ಹುಬ್ಬಳ್ಳಿ –
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡದ ಸೆಂಟ್ರಿಂಗ ನ ಸ್ಲ್ಯಾಬ್ ವೊಂದು ಕುಸಿದು ಬಿದ್ದಿದೆ.

ನಗರದ ಹೊಸೂರು ವೃತ್ತದಲ್ಲಿನ ಹುಬ್ಬಳ್ಳಿ ಒನ್ ಕೇಂದ್ರದ ಕಟ್ಟಡದ ನಿರ್ಮಾಣ ಹಂತದಲ್ಲಿನ ಎರಡನೇ ಪ್ಲೋರ್ ನ ಸೆಂಟ್ರಿಂಗ್ ನ ಮುಂದಿನ ಭಾಗ ಕುಸಿದು ಬಿದ್ದಿದೆ.

ಇದೊಂದು ಖಾಸಗಿ ಕಟ್ಟಡವಾಗಿದ್ದು ಎಲ್ಲಾ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ಈ ಒಂದು ಬಹುಮಹಡಿ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ.

ಎರಡನೇ ಹಂತದ ಸೆಂಟ್ರಿಂಗ್ ನ ಮುಂದಿನ ಭಾಗದ ಸ್ಲ್ಯಾಬ್ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು ಯಾವುದೇ ರೀತಿಯ ಅನಾಹುತಗಳಾಗಿಲ್ಲ. ಇನ್ನೂ ಗುತ್ತಿಗೆದಾರರು ಕೂಡಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ.