ಖಾನಾಪುರ –
ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನ ರಾಜವಾಳಾ ಗೌಳಿವಾಡಾ ಶಾಲೆಯ ಶಿಕ್ಷಕರ ವಿರುದ್ಧ ಶಾಲೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.ಗೌಳಿವಾಡಾ ಶಾಲೆಯ ಮುಂಭಾಗದಲ್ಲಿ ಶಾಲೆಯ ವಿದ್ಯಾರ್ಥಿಗಳು ನಿಂತು ಶಾಲೆ ಇದ್ದರೂ ಶಿಕ್ಷಕರು ಬೇಗ ಬರೊದಿಲ್ಲ ಎಂದು ಆರೋಪವನ್ನು ಮಾಡಿದರು.ಕೊಠಡಿಗಳಿಗೆ ಬೀಗ ಜಡಿದು ತೆರಳಿದ್ದನ್ನು ಖಂಡಿಸಿದ ದೃಶ್ಯಗಳು ಹರಿದಾಡುತ್ತಿವೆ.1ರಿಂದ 5ನೇ ತರಗತಿಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಶಿಕ್ಷಕರು ನಿಯಮಿತವಾಗಿ ಶಾಲೆಗೆ ಬರುವುದಿಲ್ಲ.ಮಧ್ಯಾಹ್ನ ಬೇಗ ಮನೆಗೆ ತೆರಳುತ್ತಾರೆ.ಶಾಲಾ ಅವಧಿಯಲ್ಲಿ ವರ್ಗ ಕೊಠಡಿಯಲ್ಲಿ ಹಾಸಿಗೆ ಹಾಸಿ ಮಲಗುತ್ತಾರೆ.ತಮಗೆ ಶೌಚಾಲಯ ತೊಳೆಯುವಂತೆ.ನೀರು ತರುವಂತೆ ಕೆಲಸ ಹೇಳುತ್ತಾರೆ ಎಂದು ಅಳಲು ತೋಡಿಕೊಂಡಿದ್ದಾರಂತೆ ವಿದ್ಯಾರ್ಥಿಗಳು

ಇಂಥ ಬೇಜವಾಬ್ದಾರಿ ಶಿಕ್ಷಕರಿಂದ ತಮ್ಮ ಶೈಕ್ಷಣಿಕ ಪ್ರಗತಿ ಕುಂಠಿತಗೊಂಡಿದೆ.ಕರ್ತವ್ಯಲೋಪ ಎಸಗುತ್ತಿರುವ ಶಿಕ್ಷಕರ ವಿರುದ್ಧ ಕ್ರಮ ಕೈಗೊಂಡು ಬೇರೆ ಶಿಕ್ಷಕರ ವ್ಯವಸ್ಥೆ ಮಾಡು ವಂತೆ ಹೇಳುವ ದೃಶ್ಯ ಗಳಿದ್ದು ಇಷ್ಟೇಲ್ಲಾ ನೋಡತಾ ಇದ್ದರೆ ಇದು ನಿಜನಾ ಎಂಬ ಅನುಮಾನ ಕಾಡುತ್ತಿದ್ದು ಇದಕ್ಕೆ ಸಂಬಂಧಿಸಿದ ಶಿಕ್ಷಕರೇ ಶಾಲೆಯ ಮುಖ್ಯಸ್ಥರೇ ಉತ್ತರಿ ಸಬೇಕಿದೆ.