ಧಾರವಾಡ –
ಶಿವಮೊಗ್ಗ ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷಾ ಕೊಲೆ ಪ್ರಕರಣಕ್ಕೆ ರಾಜ್ಯಾದ್ಯಂತ ತೀವ್ರವಾಗಿ ಖಂಡನೆ ವ್ಯಕ್ತವಾಗಿದ್ದು ಇನ್ನೂ ಈ ಒಂದು ಘಟನೆಯನ್ನು ಖಂಡಿಸಿ ಧಾರವಾಡ ದಲ್ಲೂ ಪ್ರತಿಭಟನೆ ಮಾಡಲಾಯಿತು

ಹೌದು ಘಟನೆಯನ್ನು ಖಂಡಿಸಿ ಧಾರವಾಡದಲ್ಲಿ ಬಜರಂಗ ಮತ್ತು ಹಿಂದು ಜಾಗರಣ ವೇದಿಕೆಯವರು ಪ್ರತಿಭಟನೆ ಮಾಡಿದರು.ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿ ಘಟನೆ ಯನ್ನು ಖಂಡಿಸಿದರು
ಹರ್ಷಾ ಅಮರ್ ರಹೆ ಎಂದು ಘೋಷಣೆ ಹಾಕಿದ ಕಾರ್ಯಕರ್ತರು ದುರ್ಷ್ಕರ್ಮಿಗಳ ವಿರುದ್ಧ ಘೋಷಣೆ ಕೂಗಿ ರಾಜ್ಯದಲ್ಲಿ ಎಸ್ ಡಿ ಪಿ ಐ ಹಾಗೂ ಪಿ ಎಫ್ ಐ ಸಂಘಟನೆ ಬ್ಯಾನ್ ಮಾಡಲು ಒತ್ತಾಯವನ್ನು ಮಾಡಿದರು



ಪ್ರತಿಭಟನೆ ಯಲ್ಲಿ ಸಂಘಟನೆಗಳ ಕಾರ್ಯಕರ್ತರು ಮುಖಂಡರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು