ಧಾರವಾಡ
ಕರೋನಾ ಸೋಂಕು ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಹಂತ ಹಂತವಾಗಿ ಒಂದೊಂದು ಚಟುವಟಿಕೆಗಳ ಆರಂಭಕ್ಕೇ ಅನುಮತಿ ನೀಡುತ್ತಿದೆ. ಈಗಾಗಲೇ ಹತ್ತು ಹಲವಾರು ವಲಯಗಳ ಆರಂಭಕ್ಕೇ ಅವಕಾಶ ನೀಡಲಾಗಿದ್ದು ಆರಂಭ ಮಾಡಲಾಗಿದೆ. ಇನ್ನೂ ಶಾಲಾ ಕಾಲೇಜುಗಳ ಆರಂಭಕ್ಕೂ ಗ್ರೀನ್ ಸಿಗ್ನಲ್ ಸಿಕ್ಕಿದೆ.ಕಳೆದ ವರುಷ ಮಾರ್ಚ್ ನಲ್ಲಿ ಲಾಕ್ ಆಗಿದ್ದ ಕಾಲೇಜುಗಳ ಆರಂಭಕ್ಕೇ ಕೇಂದ್ರ ಸರ್ಕಾರ ಅನುಮತಿ ನೀಡುತ್ತಿದ್ದಂತೆ ಇತ್ತ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಶಾಲಾ ಕಾಲೇಜುಗಳ ಆರಂಭಕ್ಕೇ ಅನುಮತಿ ನೀಡುವುದರೊಂದಿಗೆ ಕೆಲ ಷರತ್ತುಗಳನ್ನು ವಿಧಿಸಿದ್ದು ಕೇಂದ್ರ ಸರ್ಕಾರದ ಮಾರ್ಗ ಸೂಚಿಯಂತೆ ಎಲ್ಲಾ ಸಿದ್ದತೆಗಳನ್ನು ಶಿಕ್ಷಣ ಸಂಸ್ಥೆಗಳು ಮಾಡಿಕೊಳ್ಳುತ್ತಿದ್ದು ಧಾರವಾಡದಲ್ಲೂ ಕೂಡಾ ಬಹುತೇಕ ಸಿದ್ದತೆಗಳನ್ನು ನಗರಗಳಲ್ಲಿನ ಎಲ್ಲಾ ಶಿಕ್ಷಣ ಸಂಸ್ಥೆಗಳು ಮಾಡಿಕೊಂಡಿವೆ, ಇನ್ನೂ ನಗರದಲ್ಲಿನ ದೊಡ್ಡ ಶಿಕ್ಷಣ ಸಂಸ್ಥೆಯಾಗಿರುವ ಜೆಎಸ್ ಎಸ್ ಶಿಕ್ಷಣ ಸಂಸ್ಥೆಯಲ್ಲಿಯೂ ಕೂಡಾ ಎಲ್ಲಾ ವ್ಯವಸ್ಥೆಗಳು ಇಂದು ಕಂಡು ಬಂದವು. ನಾಳೆ ಕಾಲೇಜು ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಇಂದು ಕಾಲೇಜನ್ನು ಸಂಪೂರ್ಣವಾಗಿ ಸ್ಯಾನಿಟೈಸರ್ ಮಾಡಿಸಲಾಯಿತು.
ಸಂಸ್ಥೆಯ ಮುಖ್ಯಸ್ಥರಾದ ಡಾ ಅಜೀತ್ ಪ್ರಸಾದ್ ಸ್ವತಃ ತಾವೇ ಮುಂದೆ ನಿಂತುಕೊಂಡು ಜೆಎಸ್ ಎಸ್ ಕ್ಯಾಂಪಸ್ ನ್ನೂ ಸಂಪೂರ್ಣವಾಗಿ ಸ್ಯಾನಿಟೈಸರ್ ಮಾಡಿಸಿದ್ರು. ಕ್ಲಾಸ್ ರೂಮ್ ಸೇರಿದಂತೆ ಎಲ್ಲಾ ಕಡೆಗೂ ಸ್ವಚ್ಚತೆ ಮಾಡಿಸಿ ನಂತರ ಸಂಪೂರ್ಣವಾಗಿ ಸ್ಯಾನಿಟೈಸರ್ ಮಾಡಿಸಿದ್ರು. ಇದರೊಂದಿಗೆ ಸಿದ್ದತೆಯನ್ನು ಮಾಡಿಕೊಂಡು ನಾಳೆ ಆರಂಭವಾಗಲಿರುವ ಕ್ಲಾಸ್ ಗೆ ವ್ಯವಸ್ಥೆಯನ್ನು ಮಾಡಿಕೊಂಡರು.
ಇನ್ನೂ ಸಧ್ಯ ಪದವಿ ಅಂತಿಮ ವರುಷಗಳ ವರ್ಗಗಳು ಮಾತ್ರ ಆರಂಭವಾಗುತ್ತಿದ್ದು ಈಗಾಗಲೇ ಪಿಯುಸಿ ಪದವಿ ಸೇರಿದಂತೆ ಎಲ್ಲಾ ವರ್ಗಗಳಿಗೆ ಪ್ರವೇಶಗಳನ್ನು ಶಿಕ್ಷಣ ಸಂಸ್ಥೆಗಳು ಪಡೆದುಕೊಂಡಿವೆ. ಇವೆಲ್ಲದರ ನಡುವೆ ಎಂಟು ತಿಂಗಳ ನಂತರ ಕರೋನ ಮಹಾಮಾರಿಯ ನಡುವೆ ನಾಳೆ ಪದವಿ ಕಾಲೇಜ್ ಓಪನ್ ಆಗುತ್ತಿವೆ. ಧಾರವಾಡದ ಜಿಲ್ಲೆಯಲ್ಲರೂ ಪದವಿ ಕಾಲೇಜ್ ಗಳಲ್ಲಿ ಸಿದ್ದತೆ ಗಳು ಮುಗಿದಿದ್ದು. ನಗರದ ಶ್ರೀ ಮಂಜುನಾಥೇಶ್ವರ ಪದವಿ ಕಾಲೇಜ್ ಕಾಲೇಜ್ ಹೊರಗಡೆ ಹಾಗೂ ಕ್ಲಾಸ್ ರೂಂಗಳಿಗೆ ಸ್ಯಾನಿಟೈಸರ್ ಮಾಡಲಾಗಿದ್ದು.
ನಾಳೆ ಕಾಲೇಜ್ ಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಕೊವಿಡ್ ಟೆಸ್ಟ್ ರಿಪೋರ್ಟ್ ನೊಂದಿಗೆ ಕಾಲೇಜ್ ಗೆ ಹಾಜರಾಗಲು ಹಾಗೇ ಪಾಲಕರ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ತಗೆದುಕೊಂಡು ಬರಬೇಕು. ಇವೆರಡು ಇದ್ದರೆ ಮಾತ್ರ ಕಾಲೇಜನಲ್ಲಿ ಒಳಗಡೆ ಅನುಮತಿ ನೀಡಲಾಗುತ್ತದೆ ಎಂದು ಜೆಎಸ್ ಎಸ್ ಸಂಸ್ಥೆಯ ಮುಖ್ಯಸ್ಥ ಡಾ ಅಜೀತ್ ಪ್ರಸಾದ್ ಹೇಳಿದ್ದಾರೆ.
ಅಲ್ಲದೇ ನಾಳೆ ಬರುವ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡುವುದು ಮುಖಕ್ಕೆ ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಮಾಡಲಾಗುತ್ತದೆ ಎಂದು ಡಾ.ಅಜಿತ್ ಪ್ರಸಾದ ಸುದ್ದಿ ಸಂತೆ ವೇಬ್ ನ್ಯೂಸ್ ಗೆ ಹೇಳಿದ್ದು ನಾಳೆ ಬಿಎ ಬಿಕಾಂ ಬಿಎಸ್ಸಿ ವರ್ಗಗಳ ಅಂತಿಮ ವರ್ಗಗಳು ನಡೆಯಲಿವೆ.ಇನ್ನೂ ಸಿದ್ದತಾ ಕಾರ್ಯದಲ್ಲಿ ಡಾ ಅಜೀತ್ ಪ್ರಸಾದ್ ರೊಂದಿಗೆ ಜೀನಪ್ಪ ಕುಂದಗೋಳ, ಮಹಾವೀರ ಉಪಾಧ್ಯಾಯ, ಸೂರಜ್ ಜೈನ್, ಜಿ ಕೃಷ್ಣಮೂರ್ತಿ ಸೇರಿದಂತೆ ಸಿಬ್ಬಂದ್ದಿಗಳಿದ್ದರು.