ಧಾರವಾಡ –
ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಮಾರಾಮಾರಿ ನಡೆದಿದೆ.ಹೌದು ರೋಗಿಯ ಸಂಬಂಧಿಕರು ಮತ್ತು ಸಿಬ್ಬಂದಿ ನಡುವೆ ಹೊಡೆದಾಟ ನಡೆದಿದ್ದು ಘಟನೆ ಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಧಾರವಾಡ ಜಿಲ್ಲಾ ಆಸ್ಪತ್ರೆಯ ಮಹಿಳಾ ವಾರ್ಡ್ ನಲ್ಲಿ ಈ ಒಂದು ಘಟನೆ ನಡೆದಿದೆ.ಆಸ್ಪತ್ರೆಯ ವಾರ್ಡ್ ನಿಂದ ಹೊರ ಹೋಗುವ ವಿಚಾರಕ್ಕೆ ಗಲಾಟೆ ನಡೆದಿದೆ.
ಆಸ್ಪತ್ರೆ ಸಿಬ್ಬಂದಿಯು ಐದಾರು ಜನರು ಸೇರಿ ಕೊಂಡು ಹೊರ ರೋಗಿಯ ಸಂಬಂಧಿಕರ ಮೇಲೆ ಹಲ್ಲೆಯನ್ನು ಮಾಡಿದ ಆರೋಪ ಕೇಳಿ ಬಂದಿದೆ.
ಮಹ್ಮದ ಸಾದಿಕ್ ಸವಣೂರ ಹಾಗೂ ತೌಫಿಕ್ ಹಲ್ಲೆ ಗೊಳಗಾದ ರೋಗಿಯ ಸಂಬಂಧಿಗಳಾಗಿದ್ದಾರೆ. ಆಸ್ಪತ್ರೆಗೆ ರೋಗಿಯನ್ನು ಶಿಪ್ಟ್ ಮಾಡುವ ವಿಚಾರ ದಲ್ಲಿ ಈ ಒಂದು ಹಲ್ಲೆ ನಡೆದಿದೆ.ಏಳೆಂಟು ಸಿಬ್ಬಂದಿ ಗಳು ಸೇರಿಕೊಂಡು ಮೊಬೈಲ್ ಸೇರಿದಂತೆ ಹಲವಾರು ವಸ್ತುಗಳಿಂದ ಹಿಡಿದು ಹಲ್ಲೆ ಮಾಡಿದ್ದಾರೆ ಹೊಡೆದಾಟದಲ್ಲಿ ರೋಗಿಯ ಸಂಬಂಧಿಕರಿಗೆ ಹೊಡೆದಿದ್ದು ಮೈಮೇಲೆ ಬಾಸುಂಡೆ ಮೂಡಿದ್ದು ಉಪನಗರ ಠಾಣಾ ವ್ಯಾಪ್ತಿ ಯಲ್ಲಿ ಘಟನೆ ನಡೆದಿದ್ದು ದೂರು ದಾಖಲು ಮಾಡಿ ಕೊಂಡಿದ್ದು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ