ಸವದತ್ತಿ –
ಶಿಕ್ಷಣ ನಿಂತ ನೀರಲ್ಲ ಅದು ಹರಿಯುವ ಪ್ರವಾಹ ವಿದ್ದಂತೆ ಕೋವಿಡ್ ಸಮಯದಲ್ಲಿ ಮುಖಾಮುಖಿ ಶಿಕ್ಷಣಕ್ಕೆ ತೊಂದರೆಯಾಗಿದೆ ಆದರೂ ಕೂಡ ಶಿಕ್ಷಕರು ಮಕ್ಕಳ ಮೊಬೈಲ್ ಸಂಖ್ಯೆಗಳನ್ನು ಪಡೆದು ಅವರ ಜೊತೆಯಲ್ಲಿ ಮಾತನಾಡುತ್ತ ನೀಡಬೇಕಾದ ಮಾಹಿತಿಗಳನ್ನು ಹೇಳುತ್ತಿರುವರು ಅಷ್ಟೇ ಅಲ್ಲ ದೂರದರ್ಶನದಲ್ಲಿ ಚಂದನವಾಹಿನಿಯಲ್ಲಿ ಪಾಠಗಳು ಪ್ರಸಾರವಾಗುತ್ತಿವೆ

ಅಭ್ಯಾಸದ ಹಾಳೆ ಗಳನ್ನು ಪಾಲಕರ ಮೂಲಕ ತಲುಪಿಸಿ ಮನೆಯಲ್ಲಿ ಮಕ್ಕಳಿಗೆ ಕಲಿಕಾ ಪ್ರಕ್ರಿಯೆ ಸುಗಮವಾಗಿ ಜರುಗುವಂತೆ ಕ್ರಮ ಕೈಗೊಳ್ಳುತ್ತಿರುವ ಇಂದಿನ ಸಂದರ್ಭದಲ್ಲಿ ಸವದತ್ತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಅರ್ಜುನ್ ಕಂಬೋಜಿ ಕರೀಕಟ್ಟಿ ಗ್ರಾಮದ ಮಕ್ಕಳ ಮನೆಗಳಿಗೆ ತೆರಳಿ ಕೋವಿಡ್ ನಿಯಮಗಳನ್ನು ತಾವೂ ಪಾಲಿಸುವ ಜೊತೆಗೆ ಮಕ್ಕಳು ಪಾಲಕರು ಪಾಲಿಸುವಂತೆ ತಿಳಿಸುವ ಜೊತೆಗೆ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿರುವ ಚಟುವಟಿಕೆಗಳು ಜರುಗುತ್ತಿವೆ.

ಇತ್ತೀಚಿಗೆ ಕರಿಕಟ್ಟಿ ಗ್ರಾಮದಲ್ಲಿ ಹಲವು ಮನೆಗಳಿಗೆ ತೆರಳಿ ಮಕ್ಕಳಿಗೆ ಪೋಷಕರಿಗೆ ಶಾಲೆಗಳಲ್ಲಿ ಎಲ್ಲ ಶಿಕ್ಷಕರಿಗೆ ಕಲಿಕಾ ಪ್ರಕ್ರಿಯೆ ಕುರಿತು ಸಂವಾದ ನಡೆಸಿದರು ಮಕ್ಕಳು ಈ ಸಂದರ್ಭದಲ್ಲಿ ತಾವು ತಮ್ಮ ಶಿಕ್ಷಕರು ನೀಡಿದ ಮಾಹಿತಿ ಅಭ್ಯಾಸದ ಹಾಳೆಗಳನ್ನು ತೋರಿಸಿ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿರುವುದನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತೋರಿಸಿದರು

ಇದರಿಂದ ಸಂತಸಗೊಂಡ ಕ್ಷೇತ್ರಶಿಕ್ಷಣಾಧಿಕಾರಿಗಳು ಮಕ್ಕಳನ್ನು ಅಭಿನಂದಿಸುತ್ತ ಚೆನ್ನಾಗಿ ಓದು ಬರಹ ಚಟುವಟಿಕೆಗಳಲ್ಲಿ ತೊಡಗುವಂತೆ ಜೊತೆಗೆ ಶಾರೀರಿಕ ಆರೋಗ್ಯವನ್ನು ಕಾಪಾಡಿಕೊಂಡು ಕೋವಿಡ್ ರೋಗದಿಂದ ರಕ್ಷಿಸುವಂತೆ ಕೈ ಕಾಲು ಗಳನ್ನು ತೊಳೆದುಕೊಂಡು ಸ್ವಚ್ಛತೆ ಕಾಯ್ದು ಕೊಳ್ಳಲು ಸುರಕ್ಷಿತ ಅಂತರವನ್ನು ಪಾಲಿಸುವಂತೆ ತಿಳಿಸಿದರು

ದೈಹಿಕ ಶಿಕ್ಷಣಾಧಿಕಾರಿ ವೈ.ಎಂ.ಸಿಂಧೆ ಈ ಸಂದರ್ಭ ದಲ್ಲಿ ಪರಿಸರ ಸ್ವಚ್ಛತೆ ಕುರಿತು ಪಾಲಕರಿಗೆ ವಿದ್ಯಾರ್ಥಿ ಗಳಿಗೆ ತಿಳಿಸಿದರು