ಬೆಳ್ಳಂ ಬೆಳಿಗ್ಗೆ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ ಯವರಿಂದ ಸಿಟಿ ರೌಂಡ್ಸ್ – ನಗರ ಪ್ರದಕ್ಷಿಣೆ ಸ್ವಚ್ಚತೆ ಕಾರ್ಯ ಪರಿಶೀಲನೆ ಮಾಡಿದ ಆಯುಕ್ತರು ಹೌದು
ಬೆಳ್ಳಂ ಬೆಳಗ್ಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ ಈಶ್ವರ ಉಳ್ಳಾಗಡ್ಡಿ ಯವರು ನಗರ ಸಂಚಾರ ಮಾಡಿ ಸ್ವಚ್ಛತೆ ಸೇರಿದಂತೆ ಹಲವು ಕೆಲಸ ಕಾರ್ಯಗಳನ್ನು ಪರಿಶೀಲಿಸಿದರು.ಅವಳಿ ನಗರದಲ್ಲಿ ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರು ಬೆಳ್ಳಂ ಬೆಳ್ಳಿಗೆ ನಗರ ಸಂಚಾರ ಮಾಡಿ ಸ್ವಚ್ಛತೆ ಯನ್ನು ಪರಿಶೀಲಿಸಿದರು
ವಲಯ ಕಚೇರಿ ನಂಬರ್ 08 ಹಾಗೂ 09 ರ ಪ್ರದೇಶಗಳಲ್ಲಿ ಬರುವ ದಾಜಿಬಾನ್ ಪೇಟ, ಡಾಕಪ್ಪ ಸರ್ಕಲ್, ಜವಳಿ ಸಾಲ, ಗೌಳಿ ಗಲ್ಲಿ, ಸಿಬಿಟಿ, ಮರಾಠ ಗಲ್ಲಿ, ಬ್ರಾಡವೆ, ಹಾಗೂ ದುರ್ಗದ ಬೈಲ್ ಸರ್ಕಲ್,* ಗಳಿಗೆ ಭೇಟಿ ನೀಡಿ ಸ್ವಚ್ಛತ ಕೆಲಸವನ್ನು ವೀಕ್ಷಣೆ ಮಾಡಿದರು.ಈ ಸಮಯ ದಲ್ಲಿ ಆರೋಗ್ಯ ನಿರೀಕ್ಷಕರಾದ ಯಲ್ಲಪ್ಪ ಯರಗುಂಟಿ ಸಾತ್ ನೀಡಿದರು
ಆಯುಕ್ತರು ಕಾಲ್ನಡಿಗೆಯಲ್ಲಿ ಸಂಚರಿಸಿ ನಗರ ವನ್ನು ಪರಿಶೀಲಿಸಿ ಗಂಟೆಗೇರಿ ಕಡೆ ರಸ್ತೆಯ ಅಕ್ಕಪಕ್ಕ ಹಾಕಲಾದ ಕಸವನ್ನು ನೋಡಿ ತಕ್ಷಣ ವಿಲೇವಾರಿಮಾಡುವಂತೆ ಆರೋಗ್ಯ ನಿರೀಕ್ಷರಿಗೆ ತಿಳಿಸಿದರು. ಕೆಲವು ಕಡೆ ಫುಟ್ಪಾತ್ ಮೇಲೆ ಸಾಮಾನುಗಳನ್ನು ಇಟ್ಟು ಅನಧಿಕೃತವಾಗಿ ವ್ಯವಹಾರ ಮಾಡುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡ ಆಯುಕ್ತರು ತಕ್ಷಣ ಪುಟ್ ಪಾತ್ ನಲ್ಲಿ ಸಾಮಾನುಗಳನ್ನು ಖಾಲಿ ಮಾಡಿಸಿ ಎಚ್ಚರಿಕೆ ನೀಡಿದರು.
ದಾಜಿಬಾನ್ ಪೇಟೆಯ ಮುಖ್ಯ ರಸ್ತೆಗಳನ್ನು ಪರಿಶೀಲಿಸಿದ ಆಯುಕ್ತರು ಸ್ವಚ್ಛತೆಯ ಕುರಿತು ಆರೋಗ್ಯ ನಿರೀಕ್ಷಕರನ್ನು ಪ್ರಶಂಸಿಸಿದರು ಹಾಗೂ ಇದೇ ರೀತಿ ಸ್ವಚ್ಛತೆಯನ್ನು ಕಾಪಾಡುವಂತೆ ನಿರ್ದೇಶನ ನೀಡಿದರು. ಹಾಗೂ ಅವಳಿ ನಗರ ದಲ್ಲಿ ಕಾರ್ಯನಿರ್ಸುತ್ತಿರುವ ಎಲ್ಲಾ ಆರೋಗ್ಯ ನಿರೀಕ್ಷಕರನ್ನು ಸಂಪರ್ಕಿಸಿ ಕರ್ತವ್ಯದಲ್ಲಿ ನಿರತರಾಗಿರುವ ಕುರಿತು ಮಾಹಿತಿಯನ್ನು ಪಡೆದರು.
ಪ್ರತಿದಿನ ಇದೇ ರೀತಿ ನಗರ ಸಂಚಾರ ಮಾಡಿ ಸ್ವಚ್ಛತೆಯನ್ನು ಪರಿಶೀಲಿಸಲಾಗುವುದು ಹಾಗೂ ಎಲ್ಲಾ ಆರೋಗ್ಯ ನಿರೀಕ್ಷಕರು ಹಾಗೂ ವಲಯ ಸಹಾಯಕ ಆಯುಕ್ತರು ಬೆಳ್ಳಂಬೆಳಿಗ್ಗೆ ತಮ್ಮ ತಮ್ಮ ವಾರ್ಡ್ ಗಳಲ್ಲಿ ಸಂಚರಿಸಿ ಸ್ವಚ್ಛತಾ ಕಾರ್ಯವನ್ನು ಪರಿಶೀಲಿಸಿ ಪ್ರತಿದಿನ ಮಾಹಿತಿ ನೀಡತಕ್ಕದ್ದು ಎಂದು ನಿರ್ದೇಶನ ನೀಡಿದರು.
ಅವಳಿ ನಗರದ ಸ್ವಚ್ಛತಾ ಕಾರ್ಯದಲ್ಲಿ ಯಾವುದೇ ರೀತಿ ನಿರ್ಲಕ್ಷಿತನ ತೋರದಂತೆ ಎಚ್ಚರಿಕೆ ನೀಡಿದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……