ಹುಬ್ಬಳ್ಳಿ ಧಾರವಾಡ –
ದಣಿವರಿಯದ ಮಹಾನಗರ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ – ನಿರಂತರ ಸಭೆ,ತೆರಿಗೆ ಮೇಳ,ಅಲ್ಲೇ ಇಲ್ಲೇ ಭೇಟಿ ಧಾರವಾಡದ ಕಚೇರಿಯಲ್ಲಿ ಸಭೆ, ಅಮ್ಮಿನಬಾವಿಯಲ್ಲಿ ಕುಡಿಯುವ ನೀರು ಕಾಮಗಾರಿ ವೀಕ್ಷಣೆ……ರಾತ್ರಿ ಬೆಂಗಳೂರಿಗೆ ಪ್ರಯಾಣ ಬೆಳಿಗ್ಗೆ ಸಭೆಗೆ ಹಾಜರ್…..
ರಾಜ್ಯದಲ್ಲಿಯೇ ಎರಡನೇಯ ದೊಡ್ಡ ಮಹಾನಗರ ಪಾಲಿಕೆ ಯಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರು ಪಾಲಿಕೆಗೆ ಆಯುಕ್ತರಾಗಿ ಬಂದ ಮೇಲೆ ಒಂದಿಲ್ಲೊಂದು ಅಭಿವೃದ್ದಿ ಕೆಲಸ ಕಾರ್ಯಗಳಾ ಗುತ್ತಿವೆ.ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿಯಾಗಿ ರುವ ಡಾ ಈಶ್ವರ ಉಳ್ಳಾಗಡ್ಡಿಯವರು ಪಾಲಿಕೆಗೆ ಆಯುಕ್ತರಾಗಿ ಬಂದ ಮೇಲೆ ಕೆಲಸ ಕಾರ್ಯಗಳು ಜನಸ್ನೇಹಿಯಾಗಿ ನಡೆಯುತ್ತಿದ್ದು ಒಂದಿಷ್ಟು ಸಮಯ ವಿಲ್ಲದೇ ಸುತ್ತಾಡುತ್ತಿರುತ್ತಾರೆ ಎಂಬೊದಕ್ಕೆ ಶುಕ್ರವಾರದ ಕಾರ್ಯಕ್ರಮಗಳೇ ಸಾಕ್ಷಿ
ಹೌದು ಮಹಾನಗರ ಪಾಲಿಕೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ ಯವರು ಹೊಸದೊಂದು ಪ್ರಯೋಗಕ್ಕೆ ಮುಂದಾಗಿ ಇ ಆಸ್ತಿ ಮತ್ತು ಆಸ್ತಿ ತೆರಿಗೆ ಮೇಳ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು ಕಾರ್ಮಿಕ ಸಚಿವ ಸಂತೋಷ ಲಾಡ್ ಅವರೊಂದಿಗೆ ಹುಬ್ಬಳ್ಳಿಯ ಮಹಾನಗರ ಪಾಲಿಕೆಯ ಆವರಣದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಹುಬ್ಬಳ್ಳಿಯ ಕಚೇರಿಯಲ್ಲಿ ಒಂದಿಷ್ಟು ಕೆಲಸ ಗಳೊಂದಿಗೆ ನಂತರ ಹುಬ್ಬಳ್ಳಿಯಿಂದ ಧಾರವಾಡ ಗೆ ಹೋಗುವ ದಾರಿ ಮಧ್ಯದಲ್ಲಿ ಬಡಾವಣೆಗಳ ವೀಕ್ಷಣೆ ಮಾಡಿಕೊಂಡು ಧಾರವಾಡ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರೊಂದಿಗೆ ಸಭೆಯಲ್ಲಿ ಪಾಲ್ಗೊಂಡು ಮತ್ತೆ ಧಾರವಾಡ ಪಾಲಿಕೆಯ ಕಚೇರಿ ಯಲ್ಲಿ ಸಾರ್ವಜನಿಕರ ಭೇಟಿಯೊಂದಿಗೆ ಅಧಿಕಾರಿ ಗಳೊಂದಿಗೆ ಸಭೆಯನ್ನು ಮಾಡಿ
ಒಂದಿಷ್ಟು ಪೈಲ್ ಗಳಿಗೆ ಸಹಿ ಹಾಕಿ ಸಂಜೆ ಮೇಯರ್ ಅವರೊಂದಿಗೆ ಅವಳಿ ನಗರಕ್ಕೆ ಹೊಸದಾಗಿ ನಿರಂತರ ಕುಡಿಯುವ ನೀರು ಯೋಜನೆಯ ಕಾಮಗಾರಿಯನ್ನು ವೀಕ್ಷಣೆ ಮಾಡಿ ಅಲ್ಲಿಂದ ಬೇರೆ ಬೇರೆ ಕಡೆಗಳಲ್ಲಿ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ರಾತ್ರಿ 9 ಗಂಟೆ ಯಾಗುತ್ತಿದ್ದಂತೆ ಹುಬ್ಬಳ್ಳಿಯ ನಿವಾಸಕ್ಕೆ ಬಂದು ಗಡಿ ಬಿಡಿಯಲ್ಲಿ ಊಟ ಮಾಡಿಕೊಂಡು ಅರ್ಧ ಗಂಟೆಯೂ ಮನೆಯಲ್ಲಿ ಕುಳಿತುಕೊಳ್ಳದೇ ಬೆಂಗಳೂರಿನಲ್ಲಿ ತುರ್ತು ಸಭೆ ಹಿನ್ನಲೆಯಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಆಯುಕ್ತರು ರಸ್ತೆ ಮಾರ್ಗವಾಗಿ ಪ್ರಯಾಣವನ್ನು ಬೆಳೆಸಿದ್ದಾರೆ
ಇದು ಒಂದೇ ದಿನದ ಕಥೆಯಾಗಿದ್ದು ಪ್ರತಿದಿನ ಇದೇ ಪರಸ್ಥಿತಿ ಚಿತ್ರಣ ಆಯುಕ್ತರಾಗಿದ್ದು ಕುಟುಂಬಕ್ಕೂ ಸಮಯವನ್ನ ನೀಡದೆ ವಿಶ್ರಾಂತಿಯನ್ನು ಮಾಡದೇ ನಿರಂತರ ಕುಡಿಯುವ ನೀರು ಯೋಜನೆಯಂತೆ ಬಿಡುವಿಲ್ಲದೇ ದಣಿವರಿಯದ ಹಾಗೇ ಸುತ್ತಾಡುತ್ತಿರುವ ಆಯುಕ್ತರ ಕಾರ್ಯವೈಖರಿ ಕುರಿತು ಮಾತಮಾಡು ವವರು ಆಯುಕ್ತರ ದಿನಚರಿ ಯನ್ನು ಒಮ್ಮೆ ನೋಡ ಬೇಕಿದೆ.ನಮ್ಮ ಕೈಗೆ ಸಿಗೊದಿಲ್ಲ ಎನ್ನುವವರು ತಿರುಗಾಟ ಸುತ್ತಾಟವನ್ನು ನೋಡಿದರೆ ಎಲ್ಲವೂ ಗೊತ್ತಾಗುತ್ತದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ ಧಾರವಾಡ…..