ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿಯ ವೇತನ ನೀಡುವ ಕುರಿತಂತೆ ಈಗಾಗಲೇ ಸೆಪ್ಟಂಬರ್ 6 ರಂದು ರಾಜ್ಯದ ಸರ್ಕಾರಿ ನೌಕರರಿಗೆ ನೀಡಲಾಗುವ ಸರ್ವೋತ್ತಮ ಪ್ರಶಸ್ತಿ ದಿನದಂದು ರಾಜ್ಯದ ಮುಖ್ಯಮಂತ್ರಿ ಘೋಷಣೆ ಮಾಡೇ ಮಾಡುತ್ತಾರೆ ಎಂಬ ಮಾಹಿತಿ ಈಗಾಗಲೇ ರಾಜ್ಯದ ಸರ್ಕಾರದ ವಲಯದಿಂದ ಮತ್ತು ಸಂಘಟನೆಯ ನಾಯಕರಿಂದ ಕೇಳಿ ಬಂದಿದ್ದು ಈಗಾಗಲೇ ಈ ಒಂದು ಮಾತಿಗೆ ಉತ್ತರವಾಗಿ ಮುಖ್ಯಮಂತ್ರಿಯವರು ತುರ್ತಾಗಿ ನಿನ್ನೆಯಷ್ಟೇ ಬೆಂಗಳೂರಿನಲ್ಲಿ ಗೌಪ್ಯವಾದ ಸಭೆಯೊಂ ದನ್ನು ಮಾಡಿದ್ದು ಇದರ ಬೆನ್ನಲ್ಲೇ ಈಗ ಮತ್ತೊಂದು ಹಂತದಲ್ಲಿ ಸಭೆಯನ್ನು ಕರೆದಿದ್ದಾರೆ.
ಹೌದು ಈಗಾಗಲೇ ಮೊದಲ ಸಭೆಯಲ್ಲಿ ಪ್ರಮುಖವಾದ ಮಾಹಿತಿಯನ್ನು ಪಡೆದುಕೊಂಡಿದ್ದು ಇದರ ಬೆನ್ನಲ್ಲೇ ಮುಖ್ಯಮಂತ್ರಿಯವರು ಈ ಕುರಿತಂತೆ ಮತ್ತೊಂದು ಹಂತ ದಲ್ಲಿ ಈ ಕುರಿತಂತೆ ಚರ್ಚೆ ಮಾಡಲು ಬೆಂಗಳೂರಿನಲ್ಲಿ ಸಭೆಯನ್ನು ಕರೆದಿದ್ದಾರೆ.
ಈ ಒಂದು ಸಭೆಯಲ್ಲಿ ಹಿರಿಯ ಕೆಲವೊಂದಿಷ್ಟು ಅಧಿಕಾರಿ ಗಳು ಮತ್ತು ಹಿರಿಯ ಸಚಿವರು ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿಯ ವೇತನ ನೀಡುವ ಕುರಿತಂತೆ ಮತ್ತೊಮ್ಮೆ ಚರ್ಚೆ ಮಾಡಿ ಇದಕ್ಕೆ ಅಂತಿಮವಾದ ರೂಪರೇಷೆಗಳನ್ನು ನೀಡಲು ಈಗಾಗಲೇ ಮುಖ್ಯಮಂತ್ರಿ ನಿರ್ಧಾರವನ್ನು ಮಾಡಿದ್ದು ಹೀಗಾಗಿ ಈ ಒಂದು ಎರಡನೇಯ ಹಂತದ ಮತ್ತೊಂದು ಸಭೆ ರಾಜ್ಯದ ಸರ್ಕಾರಿ ನೌಕರರು ನಿರೀಕ್ಷೆ ಮಾಡುತ್ತಿರುವ ಕೇಂದ್ರ ಸರ್ಕಾರದ ಮಾದರಿಯ 7ನೇ ವೇತನ ನೀಡುವ ವಿಚಾರಕ್ಕೆ ಪ್ರಮುಖವಾಗಿದೆ.ಇದರೊಂದಿಗೆ ಪ್ರಮುಖವಾಗಿ ಮೊದಲು ಸಮಿತಿ ರಚನೆ ಕುರಿತಂತೆ ಅಧ್ಯಕ್ಷರು ಸಮಿತಿಯ ಸದಸ್ಯರ ನೇಮಕ ಹೀಗೆ ಪ್ರತಿಯೊಂದು ವಿಚಾರ ಕುರಿತಂತೆ ಈ ಒಂದು ಸಭೆಯಲ್ಲಿ ಚರ್ಚೆಯಾಗಲಿದ್ದು ಶೀಘ್ರದಲ್ಲೇ ಸಮಿತಿ ರಚನೆಯಾಗಿ ವರದಿ ನೀಡಿ ವೇತನ ಜಾರಿಗೆ ಬಂದು ರಾಜ್ಯದ ಸರ್ಕಾರಿ ನೌಕರರಿಗೆ ನೇರವಾಗಲಿ ಎಂಬೊದೆ ಸಮಸ್ತ ರಾಜ್ಯ ಸರ್ಕಾರಿ ನೌಕರರ ಪರವಾಗಿ ಸುದ್ದಿ ಸಂತೆಯ ಆಶಯವಾಗಿದೆ.ಇನ್ನೂ ಪ್ರಮುಖವಾಗಿ ಕಳೆದ ಕೆಲ ದಿನಗಳಿಂದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ರಾಗಿರುವ ಷಡಾಕ್ಷರಿ ಸರ್ ಅಭಿಮಾನಿಗಳ ಬಳಗದ ರಾಜ್ಯ ಸಂಚಾಲಕರಾದ ಬೂದನೂರು ಮಹೇಶ ಮಂಡ್ಯ ಹಾಗೂ ಬಳಗದ ಸದಸ್ಯರು ರಾಜ್ಯದ ಸಮಸ್ತ ಸರ್ಕಾರಿ ನೌಕರರ ಪರವಾಗಿ ಧ್ವನಿ ಎತ್ತುತ್ತಾ ಬಿಡುವಿಲ್ಲದ ನಿರಂತರ ಒತ್ತಾಯ ಒತ್ತಡ ಹಾಕುತ್ತಾ ಬಂದಿದ್ದು ಇದೇಲ್ಲ ದರ ಪ್ರತಿಫಲವಾಗಿ ಈ ಒಂದು ಹಂತಕ್ಕೆ ಬಂದಿದ್ದು ಸುದ್ದಿ ಸಂತೆ ನ್ಯೂಸ್ ಕೂಡಾ ಇವರೆಲ್ಲರ ಧ್ವನಿಯಾಗಿ ವರದಿ ಪ್ರಸಾರ ಮಾಡಿತ್ತು.



























