ಧಾರವಾಡ –
ಹೌದು ಈ ಬಾರಿ ಜಿಲ್ಲೆಯ ಎಲ್ಲ ನೌಕರರು ಕುಟುಂಬ ಸಮೇತರಾಗಿ ಕಲಾಭವನದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಲು ತೀರ್ಮಾನಿ ಸಲಾಗಿದೆ.ಹೌದು OPS ಸಂಕಲ್ಪ ಯಾತ್ರೆಯ ಉಳಿದ ಜಿಲ್ಲೆಗಳಲ್ಲಿ ಭರ್ಜರಿ ಯಶಸ್ವಿಯಾಗಿದ್ದು ಧಾರವಾಡ ಜಿಲ್ಲೆಗೆ ದಿನಾಂಕ 07-11-2022 ರ ಸೋಮವಾರದಂದು ಬೆಳಿಗ್ಗೆ 8.00 ಗಂಟೆಗೆ ಧಾರವಾಡ ನಗರದ ಕಲಾಭವನದಿಂದ ಆರಂಭ ವಾಗಲಿದ್ದು ತಾವೆಲ್ಲರೂ ಯಾವುದೇ ನೆಪ ಹೇಳದೇ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಲಾಗಿದೆ.
ಅಂದು ಬೆಳಿಗ್ಗೆ 8.00ಗಂಟೆಗೆ ಕಲಾಭವನದಲ್ಲಿ ಹಾಜರಿರುವದು.ಉಪಹಾರದ ವ್ಯವಸ್ಥೆ ಇದ್ದು ಸರಿಯಾಗಿ 8.30ಕ್ಕೆ ಪಾದಯಾತ್ರೆ ಆರಂಭಿ ಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ಪುರುಷ ನೌಕರರು ಕಪ್ಪು ಪ್ಯಾಂಟ್ & ಬಿಳಿ ಅಂಗಿ ಧರಿಸುವದು,ಮಹಿಳಾ ನೌಕರರು ರಾಷ್ಟ್ರೀಯ ಹಬ್ಬಗಳಲ್ಲಿ ಧರಿಸುವ ಬಿಳಿಯ ವರ್ಣದ ಸೀರೆ ಚೂಡಿದಾರ ಧರಿಸಿ ಪಾಲ್ಗೊಳ್ಳಲು ಕೋರಲಾಗಿದೆ.
ಈ ಬಾರಿ ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆ ಯಲ್ಲಿ ಚರ್ಚಿಸಿದಂತೆ ಕೇವಲ NPS ನೌಕರರು ಮಾತ್ರವಲ್ಲ ಎಲ್ಲ ಓಪಿಎಸ್ ನೌಕರರು ಕಡ್ಡಾಯ ವಾಗಿ ಪಾಲ್ಗೊಳ್ಳುವದು ವಿಶೇಷ ಸೂಚನೆ ಯಾಗಿ ತಮ್ಮೆಲ್ಲರ ಬೇಡಿಕೆಯಂತೆ ಈ ಬಾರಿ ನಮ್ಮ ಜಿಲ್ಲೆಯ ಸಂಕಲ್ಪ ಯಾತ್ರೆಯಲ್ಲಿ ಎಲ್ಲ ನೌಕರರು ಕಡ್ಡಾಯವಾಗಿ ಕುಟುಂಬ ಸಮೇತರಾಗಿ ಪಾಲ್ಗೊಳ್ಳುವಂತೆ ಸೂಚನೆ ನೀಡಲಾಗಿದೆ.
ಶಾಲೆಗಳಲ್ಲಿ ಪರೀಕ್ಷೆ ಇದೆ,ರಜೆ ಇಲ್ಲ,ಕೆಲಸದ ಒತ್ತಡ ಇದೆ,ಮೇಲಾಧಿಕಾರಿಗಳ ಏನಂತಾರೋ ಏನೂ ಮಾಡುವದು ಈ ಯಾವುದೇ ಕಾರಣ ಗಳನ್ನು ನೆಪವೊಡ್ಡದೇ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಸಂಘದ ಮುಖಂಡರು ಕರೆ ನೀಡಿದ್ದು ಯಾಕೆಂದರೆ ನಮ್ಮ ಜೀವನದ ಪರೀಕ್ಷೆ ಇದಾಗಿದೆ ಎಂದಿದ್ದಾರೆ
ಸೋಮವಾರದ ಯಾತ್ರೆಯಲ್ಲಿ ಪಾಲ್ಗೊಳ್ಳಲು ತಾವುಗಳು ಇಂದಿನಿಂದಲೇ ಸೂಕ್ತ ತಯಾರಿ ಮಾಡಿಕೊಳ್ಳಬೇಕು.ಇದು ನಮ್ಮ ಯಾತ್ರೆ ನಾವೇ ಶಿಸ್ತುಬದ್ಧರಾಗಿ,ವ್ಯವಸ್ಥಿತವಾಗಿ ಪಾದಯಾತ್ರೆ ಮಾಡಿ ಯಶಸ್ವಿಗೊಳಿಸೋಣ.ಹೆಚ್ಚಿನ ಪ್ರಮಾಣ ದಲ್ಲಿ ನೌಕರರು ಸೇರಿಸುವ ಪ್ರಯುಕ್ತ ಕಡ್ಡಾಯ ವಾಗಿ ಕಲಾಭವನದಿಂದಲೇ ಎಲ್ಲರೂ ಹಾಜರಾಗ ಬೇಕು ಎಂದು ಸೂಚನೆ ನೀಡಿದ್ದಾರೆ.
ನಿಮ್ಮ ಆಗಮನದ ನಿರೀಕ್ಷೆಯಲ್ಲಿ ಅಧ್ಯಕ್ಷರು & ಸರ್ವ ಪದಾಧಿಕಾರಿಗಳು ಜಿಲ್ಲಾ ಘಟಕ ಧಾರವಾಡ,ಕರ್ನಾಟಕ ರಾಜ್ಯ ಸರಕಾರಿ NPS ನೌಕರರ ಸಂಘ ಜಿಲ್ಲಾ ಘಟಕ ಧಾರವಾಡ ಆತ್ಮೀಯ ಎಲ್ಲ ನೌಕರ ಬಂಧುಗಳೇ ಬನ್ನಿ ಪಾಲ್ಗೊಂಡ ಯಶಸ್ಸು ಗೊಳಿಸಿ……