ಧಾರವಾಡ –
ಬೆಂಗಳೂರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯರು ಅಶೋಕ ಯರಗಟ್ಟಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ದೀಪಾ ಜಾವೂರ ಇವರ ನೇತೃತ್ವದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳ ತಂಡದೊಂದಿಗೆ ಧಾರವಾಡ ಶಹರದ ಸೂಪರ್ ಮಾರ್ಕೆಟ್, ತರಕಾರಿ ಮಾರುಕಟ್ಟೆ, ಗಾಂಧಿ ಚೌಕ್, ನೆಹರೂ ಮಾರ್ಕೆಟ್‍ನ ಪ್ರಮುಖ ಸ್ಥಳಗಳಲ್ಲಿ ತರಕಾರಿ ಮತ್ತು ಇತರೆ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಕರಪತ್ರ ಹಂಚುವ ಮೂಲಕ ಅರಿವು ಮೂಡಿಸಿ ಮತ್ತೆ ತರಕಾರಿ ವ್ಯಾಪಾರ ಮಾಡದಂತೆ ಎಚ್ಚರಿಕೆ ನೀಡಲಾಯಿತು.

ಸಾರ್ವಜನಿಕರಿಗೆ 1986ರ ಬಾಲ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ 2016 ರ ಅನ್ವಯ 14 ವರ್ಷದೊಳಗಿನ ಯಾವುದೇ ಮಗು ಯಾವುದೇ ಕೆಲಸದಲ್ಲಿ ತೊಡಗು ವಂತಿಲ್ಲ.14 ವರ್ಷ ಮೇಲ್ಪಟ್ಟು 18 ವರ್ಷದೊಳಗಿನ ಕಿಶೋರ ಮಕ್ಕಳನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸ ಮಾಡುವಂತಿಲ್ಲ ಇದು ಶಿಕ್ಷಾರ್ಹ ಅಪರಾಧ ವಾಗಿದೆ.ಬಾಲಕಾರ್ಮಿಕ ಹಾಗೂ ಕಿಶೋರಕಾರ್ಮಿಕ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಲ್ಲಿ ರೂ.50,000 ವರೆಗೆ ದಂಡ 6 ತಿಂಗಳಿಂದ 2 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು.

ಎಂದು ತಿಳಿಸಿ ಕೊವೀಡ್-19 ಮುಂಜಾಗ್ರತಾ ಕ್ರಮ ಗಳ ಕುರಿತು ಸಹ ಅರಿವು ಮೂಡಿಸಿ ಮಕ್ಕಳನ್ನು ಹೊರಗಡೆ ಕಳುಹಿಸದಂತೆ ತಿಳಿಸಲಾಯಿತು.
ಈ ತಂಡದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳಾದ ಶ್ವೇತಾ ಕಿಲ್ಲೇದಾರ, ಕರೆಪ್ಪ ಕೌಜಲ ಗಿ, ವಿಶಾಲಾ ಕಾನಪೇಟ, ಮಹಮ್ಮದಲಿ ತಹಶೀ ಲ್ದಾರ ಹಾಗೂ ಭಾರತಿ ಬಂಡಿ ಉಪಸ್ಥಿತರಿದ್ದರು.
