ಹಾಸನ –
ಹೃದಯಾಘಾತದಿಂದ ಪೊಲೀಸ್ ಕಾನ್ಸ್‌ಟೇಬಲ್ ನಿಧನ – ಕರ್ತವ್ಯ ಮುಗಿಸಿ ಕೊಂಡು ಮನೆಗೆ ತೆರಳುತ್ತಿದ್ದ ಸಮಯದಲ್ಲಿ ಮೃತಪಟ್ಟ ಸಿದ್ದಪ್ಪ ಹೌದು
ಪೊಲೀಸ್ ಕಾನ್ಸ್‌ಟೇಬಲ್ ರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಹಾಸನದಲ್ಲಿ ನಡೆದಿದೆ.ಪ್ರಧಾನಿ ಮೋದಿಯವರ ಸಭೆಯ ಬಂದೋಬಸ್ತ್ ಕರ್ತವ್ಯ ಮುಗಿಸಿ ಮನೆಗೆ ಹಿಂದಿರುಗಿದ್ದ ಕಾನ್ಸ್‌ಟೇಬಲ್ ಹೃದಯಾಘಾತ. ದಿಂದ ಮೃತಪಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಪ್ರಚಾರ ಸಭೆಯ ಬಂದೋಬಸ್ತ್ ಕರ್ತವ್ಯ ಮುಗಿಸಿ ಮನೆಗೆ ಹಿಂದಿರುಗಿದ್ದ ಕಾನ್ಸ್‌ಟೇಬಲ್ ಹೃದಯಾಘಾತ ದಿಂದ ನಿಧನರಾಗಿದ್ದಾರೆ. ಬೇಲೂರು ಪೊಲೀಸ್ ಠಾಣೆಯ ಸಿದ್ದಪ್ಪ (50) ಮೃತಪಟ್ಟವರಾಗಿದ್ದಾರೆ. ಮೈಸೂರಿನಲ್ಲಿ ಆಯೋಜನೆಯಾಗಿದ್ದ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರ ಕಾರ್ಯ ನಿಮಿತ್ತ ಬಂದೋ ಬಸ್ತ್ ಗೆ ತೆರಳಿ ಮಧ್ಯರಾತ್ರಿ ಮನೆಗೆ ವಾಪಸ್ಸಾಗಿ ನಿದ್ರೆಗೆ ಜಾರಿದ್ದರು
ಈ ಸಮಯದಲ್ಲಿ ಹೃದಯಾಘಾತವಾಗಿದೆ ಮಲಗಿದ ಸಿದ್ದಪ್ಪನವರು ಏಳದೇ ಇದ್ದುದನ್ನು ಕಂಡು ಅನುಮಾನಗೊಂಡು ಕುಟುಂಬ ಸದಸ್ಯರು ಎಬ್ಬಿಸಲು ಪ್ರಯತ್ನಿಸಿದರು.ಅಷ್ಟರಲ್ಲಿ ಅವರು ನಿಧನರಾಗಿರುವುದು ತಿಳಿದುಬಂದಿದೆ.
ನಿಧನದಿಂದ ಕುಟುಂಬದವರಿಗೆ ಬರಸಿಡಿಲು ಬಡಿದಂತಾಗಿದೆ.ದಿಕ್ಕು ತೋಚದೆ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ ಮತ್ತು ಸಹದ್ಯೋಗಿಗಳು ಹಾಗೂ ಸ್ನೇಹಿತರು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹಾಸನ…..