಣ ಸಂಘಟನೆಯ ಕೆಲಸ ಕಾರ್ಯಗಳು ಇನ್ನೂ ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಲು ರಾಜ್ಯ ಘಟಕ ಹುಬ್ಬಳ್ಳಿಯ ಮಾನ್ಯ ರಾಜ್ಯಾಧ್ಯಕ್ಷರಾದ ಅಶೋಕ್. M. ಸಜ್ಜನ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜು ನ. C.ಉಪ್ಪಿನ,ರಾಜ್ಯ ಗೌರವಾಧ್ಯಕ್ಷರಾದ L.I.ಲಕ್ಕಮ್ಮನವರ್ ,ರಾಜ್ಯಕೋಶಾಧ್ಯಕ್ಷರಾದ ಎಸ್.F. ಪಾಟೀಲ್,ರಾಜ್ಯ ಉಪಾಧ್ಯಕ್ಷರುಗಳಾದ ಹನುಮಂತಪ್ಪ ಮೇಟಿ,ರಾಮಪ್ಪ ಹಂಡಿ, ಮಹಮ ದ್ ರಫೀ, ಅರಸೀಕೆರೆ ಶ್ರೀಮತಿ ಕುಸುಮ, ರಾಜ್ಯ ಸಹ ಕಾರ್ಯದರ್ಶಿಗಳಾದ ಶ್ರೀ ಶರಣಬಸವ ಬನ್ನಿಗೋಳ ಶ್ರೀಮತಿ ಅರಸೀಕೆರೆ ಲಕ್ಷ್ಮೀದೇವಮ್ಮ, ಶ್ರೀಮತಿ ವಿಜಯಲಕ್ಷ್ಮಿ, ಬೆಂಗಳೂರು ವಿಭಾಗ ಸಂಚಾಲಕರು ಹಾಗೂ ಕೋಲಾರ ಜಿಲ್ಲೆ ಅಧ್ಯಕ್ಷರು ಶ್ರೀನಿವಾಸ್, ವೆಂಕಟೇಶ್ ಗೌಡ, ಮೈಲನಹಳ್ಳಿ ಮಲ್ಲಿಕಾರ್ಜುನ,ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ರಾದ ಶ್ಯಾಮೇಗೌಡ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷರು K.V.ಶ್ರೀಕಾಂತ್ ಹಾಗೂ ರಾಜ್ಯ ಘಟಕದ ವಿವಿಧ ಸರ್ವ ಪದಾಧಿಕಾರಿಗಳು ಅನುಮೋದಿಸಿ ಸಹಕರಿಸುವುದರಿಂದ ಚಿಕ್ಕಬಳ್ಳಾ ಪುರ ಜಿಲ್ಲಾ ಘಟಕ ಧನ್ಯವಾದಗಳನ್ನು ಸಲ್ಲಿಸಿದೆ

ಚಿಕ್ಕಬಳ್ಳಾಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀ ಎಂ. ಆರ್. ಸುಬ್ಬಾರೆಡ್ಡಿ ಆಯ್ಕೆಯಾಗಿರುವುದರಿಂದ ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷರಾದ ಶ್ರೀ ಆರ್. ನಾರಾಯಣಸ್ವಾಮಿ ಚಿಂತಾಮಣಿ, ಜಿಲ್ಲಾ ಪದಾಧಿಕಾರಿಗಳಾದ ಮೇಲೂರು ಬೈಯಣ್ಣ, ಚಂದ್ರಕಲಾ, ವಿ. ಸಿ ನಾಗರಾಜಪ್ಪ ಗುಂಡಮಗೆರೆ ನಾಗೇಶ್, ಎಸ್ಸಿಎಸ್ಟಿ ಸೀನಪ್ಪ, ಚಿಂತಾಮಣಿ ತಾಲೂಕು ಅಧ್ಯಕ್ಷರಾದ ಕೈವಾರ ಶಿವಾರೆಡ್ಡಿ, ಪ್ರಧಾನ ಕಾರ್ಯದರ್ಶಿಗಳಾದ ಬಾಬುರೆಡ್ಡಿ, ತಾಲೂಕು ಪದಾಧಿಕಾರಿಗಳಾದ ಡಿ.ಎಸ್. ಚೌಡರೆಡ್ಡಿ, ಈಶ್ವರರೆಡ್ಡಿ, ಟಿ.ವಿ ಚಂದ್ರಶೇಖರ್, ಜಿ. ರಾಮರೆಡ್ಡಿ, P.V ನಾರಾಯಣಸ್ವಾಮಿ KM.ಶಾಂತಮ್ಮ, ರಜಿಯಾ ಸುಲ್ತಾನ, ಬಿ.ಎಂ ಸುನಿತಾ, K.ಶಿವಣ್ಣ, C.M ದೇವತಾರವರು. ಗುಡಿಬಂಡೆ ತಾಲ್ಲೂಕಿನ ಮಂಜುನಾಥ್, ಶಿಲ್ಪ ನಾಗೇಶ್ ಶಿಡ್ಲಘಟ್ಟ ತಾಲ್ಲೂಕಿನ ಅಧ್ಯಕ್ಷರಾದ ಚಂದ್ರಶೇಖರ್, ಪದಾಧಿಕಾರಿಗಳಾದ ಪ್ರಸನ್ನಕುಮಾರ್, ನಾಗರಾಜು ಕಸ್ತೂರಿ, ವಿಶ್ವನಾಥ, ಮುನಿನಾರಾಯಣಪ್ಪ ಮುನಿಯಪ್ಪನವರು, ಬಾಗೇಪಲ್ಲಿ ತಾಲೂಕಿನ ಶಿವಯ್ಯ ನಾರಾಯಣಸ್ವಾಮಿ, ಮದ್ದಿ ರೆಡ್ಡಿ, ವಿಜಯಕುಮಾರ್, ರಾಜೇಶ್ ಗೌಡ, ವಿಜಯಲಕ್ಷ್ಮಿ, ಅಶ್ರಪ್ ಉನ್ನಿಸಾ ರವರು, ಚಿಕ್ಕಬಳ್ಳಾಪುರ ತಾಲೂಕಿನ ಅಧ್ಯಕ್ಷರಾದ ಶ್ರೀ ಲಕ್ಷ್ಮಿಪತಿ, ಪ್ರಧಾನ ಕಾರ್ಯದರ್ಶಿಗಳಾದ ಸಿ. ಚಿಕ್ಕಮುನಿಯಪ್ಪ ಪದಾಧಿಕಾರಿಗಳಾದ ಕದಿರಪ್ಪ ಮಂಜುಳಾ, ಫಕೀರೇಶ, ಜಯರಾಮ್, ಮುನಿರಾಜು, ಪ್ರಭಾಕರ್, ಭಾರತಿ, ದೇವರಾಜು ಉಡುಪಿ ಕೃಷ್ಣ, ರಾಜಣ್ಣ ಮಂಜುಳಾ, ಮಂಜುನಾಥಸ್ವಾಮಿ ರವರು ಗೌರಿಬಿದನೂರು ತಾಲೂಕಿನ ಅಧ್ಯಕ್ಷರಾದ ಕೃಷ್ಣಪ್ಪ ಕೆಜಿ ಗಂಗರಾಜು ನರಸಿಂಹರಾವ್ ಮುನಿರಾಜು ವಿಶ್ವನಾಥ್ ವಿಶ್ವೇಶ್ವರಯ್ಯ ವೆಂಕಟೇಶ್ ರಾಮೇಗೌಡ ಬಾಲರಾಜು ರವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ

ವರದಿ

R.ನಾರಾಯಣಸ್ವಾಮಿ ಚಿಂತಾಮಣಿ
ಜಿಲ್ಲಾಧ್ಯಕ್ಷರು
KGRSPATA(R)
ಚಿಕ್ಕಬಳ್ಳಾಪುರ ಜಿಲ್ಲೆ


Google News

 

 

WhatsApp Group Join Now
Telegram Group Join Now
Suddi Sante Desk