ಧಾರವಾಡ –
ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಬೆಲೆ ಏರಿಕೆಗೆ ವಿರುದ್ದ ಮಹಿಳಾ ಕಾಂಗ್ರೇಸ್ ಪಕ್ಷದ ಘಟಕದರು ಬೀದಿಗಿಳಿದಿದ್ದಾರೆ.
ಅನಿಲ ಬೆಲೆ ಏರಿಕೆಯನ್ನು ಖಂಡಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮುಂದೆ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಮಹಿಳಾ ಮಹಿಳಾ ಕಾಂಗ್ರೇಸ್ ಘಟಕದಿಂದ ಪ್ರತಿಭಟನೆಯನ್ನು ಮಾಡಲಾಯಿತು.
ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಹಾನಗರ ಜಿಲ್ಲಾ ಘಟಕದಿಂದ ವಿಭಿನ್ನವಾಗಿ ಪ್ರತಿಭಟನೆಯನ್ನು ಮಾಡಲಾಯಿತು.
ಸಾಮಾನ್ಯವಾಗಿ ನಾಲ್ಕೈದು ಜನ ಸೇರಿಕೊಂಡು ಘೋಷಣೆಗಳನ್ನು ಕೂಗಿ ಮನವಿ ಸಲ್ಲಿಸಿ ಹೋರಾಟ ಮಾಡುತ್ತಾರೆ.
ಆದರೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಹಿಳಾ ಕಾಂಗ್ರೇಸ್ ಘಟಕದವರು ಸೇರಿಕೊಂಡು ವಿಭಿನ್ನವಾಗಿ ಹೋರಾಟವನ್ನು ಮಾಡಿದರು. ಜಿಲ್ಲಾಧಿಕಾರಿ ಕಚೇರಿ ಮುಂದೆ ಕಟ್ಟಿಗೆಯ ಒಲೆಯೊಂದನ್ನು ಹೂಡಿ ಬೆಂಕಿ ಹಚ್ಚಿ ಕಟ್ಟಿಗೆ ಒಲೆಯ ಯಲ್ಲಿಯೇ ಉಪ್ಪಿಟ್ಟು ಚಹಾ ಮಾಡಿ ಬೆಲೆ ಏರಿಕೆಯನ್ನು ವಿಭಿನ್ನವಾಗಿ ಖಂಡಿಸಿ ಪ್ರತಿಭಟನೆ ಮಾಡಿದರು.
ಕಟ್ಟಿಗೆಯ ಒಲೆಯಲ್ಲಿ ಹೀಗೆ ಅಡುಗೆ ಮಾಡಿ ಕೇಂದ್ರ ಸರ್ಕಾರದ ವಿರುದ್ದು ಘೋಷಣೆಗಳನ್ನು ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದರು. ದೀಪಾ ಗೌರಿ ಅವರ ನೇತ್ರತ್ವದಲ್ಲಿ ನಡೆದ ಈ ಒಂದು ಪ್ರತಿಭಟನೆಯಲ್ಲಿ ಲಕ್ಷ್ಮೀ ಗುತ್ತೆ, ಜಯಶ್ರೀ ದೇಶಮಾನೆ, ಅಕ್ಕಮ್ಮಾ ಕಂಬಳಿ,ನಿರ್ಮಲಾ ಹೊಂಗಲ,ರಜೀಯಾಬೇಗಂ ಸಂಗೋಳ್ಳಿ,ಪ್ರೀತಿ ಜೈನ್,ರೇಣುಕಾ ಕಳ್ಳಿಮನಿ,ಚೇತನಾ ಜಗದಾಳೆ ಸೇರಿದಂತೆ ಹಲವರು ಪಾಲ್ಗೊಂಡು ಬೆಲೆ ಏರಿಕೆಯನ್ನು ಖಂಡಿಸಿದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ಮನವಿಯನ್ನು ನೀಡಿದರು.