ಬೆಂಗಳೂರು –
ಯಾರಿಗೂ ಯಾವ ಇಲಾಖೆಗೂ ಇಲ್ಲದ ಅವೈಜ್ಞಾನಿಕ ವರ್ಗಾವಣೆ ನಿಯಮಗಳಿಂದಾಗಿ ಬೇಸತ್ತಿರುವ ರಾಜ್ಯದ OTS ಶಿಕ್ಷಕರು ಈಗಾಗಲೇ ಎರಡು ಮೂರು ಬಾರಿ ಬೆಂಗಳೂರು ಚಲೋ ಮಾಡಿ ಬೇಡಿಕೆ ಈಡೇರದ ಹಿನ್ನೆಲೆ ಯಲ್ಲಿ ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಲು ಮುಂದಾಗಿದ್ದಾರೆ ಹೌದು ನಾಳೆ ಅಂದರೆ ಆಗಸ್ಟ್ 27 ರಂದು ರಾಯಚೂರು ಜಿಲ್ಲೆಗೆ ಆಗಮಿ ಸಲಿದ್ದು ಹೀಗಾಗಿ ಬೇಡಿಕೆ ಗಳ ಕುರಿತು ನಾಡದೊರೆ ಭೇಟಿ ಯಾಗಲು ನಿರ್ಧಾರ ಕೈಗೊಂಡಿದ್ದಾರೆ
ನಾಳೆ ರಾಯಚೂರಿನ ಕೃಷಿ ವಿ ವಿ ಯಲ್ಲಿ ಮಧ್ಯಾಹ್ನ 2 ಗಂಟೆಗೆ ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗಿ ಯಾಗುತ್ತಿರುವುದರಿಂದ ರಾಯಚೂರು ಸೇರಿದಂತೆ ಸುತ್ತಮುತ್ತಲಿನ ತಾಲೂಕು ಮತ್ತು ಜಿಲ್ಲೆಯ ವರ್ಗಾವಣೆ ವಂಚಿತ ಶಿಕ್ಷಕರು ಭೇಟಿಯಾಗಿ ನಮ್ಮ ನೋವನ್ನು ಹೇಳುವ ಕೆಲಸ ಮಾಡೋಣ ಯಾರಾದರೂ ಸ್ವಯಂ ಪ್ರೇರಿತರಾಗಿ ಒಂದು ಮನವಿ ಪತ್ರ ಸಿದ್ದ ಮಾಡಿ ಮನವಿ ಸಲ್ಲಿಸುವ ವ್ಯವಸ್ಥೆ ಮಾಡೊಣ ಎಂದು OTS ಶಿಕ್ಷಕ ಬಂಧುಗಳು ತೀರ್ಮಾನ ಕೈಗೊಂಡಿದ್ದಾರೆ ಅಲ್ಲದೆ ಕರೆ ನೀಡಿದ್ದಾರೆ
ಈ ಕುರಿತು ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಿದ್ದ ವಾಗಿದ್ದು ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಕ ಬಂಧುಗಳು ಈ ಒಂದು ಸಮಯದಲ್ಲಿ ಹಾಜರಿದ್ದು ಬೇಡಿಕೆ ಕುರಿತು ಧ್ವನಿ ಗೆ ಬೆಂಬಲ ನೀಡುವಂತೆ ವೇದಿಕೆಯ ಮಹೇಶ್ ಮಡ್ಡಿ ಮತ್ತು ಪವಾಡೆಪ್ಪ ಅವರು ಕರೆ ನೀಡಿದ್ದಾರೆ.