ಯಾವುದೇ ಅಧಿಕಾರಿಗಳಿಗೂ ಮುಂದಿನ 15 ದಿನ ರಜೆ ಇಲ್ಲ ಸಿಎಂ ಬೊಮ್ಮಾಯಿ ಖಡಕ್ ಅದೇಶ…..

Suddi Sante Desk

ಬೆಂಗಳೂರು –

ಯಾವುದೇ ಅಧಿಕಾರಿಗಳಿಗೂ ಮುಂದಿನ 15 ದಿನ ರಜೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಡಕ್ ಆದೇಶವನ್ನು ಮಾಡಿದ್ದಾರೆ.ಹೌದು ರಾಜ್ಯಾಧ್ಯಂತ ಮಾನ್ಸೂನ್ ಪೂರ್ವ ಭಾರೀ ಮಳೆಗೆ ಮೇ.15 ರಿಂದ 21ರ ವರೆಗೆ 12 ಮಂದಿ ಸಾವನ್ನಪ್ಪಿದ್ದಾರೆ.ಅಲ್ಲದೇ 430 ಜಾನು ವಾರುಗಳು ಬಲಿಯಾಗಿದ್ದಾರೆ.ಮಳೆ ಹಾನಿ ಸಂಬಂಧ ಸೂಕ್ತ ಪರಿಹಾರ ಕಾರ್ಯ ಹಾಗೂ ನೆರವು ವಿತರಣೆ ಸಂಬಂಧ ಮುಂದಿನ 15 ದಿನಗಳವರೆಗೆ ರಾಜ್ಯದಲ್ಲಿ ಯಾವುದೇ ಅಧಿಕಾರಿಗಳಿಗೆ ರಜೆ ಇಲ್ಲ ಎಂಬುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳುತ್ತಾ ಖಡಕ್ ಸೂಚನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಭಾರೀ ಮಳೆಗೆ ಹಾನಿಯಾದ ಮನೆಗಳ ಕುರಿತು ಮತ್ತು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಮೇ.15 ರಿಂದ ಮೇ 21ರವರೆಗೆ ರಾಜ್ಯಾಧ್ಯಂತ ಮಳೆಯಿಂದಾಗಿ 12 ಜನರ ಪ್ರಾಣ ಹೋಗಿದೆ 430 ಜಾನುವಾರುಗಳ ಸಾವನ್ನಪ್ಪಿವೆ.1431 ಮನೆಗಳಿಗೆ ನೀರು ನುಗ್ಗಿದೆ.4242 ಮನೆಗಳಿಗೆ ಭಾಗಶ: ಹಾನಿಯಾಗಿದೆ ಎಂಬ ಮಾಹಿತಿ ನೀಡಿದರು.

ಇನ್ನೂ ಬೇಸಿಗೆ ಮಳೆಯಿಂದಾಗಿ ರಾಜ್ಯದಲ್ಲಿ 7010 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ.5736 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ.ಈ ಹಾನಿಗೆ ಪರಿಹಾ ರವಾಗಿ ನೀಡಲು 728 ಕೋಟಿ ರೂ ಡಿಸಿಗಳ ಪಿಡಿ ಖಾತೆ ಯಲ್ಲಿದೆ.ಅದನ್ನು ಬಳಸಿಕೊಂಡು ಡಿಸಿಗಳು, ಕಾರ್ಯ ದರ್ಶಿಗಳು ಮುಂದಿನ ಎರಡು ಮೂರು ದಿನ ಅಧಿಕಾರಿ ಗಳು ಕಡ್ಡಾಯ ಸ್ಥಳ‌ ಪರಿಶೀಲನೆ ಮಾಡಬೇಕು.ಮುಖ್ಯ ಕಾರ್ಯದರ್ಶಿ ಗೆ ಸ್ಥಳ ಭೇಟಿ ಬಗ್ಗೆ ಕಡ್ಡಾಯ ವರದಿ ಸಲ್ಲಿಸಬೇಕು.ಇಲಾಖೆಗಳ ಮಧ್ಯೆ ಸಮನ್ವಯತೆ ಸಾಧಿಸಿ ಕೆಲಸ ಮಾಡಬೇಕು.ಯಾವುದೇ ಅಧಿಕಾರಿಗಳಿಗೂ ಮುಂದಿನ 15 ದಿನ ರಜೆ ಇಲ್ಲ ಎಂಬುದಾಗಿ ತಿಳಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.