ಧಾರವಾಡ –
ಹುಮ್ನಾಬಾದ್ ನಲ್ಲಿ ತಹಶೀಲ್ದಾರ ಮೇಲೆ ನಡೆದ ಹಲ್ಲೆಗೆ ಧಾರವಾಡದಲ್ಲೂ ಖಂಡನೆ ವ್ಯಕ್ತವಾಗಿ ಘಟನೆಯನ್ನು ಖಂಡಿಸಿ ನಗರದಲ್ಲಿ ಧಾರವಾಡ ಜಿಲ್ಲಾ ಸರ್ಕಾರಿ ನೌಕರರು ಪ್ರತಿಭಟನೆಯನ್ನು ಮಾಡಿದರು.ಜಿಲ್ಲಾಧ್ಯಕ್ಷ ಎಸ್ ಎಫ್ ಸಿದ್ದನಗೌಡ್ರ ನೇತ್ರತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.

ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ತಹಶೀ ಲ್ದಾರ್ ಮೇಲೆ ನಡೆದ ಹಲ್ಲೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತೀವ್ರವಾಗಿ ಖಂಡಿಸಿದೆ. ಧಾರವಾಡ ಜಿಲ್ಲಾದಿಕಾರಿಗಳಿಗೆ ಹುಮ್ನಾಬಾದ್ ತಾಲೂಕಿನ ಘಟನೆಯನ್ನು ಖಂಡಿಸಿ ಸರ್ಕಾರಿ ನೌಕರಿಗೆ ರಕ್ಷಣೆ ನೀಡಬೇ ಕೆಂಬ ಮನವಿಯನ್ನು ಸಲ್ಲಿಸಲಾಯಿತು ಸಂದರ್ಭದಲ್ಲಿ ಎಲ್ಲಾ ನಿರ್ದೇಶಕರು,ಪದಾಧಿಕಾರಿಗಳು ಹಾಗೂ ಕಂದಾಯ ಇಲಾಖಾ ನೌಕರರ ಸಂಘ,ಗ್ರಾಮ ಲೆಕ್ಕಾಧಿಕಾರಿಗಳ ಸಂಘ ದ ಪದಾಧಿಕಾರಿಗಳು,ಸದಸ್ಯರು ಹಾಗೂ ವೃಂದ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಜಿಲ್ಲಾಧ್ಯಕ್ಷರಾಗಿರುವ ಎಸ್.ಎಫ್ ಸಿದ್ಧನಗೌಡ್ರ ನೇತ್ರತ್ವದಲ್ಲಿ ಈ ಒಂದು ಪ್ರತಿಭಟನೆ ನಡೆಯಿತು.
ಎಸ್.ಜಿ.ಸುಬ್ಬಾಪೂರಮಠ,ಪ್ರಧಾನ ಕಾರ್ಯದರ್ಶಿಗಳು, ಆರ್ ಬಿ ಲಿಂಗದಾಳ, ಗೌರವಾದ್ಯಕ್ಷರು ದೇವಿದಾಸ ಶಾಂತಿಕರ, ರಾಜ್ಯ ಪರಿಷತ್ ಸದಸ್ಯರು ರಾಜಶೇಖರ ಬಾಣದ ಖಜಾಂಚಿಗಳು,ಗಿರೀಶ ಚೌಡಕಿ ನೌಕರರ ಭವನ ಕಾರ್ಯದರ್ಶಿ ಮಂಜುನಾಥ ಯಡಳ್ಳಿ ಹಾಗೂ ತಹಸಿಲ್ದಾರ ರಾಮಚಂದ್ರ ಬಿರಾದರ,ಯೋಜನಾ ನಿರ್ದೇಶಕರಾದ ರುದ್ರೇಶ ಕಂದಾಯ ಇಲಾಖೆಯ ಪರಮಾನಂದ ಶಿವಳ್ಳಿಮಠ


ಮಂಜು ಗೂಳಪ್ಪನವರ,ಮಲ್ಲಿಕಾರ್ಜುನ ಸೋಲಗಿ ಶ್ರೀದರ,ಪಡಿಯಪ್ಪನವರ ,ಹೋನ್ನಪ್ಪನವರ,ಮಹೇಶ್,ಆನಂದ, ರಮೇಶ್ ಮೆಹರವಾಡೆ, ಶಾಂತಾ ಶೀಲವಂತರ ಮುಂತಾದವರು ಉಪಸ್ಥಿತರಿದ್ದರು.