ಬೆಂಗಳೂರು –
ಶಿಕ್ಷಕರಾಗಿದ್ದ ಸಮಯದಲ್ಲಿ ಹಿಂದೊಮ್ಮೆ ಶಾಸಕ ರೊಬ್ಬರ ಆಪ್ತಸಹಾಯಕರಾಗಿದ್ದ ಸಧ್ಯ ಇವತ್ತು ಶಾಸಕರಾಗಿರುವ ಶರಣು ಸಲಗಾರ ಅವರಿಗೆ ಕರ್ನಾ ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.ಹೌದು ಬಸವ ಕಲ್ಯಾಣ ವಿಧಾನ ಸಭಾ ಕ್ಷೇತ್ರದಿಂದ ಇಂದು ಶಾಸಕ ರಾಗಿ ಆಯ್ಕೆಯಾದ ಶರಣ ಸಲಗಾರ ಅವರಿಗೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.

ಕಲಬುರ್ಗಿ ಜಿಲ್ಲೆಯ ಕಮಲಾಪೂರ ತಾಲ್ಲೂಕಿನ ವಿ ಕೆ ಸಲಗರ ಗ್ರಾಮದಲ್ಲಿ ಜನಿಸಿರುವ ಶರಣು ಸಲಗರ 2002 ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಸಮ ಯದಲ್ಲಿ ಶಾಸಕರೊಬ್ಬರಿಗೆ ಆಪ್ತ ಸಹಾಯಕರರಾಗಿ ನಂತರ ಜಿಲ್ಲಾ ಪಂಚಾಯತನ ಅಧ್ಯಕ್ಷರಿಗೆ ಸಹಾಯ ಕರಾಗಿ ನಂತರ ಜೇವರ್ಗಿ ಶಾಸಕರಿಗೆ ಆಪ್ತ ಸಹಾಯ ಕರಾಗಿ ಪ್ರೌಢಶಾಲೆಯ ಶಿಕ್ಷಕರಾಗಿ ಪದೋನ್ನತಿ ಹೊಂದಿ 2014 ರಲ್ಲಿ ಹುದ್ದೆಗೆ ರಾಜೀನಾಮೆ ನೀಡಿ ಈಗ ಬಸವ ಕಲ್ಯಾಣ ವಿಧಾನ ಸಭಾ ಕ್ಷೇತ್ರದ ಶಾಸಕ ರಾಗಿದ್ದಾರೆ ಶರಣು ಸಲಗಾರ.

ಹೊಸದಾಗಿ ಶಾಸಕರಾಗಿ ಆಯ್ಕೆಯಾದ ಇವರಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಹಾಗೂ ರಾಜ್ಯದ ಪದಾಧಿಕಾರಿಗಳಿಂದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ