ನೂತನ BJP ಜಿಲ್ಲಾಧ್ಯಕ್ಷರಿಗೆ ಶಾಸಕ ಅರವಿಂದ ಬೆಲ್ಲದ ರಿಂದ ಅಭಿನಂದನೆ – ಅಧಿಕಾರದ ಚುಕ್ಕಾಣಿಗೆ ನಾನು ಯಾವತ್ತೂ ಜೋತುಬಿದ್ದವನಲ್ಲ ಎಂದರು ಶಾಸಕರು…..

Suddi Sante Desk

ಹುಬ್ಬಳ್ಳಿ ಧಾರವಾಡ –

ಹುಬ್ಬಳ್ಳಿ – ಧಾರವಾಡ ಜಿಲ್ಲಾ ಭಾರತೀಯ ಜನತಾ ಪಕ್ಷದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಸಂಜಯ ಕಪಟಕರ ಅವರಿಗೆ ಶಾಸಕ‌ ಅರವಿಂದ ಬೆಲ್ಲದ ಹೃತ್ಪೂರ್ವಕ ಅಭಿನಂ ದನೆಗಳನ್ನು ಸಲ್ಲಿಸಿದ್ದಾರೆ.ಎರಡು ವರ್ಷಗಳ ಕಾಲ ಜಿಲ್ಲಾ ಧ್ಯಕ್ಷನಾಗಿ ಪಕ್ಷ ಸಂಘಟನೆ ವಿಚಾರದಲ್ಲಿ ವಹಿಸಿದ ಜವಾ ಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿ,ಜಿಲ್ಲೆ ಯಲ್ಲಿ ಬಿಜೆಪಿಗೆ ಹೆಚ್ಚಿನ ರೀತಿಯಲ್ಲಿ ಬಲ ತುಂಬುವ ಕೆಲಸ ಮಾಡಿದ ತೃಪ್ತಿ ನನಗಿದೆ.ಪಕ್ಷ ಸಂಘಟನಾತ್ಮಕ ವಿಚಾರದಲ್ಲಿ ಜಿಲ್ಲೆಯಾದ್ಯಂತ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನನ್ನ ಬೆನ್ನಿಗೆ ನಿಂತು ಸಹಕರಿಸಿದ್ದಾರೆ. ಅವರೆಲ್ಲರಿಗೂ ನಾನು ತುಂಬು ಹೃದಯದ ಧನ್ಯವಾದಗಳು ಅರ್ಪಿಸುತ್ತೇನೆ ಎಂದಿದ್ದಾರೆ

ಪಕ್ಷ ಸಂಘಟನೆ ಹಾಗೂ ನನ್ನ ಕ್ಷೇತ್ರದ ಅಭಿವೃದ್ಧಿಗಳನ್ನು ಜೊತೆ ಜೊತೆಯಾಗಿ ನಿರ್ವಹಿಸಿ ಪಕ್ಷದ ಕೇಂದ್ರದ ವರಿಷ್ಠರ ಮೆಚ್ಚುಗೆ ಗಳಿಸಿದ ಭಾವ ನನ್ನಲ್ಲಿದೆ.ಅಧಿಕಾರದ ಚುಕ್ಕಾಣಿಗೆ ನಾನು ಯಾವತ್ತೂ ಜೋತುಬಿದ್ದವನಲ್ಲ ಬಯಸಿ ಬಂದ ಸ್ಥಾನಗಳನ್ನು ಅತ್ಯಂತ ಪ್ರಾಮಾಣಿಕವಾಗಿ ನಿಸ್ವಾರ್ಥವಾಗಿ ನಿರ್ವಹಿಸಿದ್ದೇನೆ.ಅಧಿಕಾರ ಹರಿಯುವ ನೀರಿನಂತೆ ಇರಬೇ ಕು ಆಗಲೇ ಆ ಸ್ಥಾನಕ್ಕೆ ಗೌರವ ಮತ್ತು ಘನತೆ ಎಂದು ಉಲ್ಲೇಖ ಮಾಡಿದ್ದಾರೆ

ಇನ್ನೂ ಬೆಳೆಯುವವನು ಮತ್ತೊಬ್ಬರನ್ನು ಬೆಳೆಸುತ್ತಾನೆ

ಆತ್ಮೀಯರಾದ ಸಂಜಯ ಕಪಟಕರ ಅವರು ಒಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಅವರು ನನ್ನ ಕ್ಷೇತ್ರದಲ್ಲೇ ಇದ್ದು ನನ್ನ ಜೊತೆಯಲ್ಲಿ ಪಕ್ಷ ಸಂಘಟನೆಗಾಗಿ ದುಡಿದ ಶ್ರಮ ಜೀವಿ. ತುಂಬಾ ಹತ್ತಿರದಿಂದ ಬಲ್ಲವನಾಗಿರುವುದರಿಂದ ಈ ಸ್ಥಾನಕ್ಕೆ ಸಂಜಯ ಕಪಟಕರ ರವರು ಸೂಕ್ತ ಆಯ್ಕೆ ಇದು ನನಗೆ ಹೆಚ್ಚಿನ ಸಂತಸ ತಂದಿದೆ.ಅವರು ಪಕ್ಷಕ್ಕೆ ಪ್ರಾಮಾಣಿ ಕವಾಗಿ ಶ್ರಮಿಸಬಲ್ಲರು ಎಂಬ ವಿಶ್ವಾಸವೂ ಇದೆ. ನಾವೆಲ್ಲ ರೂ ಒಟ್ಟಾಗಿ ಸೇರಿ,ಪಕ್ಷಕ್ಕೆ ಇನ್ನಷ್ಟು ಶಕ್ತಿ ತುಂಬುವ ಕೆಲಸ ಮಾಡೋಣ.ನಿಮ್ಮ ಬೆಲ್ಲದ ಎಂದಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.