ಕಾರವಾರ –
ಪೊಲೀಸ್ ಇನ್ಸ್ಪೆಕ್ಟರ್ ಧಮ್ಕಿಗೆ ಹೆದರಿದ 13 ವರ್ಷದ ಬಾಲಕಿಯೋರ್ವಳು ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿದು ಕುಳಿತ ಘಟನೆ ಮುಂಡಗೋಡ ತಾಲೂಕಿನ ಹುಲಿಹೊಂಡ ಗ್ರಾಮದಲ್ಲಿ ನಡೆದಿದೆ.ಹೌದು ಮುಂಡ ಗೋಡ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಿದ್ದಪ್ಪ ಸಿಮಾನಿ ಅವರೇ ಬಾಲಕಿಗೆ ಧಮ್ಕಿ ಹಾಕಿದ್ದಾರೆ ಎಂಬ ಗಂಭೀರವಾದ ಆರೋಪವೊಂದು ಈಗ ಬಾಲಕಿಯ ಫೋಷಕರಿಂದ ಕೇಳಿ ಬಂದಿದೆ.
ಜೂನ್ 5ರಂದು ಹೊಲದ ವಿಷಯವಾಗಿ ಸುಭಾನ್ಸಾಬ್ ನಬಿಸಾಬ್ ಹುಲಗುರ ಹಾಗೂ ಮುಂಡಗೋಡ ಠಾಣೆ ಇನ್ಸ್ಪೆಕ್ಟರ್ ಸಿದ್ದಪ್ಪ ಸಿಮಾನಿ ನಡುವೆ ಜೋರಾದ ಮಾತು ಕತೆ ನಡೆದಿದೆ.ಇದನ್ನು ದೂರದಿಂದಲೇ ನೋಡುತ್ತಿದ್ದ ಬಾಲಕಿ ಮೊಬೈಲ್ ತೆಗೆದು ವಿಡಿಯೋ ಮಾಡುತ್ತಿದ್ದಳು. ಆದರೆ ಇದನ್ನು ಕಂಡ ಇನ್ಸ್ಪೆಕ್ಟರ್ ಬಾಲಕಿಯಿಂದ ಮೊಬೈಲ್ ಕಸಿದುಕೊಂಡು ವಿಡಿಯೋ ಯಾಕೆ ಮಾಡುತ್ತಿ ದ್ದೀಯಾ? ಬಹಳ ಹುಷಾರಿದ್ದಿ,ನಿನ್ನ ಚರ್ಮ ಸುಲಿಯುತ್ತೇನೆ ಎಂದು ಧಮ್ಕಿ ಹಾಕಿ,ನೀವು ಎಲ್ಲರೂ ಪೊಲೀಸ್ ಠಾಣೆಗೆ ಬರಬೇಕೆಂದು ಹೇಳಿದ್ದರಂತೆ.ಇದರಿಂದ ಭಯಭೀತಳಾಗಿ ಇದುವರೆಗೂ ಚೇತರಿಸಿಕೊಳ್ಳದ ಬಾಲಕಿ ಮಾನಸಿಕವಾಗಿ ಅದೇ ಚಿತ್ರಣವನ್ನು ತಲೆಯಲ್ಲಿಟ್ಟುಕೊಂಡಿದ್ದಾಳೆ.ಅಲ್ಲದೆ ಶಾಲೆಗೆ ಹೋಗುವುದನ್ನೂ ನಿಲ್ಲಿಸಿದ್ದು ಇದರಿಂದ ಮನೆಯ ವರೂ ಆತಂಕಗೊಂಡಿದ್ದಾರೆ.ಕೂಡಲೇ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಬಾಲಕಿಯ ತಂದೆ ಅಮಹಾನ್ ಅಬ್ದುಲ್ಸಾಬ್ ತಡಸ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿದ್ದಾರೆ.