ಅಥಣಿ –
ಸರ್ಕಾರಿ ನೌಕರರ ಸಂಘದ ಗೋಡೆ ಕುಸಿದು ಬಿದ್ದ ಘಟನೆ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ನಡೆದಿದೆ. ಸರ್ಕಾರಿ ನೌಕರರ ಸಂಘದ ಕಟ್ಟಡದ ಗೋಡೆ ಕುಸಿದು ಕೆಳಭಾಗದಲ್ಲಿದ್ದ ಮನೆಯೊಂದರ ಛಾವಣಿ ಮೇಲೆ ಬಿದ್ದಿದೆ. ಈ ವೇಳೆ ಛಾವಣಿ ಕೆಳಗಿದ್ದ ಮಹಿಳೆ ಗಾಯಗೊಂಡಿದ್ದು ಸುಮಾರು 50 ವರ್ಷಕ್ಕೂ ಹೆಚ್ಚು ಹಳೆಯದಾದ ಗೋಡೆ ಇದಾಗಿದೆ.ಕಲ್ಲು,ಮಣ್ಣಿನಿಂದ ನಿರ್ಮಾಣಗೊಂಡಿತ್ತು. ಸರ್ಕಾರಿ ನೌಕರರ ಸಂಘದ ಕಟ್ಟಡ ಹಲವು ವರ್ಷಗಳಿಂದ ಶಿಥಿಲಗೊಳ್ಳುತ್ತಿದೆ. ಸಂಘವು ವಾಣಿಜ್ಯ ಚಟುವಟಿಕೆಗೆ ಬಾಡಿಗೆಗೆ ಕಟ್ಟಡದ ಕೊಠಡಿಗಳನ್ನು ನೀಡಿದ್ದು ಕಟ್ಟಡದ ಕೆಳಭಾಗದಲ್ಲಿರುವ ಮನೆಗಳಿಗೆ ಅಪಾಯ ಎದುರಾಗಿದೆ.
ಈ ಬಗ್ಗೆ ಸೂಕ್ತ ಮುನ್ನೆಚ್ಚರಿಕೆಯನ್ನು ತಾಲೂಕಾಡಳಿತ ವಹಿಸಬೇಕಿದೆ ಎಂದು ಸಾರ್ವಜನಿಕರು ವಿನಂತಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ತಹಸೀಲ್ದಾರ್ ವಿವೇಕ ಶೇಣ್ವಿ, ಸರ್ಕಾರಿ ನೌಕರರ ಸಂಘದ ಕಟ್ಟಡದ ಗೋಡೆ ಬಿದ್ದ ಘಟನೆ ಯಲ್ಲಿ ಮಹಿಳೆಗೆ ಚಿಕ್ಕದಾಗಿ ತರಚಿದ ಗಾಯಗಳಾಗಿವೆ. ಆದರೂ ಗೋಡೆ ಬಿದ್ದ ಕಟ್ಟಡದ ಕೆಳಗಡೆ ವಾಸವಿದ್ದವರಿಗೆ ಮುನ್ನೆಚ್ಚರಿಕೆ ವಹಿಸಲು ತಿಳಿಸಲಾಗಿದೆ.ಸರ್ಕಾರಿ ನೌಕರರ ಸಂಘದ ಕಟ್ಟಡದ ಸುರಕ್ಷಿತೆ ಬಗ್ಗೆ ಸಂಬಂಧಪಟ್ಟ ಇಲಾಖೆ ಯ ಇಂಜಿನಿಯರ್ ಮೂಲಕ ತಕ್ಷಣ ಪರಿಶೀಲಿಸಿ ಮುಂದಿನ ಸೂಕ್ತ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.