ಬೆಳ್ತಂಗಡಿ –
ಪೌರ ಕಾರ್ಮಿಕನೊರ್ವ ಶವವಾಗಿ ಪತ್ತೆಯಾದ ಘಟನೆ ಬೆಳ್ತಂಗಡಿಯಲ್ಲಿ ಕಂಡು ಬಂದಿದೆ.ಹೌದು ಕಳೆದ ಜನವರಿ ಯಿಂದ ನಾಪತ್ತೆಯಾಗಿದ್ದ ಬೆಳ್ತಂಗಡಿ ಪಟ್ಟಣ. ಪಂಚಾಯ ತನ ಪೌರ ಕಾರ್ಮಿಕನ ಶವ ಬೆಳ್ತಂಗಡಿ ಸರಕಾರಿ ಮೈದಾ ನದಲ್ಲಿ ಇಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.ಇನ್ನೂ ಮೂಲತಃ ಮೈಸೂರು ಜಿಲ್ಲೆಯ ಕೆ.ಆರ್.ನಗರದ ನಿವಾಸಿ ಯಾಗದ್ದು ಬೆಳ್ತಂಗಡಿಯಲ್ಲಿ ವಾಸವಿದ್ದ ಪೌರಕಾರ್ಮಿಕ ಲಿಂಗ ಶೆಟ್ಟಿ (43) ಮೃತಪಟ್ಟವರಾಗಿದ್ದು ಇಲ್ಲಿ ಬಾಡಿಗೆ ಮನೆ ಯಲ್ಲಿ ಕುಟುಂಬ ಸಮೇತ ವಾಸವಾಗಿದ್ದರು.ಪತ್ನಿ,ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ.ಯುವತಿ ಯೊ ಬ್ಬಳ ಜೊತೆ ಪ್ರೀತಿಯಾಗಿದ್ದು ಈ ವಿಚಾರ ಮನೆಯವರಿಗೆ ಗೊತ್ತಾಗಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿ ಮನೆಗೆ ವಾಪಸಾಗಿದ್ದರು.

ಬಳಿಕ ಲಿಂಗ ಶೆಟ್ಟಿ ನಾಪತ್ತೆಯಾಗಿದ್ದರು.ಈ ಬಗ್ಗೆ ನಗರ ಪಂಚಾಯತ್ ಹಾಗೂ ಮನೆ ಮಂದಿ ಯಾವುದೇ ದೂರು ನೀಡಿರಲಿಲ್ಲ.ಶವ ಪತ್ತೆಯಾದ ಜಾಗದಲ್ಲಿ ಬಟ್ಟೆ, ಹಣ,ಐಡಿ, ಚಪ್ಪಲಿ ಪತ್ತೆಯಾಗಿದೆ.ಇನ್ನೂ ಈ ಒಂದು ವಿಚಾರ ತಿಳಿದ ಬೆಳ್ತಂಗಡಿ ಪೊಲೀಸರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ..