ಬೆಂಗಳೂರು –
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆ ಪೂರ್ಣಗೊಳಿಸಿರುವ ತಮಿಳು ನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ ಇಂದು ಜೈಲಿನಿಂದ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ಕೋವಿಡ್-19 ಸೋಂಕಿಗೆ ತುತ್ತಾಗಿರುವ ಶಶಿಕಲಾ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿ ದ್ದಾರೆ. ನ್ಯಾಯಾಂಗ ಬಂಧನದಿಂದ ಬಿಡುಗಡೆಗಾಗಿ ಆಸ್ಪತ್ರೆಯಲ್ಲಿ ಅವರ ಸಹಿಯನ್ನು ಜೈಲು ಅಧಿಕಾರಿ ಗಳು ಔಪಚಾರಿಕವಾಗಿ ಪಡೆಯಲಿದ್ದಾರೆ ಎಂದು ಮೂಲಗಳು ಹೇಳಿವೆ.

ಸೋಂಕಿನ ಬಗ್ಗೆ ತಿಳಿಯಲು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಇಂದು ಶಶಿಕಲಾ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಿದ್ದಾರೆ. ಜನವರಿ 30 ರಂದು ಮತ್ತೊಂದು ಪರೀಕ್ಷೆ ನಡೆಯಲಿದೆ. ಎರಡೂ ಪರೀಕ್ಷೆಯಲ್ಲೂ ನೆಗೆಟಿವ್ ವರದಿ ಬಂದರೆ ಆಕೆ ಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗು ತ್ತದೆ.ಜೈಲಿನಲ್ಲಿ ಸೋಂಕು ತಗುಲಿರುವ ಬಗ್ಗೆ ಶಶಿಕಲಾ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜಕೀಯ ಎದುರಾಳಿ ಇರುವ ಪ್ರಭಾವಿ ನಾಯಕಿಯಾಗಿರುವುದರಿಂದ ಸರ್ಕಾರ ಶಶಿಕಲಾಗೆ ಝಡ್ ಪ್ಲಸ್ ಭದ್ರತೆ ನೀಡುವಂತೆ ಆಕೆಯ ಪರ ವಕೀಲರು ಕೇಳಿದ್ದಾರೆ. ಶಶಿಕಲಾ ಆಸ್ಪತ್ರೆಗೆ ದಾಖಲಾಗುವ ಮುನ್ನ ಹಾಗೂ ದಾಖಲಾದ ನಂತರ ನಡೆದ ಘಟನೆಗಳ ಬಗ್ಗೆ ಅವರು ಪ್ರಶ್ನಿಸಿದ್ದಾರೆ.

ಶಶಿಕಲಾ ಅವರನ್ನು ಅಪಾರ ಬೆಂಬಲಿಗರೊಂದಿಗೆ ಬೆಂಗಳೂರಿನಿಂದ ಚೆನ್ನೈಗೆ ಕರೆದುಕೊಂಡು ಹೋಗಲು ಅವರ ಸಂಬಂಧಿ ಹಾಗೂ ಸ್ವತಂತ್ರ ಶಾಸಕ ಟಿಟಿವಿ ದಿನಕರನ್ ನೇತೃತ್ವದಲ್ಲಿನ ಎಎಂಕೆ ಪಕ್ಷದ ಕಾರ್ಯಕರ್ತರು ಹಾಗೂ ಅವರ ಸಂಬಂಧಿಕರನ್ನೊಳಗೊಂಡಂತೆ ಸುಮಾರು 1 ಸಾವಿರ ಜನರು ಬರಲಿದ್ದಾರೆ ಎಂದು ಮೂಲಗಳು ತಿಳಿಸಿದ್ದು ಶಶಿಕಲಾ ಅವರು ಇಂದೇ ಬಿಡುಗಡೆಯಾಗಲಿದ್ದಾರೆನಾ ಅಥವಾ ಆಸ್ಪತ್ರೆಯಲ್ಲಿ ಇನ್ನೂ ಇರಲಿದ್ದಾರೆನಾ ಎಂಬುದನ್ನು ಕಾದು ನೋಡಬೇಕು.