ಚಾಮರಾಜನಗರ –
ರಾಜ್ಯದಲ್ಲಿ ಜುಲೈ 1 ರಿಂದ ತರಗತಿಗಳು ಆರಂಭವಾ ಗಲಿವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಚಾಮಾರಾಜನಗರದಲ್ಲಿ ಮಾತನಾಡಿದ ಅವರು ಆನ್ ಲೈನ್ ಮತ್ತು ದೂರದರ್ಶನದಿಂದಷ್ಟೇ ಸಧ್ಯ ಪಾಠವನ್ನು ನಡೆಸಲಾಗುವುದು ಎಂದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜುಲೈ 1 ರಿಂದ ತರಗತಿಗಳು ಆರಂಭವಾಗ ಲಿದ್ದು ನೇರ ತರಗತಿ ಆರಂಭವಿಲ್ಲ.ಆನ್ ಲೈನ್ ಹಾಗೂ ದೂರದರ್ಶನದ ಮೂಲಕ ಶಿಕ್ಷಣ ನೀಡಲಾ ಗುವುದು ಸರ್ಕಾರದ ಮಾರ್ಗಸೂಚಿ ಪಡೆದು ಶಾಲೆ ಆರಂಭವಾಗಲಿದೆ ಎಂದರು.ಇನ್ನೂ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳಿ ಗೆ ಹೆಚ್ಚು ಹೆಚ್ಚು ಮಕ್ಕಳು ಸೇರುತ್ತಿದ್ದಾರೆ.ಕಳೆದ ವರ್ಷ ಒಂದೂವರೆ ಲಕ್ಷದಷ್ಟು ಮಕ್ಕಳು ಸರ್ಕಾರಿ ಶಾಲೆಗೆ ಸೇರಿದ್ದು, ಈ ಬಾರಿಯೂ ಹೆಚ್ಚು ಮಕ್ಕಳು ಸರ್ಕಾರಿ ಶಾಲೆಗೆ ಸೇರುವ ಸಾಧ್ಯತೆ ಇದೆ ಎಂದು ಹೇಳಿದರು. ಸರಿ ಸರ್ ಖಂಡಿತವಾಗಿಯೂ ಇದನ್ನು ನಾವು ಕೂಡಾ ಸ್ವಾಗತ ಮಾಡುತ್ತೇವೆ ಆದರೆ ರಾಜ್ಯ ದಲ್ಲಿ ಇನ್ನೂಶಿಕ್ಷಕರಿಗೆ ಇನ್ನೂ ಪೂರ್ಣ ಪ್ರಮಾಣ ದಲ್ಲಿ ವ್ಯಾಕ್ಸಿನ್ ಹಾಕಿಲ್ಲ ಹಾಗೇ ಪೂರ್ಣ ಪ್ರಮಾಣ ದಲ್ಲಿ ಲಾಕ್ ಡೌನ್ ತೆರುವಾಗಿಲ್ಲ ಜುಲೈ 5ರವರೆಗೆ ಕೆಲವೊಂದಿಷ್ಟು ಜಿಲ್ಲೆಗಳಲ್ಲಿ ಇನ್ನೂ ಕೂಡಾ ಲಾಕ್ ಡೌನ್ ಸಡಿಲಿಕೆ ಮಾಡಿಲ್ಲ ಹೀಗಾಗಿ ಬಹುತೇಕ ಪ್ರಮಾಣದಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಂದರೆ 16 ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದ ಜಿಲ್ಲೆಗಳ ಲ್ಲಿ ತೊಂದರೆಯಾಗಲಿದೆ ಎಂಬ ಮಾತುಗಳು ಸಧ್ಯ ಕೇಳಿ ಬರುತ್ತಿದ್ದು ಹೀಗಾಗಿ ಒಂದು ಕಡೆ ವ್ಯಾಕ್ಸಿನ್ ಇಲ್ಲದೆ ಹೊರಗಡೆ ಹೋಗಲು ಶಿಕ್ಷಕರಿಗೆ ಆತಂಕ ಮತ್ತೊಂದು ಕಡೆಗೆ ಇನ್ನೂ ಸಂಪೂರ್ಣವಾಗಿ ಲಾಕ್ ಡೌನ್ ತೆರುವಾಗಿಲ್ಲ ಹೀಗಾಗಿ ಶಿಕ್ಷಕರು ಶಾಲೆಗೆ ಹೇಗೆ ಹೋಗಬೇಕು ಎಂಬ ದೊಡ್ಡ ಸಮಸ್ಯೆ ಕಾಡುತ್ತಿದ್ದು ಮತ್ತೊಂದು ಸಮಸ್ಯೆ ಆತಂಕ ಎದುರಾಗಿದೆ.