ಬೆಂಗಳೂರು –
ಬೆಡ್ ಬ್ಲಾಕ್ ದಂಧೆ ಹೊರಗೆಳೆದವರ ಮೇಲೆ ಈಗ ದೂರು ದಾಖಲಾಗಿದೆ.ಹೌದು ಬೆಂಗಳೂರಿನಲ್ಲಿನ BBMP ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರಿಗೆ ಬೆಡ್ ನಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸದಂತೆ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಶಾಸಕರಾದ ಸತೀಶ್ ರೆಡ್ಡಿ, ರವಿ ಸುಬ್ರಹ್ಮಣ್ಯ, ಉದಯ್ ಗರುಡಾ ಚಾರ್ ಇವರ ಮೇಲೆ ದೂರನ್ನು ದಾಖಲು ಮಾಡಲಾ ಗಿದೆ.ಹೌದು ಇವರು ಒಂದು ಸಮುದಾಯದ ವಿರು ದ್ದ ಮಾತನಾಡಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಪಕ್ಷದ ಸ್ಟೇಟ್ ಕಮಿಟಿ ಅಬ್ಸರ್ವರ್ ನಜ್ಮಾ ನಜೀರ್ ಭಾನು ಎಂಬುವವರು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್‌ಗೆ ದೂರು ನೀಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರಿಗೆ ಬೆಡ್ ಸಿಗದಿರುವುದಕ್ಕೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯದೇ ಇರುವುದಕ್ಕೆ ಬೆಡ್ ಬ್ಲಾಕಿಂಗ್ ದಂಧೆ ಯೇ ಕಾರಣ ಎಂದು ಭಾರೀ ಅಕ್ರಮವನ್ನು ಹೊರಗೆ ಳೆದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಶಾಸಕರಾದ ಸತೀಶ್ ರೆಡ್ಡಿ, ರವಿ ಸುಬ್ರಹ್ಮಣ್ಯ ಉದಯ್ ಗರುಡಾ ಚಾರ್ ವಿರುದ್ಧ ದೂರು ದಾಖಲಾಗಿದೆ.ಬೆಡ್ ಬ್ಲಾಕಿಂ ಗ್ ದಂಧೆಯನ್ನು ಹೊರಗೆಳೆಯುವ ವೇಳೆ ಒಂದು ಧರ್ಮದ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಹೀಗಾಗಿ ಈ ಎಲ್ಲರ ವಿರುದ್ಧವೂ ಸೂಕ್ತ ಕ್ರಮ ಕೈಗೊ ಳ್ಳಬೇಕೆಂದು ದೂರಿನ ಮೂಲಕ ಆಗ್ರಹಿಸಿದ್ದಾರೆ.