ಧಾರವಾಡ –
ಸಾಮಾನ್ಯವಾಗಿ ರವಿವಾರ ಬಂತೆಂದರೆ ವಾರದ ಕೊನೆಯ ದಿನ ಎಂದುಕೊಂಡು ಹೊರಗಡೆ ಹೋಗೊರ ಸಂಖ್ಯೆ ಹೆಚ್ಚು. ಇಲ್ಲವಾದರೆ ಮನೆಯಲ್ಲಿದ್ದುಕೊಂಡು ವಿಶ್ರಾಂತಿ ಮಾಡತಾರೆ. ಆದರೆ ಧಾರವಾಡದ ಭಾರತೀಯ ಜನತಾ ಪಕ್ಷದ ಧಾರವಾಡ ನಗರ 71ಯುವಮೋರ್ಚಾ ಘಟಕದವರು ಮಾತ್ರ ವಿಶೇಷ.
ಹೌದು ರವಿವಾರಕ್ಕೊಮ್ಮೆ ಸ್ವಚ್ಚ ಸಂಡೇ ಎಂಬ ಕಾರ್ಯಕ್ರಮ ಹಮ್ಮಿಕೊಂಡು ಸ್ವಚ್ಚತಾ ಕಾರ್ಯ ಮಾಡುತ್ತಿದ್ದಾರೆ.
ರವಿವಾರ ಬಂತೆಂದರೆ ಯುವಮೋರ್ಚಾದ ಅಧ್ಯಕ್ಷರಾದ ಶಕ್ತಿ ಹಿರೇಮಠ ಅವರ ನೇತೃತ್ವದಲ್ಲಿ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು ಇಂದು ಧಾರವಾಡ ಮದ ಹಳೇ ಬಸ್ ನಿಲ್ದಾಣದಲ್ಲಿ ಸ್ವಚ್ಚತಾ ಕಾರ್ಯ ಮಾಡಲಾಯಿತು.
ಹಳೇ ಬಸ್ ನಿಲ್ದಾಣದಲ್ಲಿ ಎರಡು ಘಂಟೆಗಳ ಕಾಲ ಯುವ ಮೋರ್ಚಾದ ಮುಖಂಡರು ಕಾರ್ಯಕರ್ತರು ಸ್ವಚ್ಚತಾ ಕಾರ್ಯ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯರಾದ ಸಿದ್ದು ಕಲ್ಯಾಣಶೆಟ್ಟಿ , ಶ್ರೀನಿವಾಸ್ ಕೋಟ್ಯಾನ್, ಹರೀಶ್ ಬಿಜಾಪುರ, ಸ್ವಚ್ಚ ಭಾರತ ಜಿಲ್ಲಾ ಸಂಚಾಲಕರಾದ ವಿನೋದ್ ಹಾಗೂ ಸಹ ಸಂಚಾಲಕರಾದ ಪ್ರಕಾಶ್ ಇಂಗಳೆ,
ಮಂಡಳ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ವಿನಾಯಕ ಗೊಂಧಳಿ,
ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷರಾದ ಮಂಜುನಾಥ ಯರಗಟ್ಟಿ, ಪಕ್ಷದ ಹಿರಿಯರಾದ ನಿಂಗಪ್ಪ ಸಪೂರಿ, ಉದಯ್ ಯಂಡಿಗೇರಿ, ಜಗದೀಶ್ ಚಿಕ್ಕಮಠ,
ಹಾಶಂ ಮೀರಜಕರ, ಪ್ರಮುಖ ಪದಾಧಿಕಾರಿಗಳಾದ ರಾಘವೇಂದ್ರ ತುಪ್ಪದ,ಶ್ರೀಕಾಂತ್ ಹಳ್ಳಿಗೇರಿಮಠ , ಸಾಗರ್ ಜೋಶಿ, ಸೂರಂಜನ್ ಗೂಂಡೆ ರವಿ ಉಪ್ಪಾರ್ , ವಿನಾಯಕ ಭೋಳೆ ಹಾಗೂ ಎಲ್ಲ ಯುವಮೋರ್ಚಾ ಪದಾಧಿಕಾರಿಗಳು ಕಾರ್ಯಕರ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.