ಶಿಕ್ಷಣ ಸಚಿವರ ಹೇಳಿಕೆಗೆ ಖಂಡನೆ ಕೂಡಲೇ ಸಚಿವ ಸಂಪುಟದಿಂದ ಕೈಬಿಡುವಂತೆ ಒತ್ತಾಯ ನಾಡಿನ ಶಿಕ್ಷಕರ ಕುಲಕ್ಕೆ ಅವಮಾನ ಮಾಡಿದನ್ನು ಖಂಡಿಸಿದ ಗ್ರಾಮೀಣ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಸಂಘ…..

Suddi Sante Desk

ಬೆಂಗಳೂರು –

ಶಿಕ್ಷಕರನ್ನ ನೇಮಿಸೋದು ಪಾಠ ಮಾಡೋದಕ್ಕೆ ಸಂಸಾರ ನೋಡಲಿಕ್ಕಲ್ಲ ಎಂದು ಹೇಳಿಕೆ ನೀಡಿರುವ ಶಿಕ್ಷಣ ಸಚಿವರ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.ಈ ಒಂದು ಹೇಳಿಕೆಯನ್ನು ನೀಡಿರುವ ಶಿಕ್ಷಣ ಸಚಿವ ಬಿ ಸಿ ನಾಗೇಶ್ ವಿರುದ್ದ ರಾಜ್ಯದ ಶಿಕ್ಷಕರು ಈಗ ಸಿಡಿದೆದ್ದಿದ್ದಾರೆ. ನಾವು ಕೂಡಾ ಸಂಸಾರಿಗಳೇ ಸ್ವಾಮಿ ನಮಗೂ ಸಂಸಾರ ಮಕ್ಕಳು ತಂದೆ ತಾಯಿ ಬಂಧು ಬಳಗ ಹೀಗೆ ನಿಮ್ಮ ಹಾಗೇ ಎಲ್ಲವೂ ಇದೆ ಎಂದಿದ್ದಾರೆ.

ಹೌದು ರಾಜ್ಯದ ಶಿಕ್ಷಕರಿಗೆ ಈ ಒಂದು ಶಿಕ್ಷಣ ಸಚಿವರ ಹೇಳಿಕೆ ಅವಮಾನವನ್ನು ಮಾಡಿದಂತಾಗಿದ್ದು ಈ ಕೂಡಲೇ ನಾಡಿನ ಶಿಕ್ಷಕರ ಕ್ಷಮೆಯನ್ನು ಕೇಳುವಂತೆ ರಾಜ್ಯದ ಗ್ರಾಮೀಣ ಶಿಕ್ಷಕರ ಪರವಾಗಿ ಗ್ರಾಮೀಣ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಪವಾಡೆಪ್ಪ ಮತ್ತು ಅಶೋಕ ಸಜ್ಜನ ಒತ್ತಾಯವನ್ನು ಮಾಡಿದ್ದಾರೆ.ಈ ಕೂಡಲೇ ಅವರು ಈ ಒಂದು ವಿಚಾರ ದಲ್ಲಿ ಶಿಕ್ಷಕರ ಬಗ್ಗೆ ಹಗುರವಾಗಿ ಮಾತನಾಡಿದ್ದು ತಪ್ಪು ಹೀಗಾಗಿ ಕೂಡಲೇ ಶಿಕ್ಷಕರ ಕ್ಷಮೆಯನ್ನು ಕೇಳಬೇಕು ಹಾಗೇ ಇವರನ್ನು ಕೂಡಲೇ ಸಚಿವ ಸಂಪುಟದಿಂದ ಕೈಬಿಡುವಂತೆ ಇವರು ಮುಖ್ಯಮಂತ್ರಿಯವರಿಗೆ ಒತ್ತಾಯವನ್ನು ಮಾಡಿ ದರು. ಇವರ ಒಂದು ಹೇಳಿಕೆಯಿಂದಾಗಿ ನಾಡಿನ ಶಿಕ್ಷಕರಿಗೆ ಅವಮಾನ ಮಾಡಿದಂತಾಗಿದ್ದು ನಿಜವಾಗಿಯೂ ಹೀಗೆ ಮಾತನಾಡಿದ್ದು ದೊಡ್ಡ ತಪ್ಪು ಕ್ಷಮೆ ಕೇಳಬೇಕು ಹಾಗೇ ಮುಖ್ಯಮಂತ್ರಿಯವರು ಇವರನ್ನು ಕೂಡಲೇ ಸಚಿವ ಸ್ಥಾನ ದಿಂದ ಕೈಬಿಡುವಂತೆ ಗ್ರಾಮೀಣ ಶಿಕ್ಷಕರ ಸಂಘದವರು ಒತ್ತಾಯವನ್ನು ಮಾಡಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.