ಕಲಘಟಗಿ –
ಪಟಾಕಿ ತಂದ ಅವಾಂತರ.ಕ್ಷಣಾರ್ಧದಲ್ಲಿಯೇ ದೊಡ್ಡ ಪ್ರಮಾಣದಲ್ಲಿ ದುರಂತವೊಂದು ತಪ್ಪಿದೆ.ಹೌದು ರಸ್ತೆಯಲ್ಲಿ ಹಚ್ಚಿದ ಪಟಾಕಿ ತೆಂಗಿನ ಗಿಡಕ್ಕೆ ಸಿಡಿದಿದೆ. ಪಟಾಕಿ ಕಿಡಿ ಮರಕ್ಕೇ ಸಿಡಿಯುತ್ತಿದ್ದಂತೆ ಧಘ ಧಘನೇ ತೆಂಗಿನ ಮರ ಹೊತ್ತಿ ಉರಿದಿದೆ.ತೆಂಗಿನಮರ ಹೊತ್ತಿ ಉರಿಯುತ್ತಿದ್ದಂತೆ ಇದರಿಂದ ಹತ್ತಿಕೊಂಡ ಕಿಡಿ ತೆಂಗಿನ ಮರದಿಂದ ಅಕ್ಕಪಕ್ಕದ ಮನೆಗಳಿಗೆ ಆವರಿಸಿದೆ ಬೆಂಕಿ.

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮುಕ್ಕಲ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದ್ದು. ಚನ್ನಬಸಪ್ಪ ಬಡಿಗೇರ ಎಂಬುವವರಿಗೆ ಸೇರಿದ ತೆಂಗಿನ ಮರವಾಗಿದ್ದು ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಯುವಕರು ಗ್ರಾಮದಲ್ಲಿ ಪಟಾಕಿಯನ್ನು ಹಚ್ಚಿದ್ದು ಪಟಾಕಿಯ ಕಿಡಿ ತೆಂಗಿನ ಮರಕ್ಕೇ ಹೋಗಿ ತಗುಲಿದೆ.

ನಂತರ ಅದಕ್ಕೇ ಹತ್ತಿಕೊಂಡ ಬೆಂಕಿಯ ಕೆನ್ನಾಲಿಗೆ ಮರದ ಅಕ್ಕ ಪಕ್ಕದಲ್ಲಿನ ಮನೆಯ ಮೇಲೆ ಬಿದ್ದು ಬೆಂಕಿ ಹತ್ತಿಕೊಂಡಿದ್ದು.ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದರು.
ಇನ್ನೂ ಇತ್ತ ವಿಷಯ ತಿಳಿದ ಕಲಘಟಗಿ ಪೊಲೀಸ್ ರು ಕೂಡಾ ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ಮಾಡಿದ್ರು