ಕುಂದಗೋಳ –
ಗ್ರಾಮ ಪಂಚಾಯತ ರಾಜಕೀಯ ಜಿದ್ದಾಜಿದ್ದಿಯ ಕಾವು ಜೋರಾಗುತ್ತಿದೆ. ಗ್ರಾಮ ಪಂಚಾಯತ ದಿನಾಂಕ ಪ್ರಕಟವಾಗುತ್ತಿದ್ದಂತೆ ಎಲ್ಲಾ ಪಕ್ಷದದವರು ಭರ್ಜರಿಯಾಗಿ ಸಿದ್ದತೆ ಮಾಡಿಕೊಳ್ಳುತ್ತಿದ್ದರೆ ಇತ್ತ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಇವೆಲ್ಲದರ ನಡುವೆ ಧಾರವಾಡದ ಕುಂದಗೋಳದ ಯಲಿವಾಳ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ವಿಚಾರ ಕುರಿತಂತೆ ಗ್ರಾಮಸ್ಥರು ಗ್ರಾಮದ ಯುವಕರು ಚುನಾವಣೆಗೆ ಗರಂ ಆಗಿದ್ದಾರೆ.

ಯಲಿವಾಖಬಾ ವಾಳ ಅರಳಿಕಟ್ಟಿ ನಡುವೆ 5 ಕಿಲೋ ಮೀಟರ ರಸ್ತೆ ಇದೆ.ಎರಡು ಗ್ರಾಮಗಳ ನಡುವಿನ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಮಾಡಿ ಎಂದು ಹಲವಾರು ವರುಸಗಳಿಂದ ಹೋರಾಟವನ್ನು ಮಾಡಿಕೊಂಡುಬರಲಾಗುತ್ತಿದೆ. ಈಕುರಿತಂತೆ ಎಲ್ಲಾ ಪಕ್ಷಗಳ ಮುಖಂಡರಿಗೆ ಮನವಿ ನೀಡಿ ನೀಡಿ ಗ್ರಾಮಸ್ಥರು ಬೇಸತ್ತಿದ್ದಾರೆ.
ಕೊನೆಗೆ ಸಧ್ಯ ಗ್ರಾಮ ಪಂಚಾಯತ ಚುನಾವಣೆ ಬಂದಿದ್ದ ಹೀಗಾಗಿ ಊರಿಗೆ ಬಂದವರು ನೀರಿಗೆ ಬರಲೇಬೇಕು ಎಂದುಕೊಂಡ ಗ್ರಾಮದ ಯುವಕರು ಚುನಾವಣೆಗೆ ಸ್ಪರ್ಧೆ ಮಾಡುವ ಹಾಗೂ ಎಲ್ಲಾ ರಾಜಕೀಯ ಪಕ್ಷಗಳ ನಾಯಕರಿಗೆ ಸಖತ್ ಟಾಂಗ್ ಕೊಟ್ಟಿದ್ದಾರೆ.ನಮ್ಮ ರಸ್ತೆ ನಮ್ಮ ಹಕ್ಕು ಎಲುಬು ಗಟ್ಟಿಯಿದ್ದವರು ಯಲಿವಾಳಕ್ಕೇ ಬನ್ನಿ.

ರಾಜಕೀಯ ಬಿಡಿ ಕಾಂಕ್ರೀಟ್ ರಸ್ತೆ ಮಾಡಿ. ಕೊನೆ ಎಂದು ಕೊನೆಗಾಣಸದೇ ಹೋದರೆ ಕೊನೆಯಾಗುವೆವು ವಾವಿಂದು ಎಂದು ಬರೆದಿರುವ ಕಾಂಕ್ರೀಟ್ ರಸ್ತೆಯ ನಿರ್ಣಾಣ ಹೋರಾಟ ಸಮಿತಿ ಈಒಂದು ಆಂದೋಲನವನ್ನು ಮಾಡುತ್ತಿದೆ.

ಈ ಒಂದು ಬ್ಯಾನರ್ ಗಳನ್ನು ಊರಿಗೆ ತುಂಬೆಲ್ಲಾ ಕಾಂಕ್ರೀಟ್ ಹೋರಾಟ ಸಮಿತಿಯವರು ಹಾಕಿದ್ದು ಇದರಿಂದ ಗ್ರಾಮಕ್ಕೇ ಹೋಗಲು ರಾಜಕೀಯ ಪಕ್ಷದದವರು ಹಿಂದೆ ಮುಂದೆ ನೋಡುವಂತಾಗಿದ್ದು ಇವೆಲ್ಲದರ ನಡುವೆ ಗ್ರಾಮಸ್ಥರು ಈ ಬಾರಿ ಚುನಾವಣೆಯನ್ನು ಮಾಡ್ತಾರಾ ಇಲ್ಲವೇ ಇದೇ ವಿಚಾರವನ್ನಿಟ್ಟುಕೊಂಡು ಹೋರಾಟ ಮಾಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ.






















