ಶಿಕಾರಿಪುರ –
ಜ್ಯೂಸ್ ಬಾಟಲ್ ಮುಚ್ಚಳ ನುಂಗಿ ಸಾವಿಗೀಡಾದ ಮಗು – ಮಕ್ಕಳ ಕೈಯಲ್ಲಿ ಜ್ಯೂಸ್ ಬಾಟಲ್ ಕೊಡುವ ಮುನ್ನ ಹುಷಾರಾಗಿರಿ
ಹೌದು ಇಂತಹದೊಂದು ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ನಡೆದಿದೆ.ಜ್ಯೂಸ್ ಬಾಟಲಿ ಮುಚ್ಚಳ ವನ್ನು ನುಂಗಿದ ಮಗುವೊಂದು ಸಾವಿಗೀಡಾದ ಘಟನೆ ಶಿಕಾರಿಪುರ ತಾಲ್ಲೂಕಿನ ಹರಗುವಳ್ಳಿ ಗ್ರಾಮದಲ್ಲಿ ನಡೆದಿದೆ.
ಮನೆಯಲ್ಲಿ ಆಟವಾಡುವಾಗ ಜ್ಯೂಸ್ ಬಾಟಲಿ ಮುಚ್ಚಳ ನುಂಗಿ ಒಂದೂವರೆ ವರ್ಷದ ಮಗು ಮೃತ ಪಟ್ಟಿದೆ.ಗ್ರಾಮದ ವೇದಮೂರ್ತಿ ಗಂಗಾಧರಯ್ಯ ಶಾಸ್ತ್ರಿ ಅವರ ಪುತ್ರ ನಂದೀಶ್ ಮೃತಪಟ್ಟ ಮಗುವಾಗಿದ್ದು ಬಾಟಲಿ ಮುಚ್ಚಳ ನುಂಗಿದಾಗ ಉಸಿರಾಟದ ತೊಂದರೆ ಯಿಂದ ಬಳಲುತ್ತಿದ್ದ ಮಗುವನ್ನು ಆಸ್ಪತ್ರೆಗೆ ಕರೆದೊ ಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದೆ.
ಇನ್ನೂ ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ಕಂಡು ಬಂದಿತು ಇನ್ನೂ ಮಕ್ಕಳ ಕೈಯಲ್ಲಿ ಜ್ಯೂಸ್ ಬಾಟಲ್ ನೀಡುವ ಮುನ್ನ ಪೋಷಕರೇ ಹುಷಾರಾಗಿರಿ ಕಾಳಜಿ ಇರಲಿ
ಸುದ್ದಿ ಸಂತೆ ನ್ಯೂಸ್ ಶಿಕಾರಿಪುರ…..